ಒಂದು ಬಾರಿ ಅಪಘಾತದಿಂದ ಪಾರಾದರೆ ಜೀವ ಉಳಿಯಿತು ಎಂದು ಖುಷಿ ಪಡುತ್ತೇವೆ. ಅಂತಹದ್ದರಲ್ಲಿ ಇಲ್ಲೊಬ್ಬ ಬೈಕ್ ಸವಾರ ಒಂದೇ ದಿನ ಎರಡು ಅಪಘಾತದಿಂದ ಪಾರಾಗಿದ್ದಾನೆ. ಈ ಘಟನೆ ಮಂಗಳೂರಿನ ಬಳಿ ನಡೆದಿದೆ. ಬೈಕ್ ಸವಾರ ಮಂಗಳೂರಿನ ಮಲ್ಯಾರಪದವು ಮಾರ್ಗವಾಗಿ ಮಲಾರ್ಗೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ. ಅಪಘಾತದಿಂದ ಬಚಾವ್ ಆದ ವ್ಯಕ್ತಿಯನ್ನು ಮಲಾರ್ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ.
ವ್ಯಕ್ತಿ ಸ್ಕೂಟರ್ನಲ್ಲಿ ತೆರಳುತ್ತಿದ್ದ ವೇಳೆ ಇಂದು ಘಟನೆ ನಡೆದಿದೆ. ಮಲ್ಯಾರಪದವು ಊರಿನ ಶಾಲೆಯ ಬಳಿ ವೇಗವಾಗಿ ಹೋಗುತ್ತಿದ್ದ ಸವಾರನ ಎದುರು ಸಿಟಿ ಬಸ್ ಒಂದು ರೋಡ್ ಕ್ರಾಸ್ ಮಾಡುತ್ತಿತ್ತು. ಈ ವೇಳೆ ಕೂದಲೆಳೆ ಆಂತರದಿಂದ ಬೈಕ್ ಸವಾರ ತಪ್ಪಿಸಿಕೊಂಡಿದ್ದಾನೆ. ಅಲ್ಲಿಂದ ಮುಂದಕ್ಕೆ ಹೋದ ಬೈಕ್ ಸವಾರ, ಬೈಕ್ ಅನ್ನು ನಿಯಂತ್ರಣಕ್ಕೆ ತರಲಾಗದೆ ಮೀನಿನ ಕಾರ್ಖಾನೆ ಬಳಿ ಇದ್ದ ಅಂಗಡಿ ಮತ್ತು ಮರದ ನಡುವೆ ಇದ್ದ ಸಣ್ಣ ಜಾಗದಲ್ಲಿ ಸ್ಕೂಟರ್ಅನ್ನು ನುಗ್ಗಿಸಿಕೊಂಡು ಹೋಗಿದ್ದಾನೆ. ಇದರ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅದೃಷ್ಟವಶಾತ್ ಒಂದೇ ದಿನ ಎರಡು ಅಪಘಾತದಿಂದ ಪಾರಾದ ಬೈಕ್ ಸವಾರನನ್ನು ಕಂಡು ಕಂಡು ನೆಟ್ಟಿಗರು ಬೆರಗಾಗಿದ್ದಾರೆ.
Published On - 5:19 pm, Mon, 10 January 22