Viral Video : ನನ್ನತ್ತಲೇ ನೋಡು, ನನಗೇ ಕೊಡು, ನನಗೇ ಮೊದಲು ಕುಡಿಸು, ನನಗೇ ಉಣಿಸು, ನನಗೇ ಮುದ್ದು ಮಾಡು, ನನ್ನನ್ನಷ್ಟೇ ಮಲಗಿಸಿಕೋ, ನನ್ನನ್ನು ಬಿಟ್ಟು ಬೇರೆ ಯಾರ ಕಡೆಗೂ ಗಮನ ಕೊಡಬೇಡ ಎಂದು ಮಕ್ಕಳಂತೆ ಈ ಪ್ರಾಣಿಗಳೂ ಹೀಗೆ ದುಂಬಾಲು ಬೀಳುತ್ತವೆ ಎನ್ನುವುದು ನಿಮಗೆ ಗೊತ್ತೇ? ನೋಡಿಲ್ಲವಾದಲ್ಲಿ ಈ ವಿಡಿಯೋ ನೋಡಿ. ಈ ಪ್ರಾಣಿಪೋಷಕ ಜಾಗ್ವಾರನ ಮರಿಗೆ ಹಾಲು ಕುಡಿಸುತ್ತಿದ್ದರೆ ಈ ಹುಲಿಮರಿಗೆ ಹೊಟ್ಟೆಯಾಳದಿಂದ ಮುದ್ದಾದ ಸಂಕಟ ಉಕ್ಕೇರುತ್ತಿದೆ!
ಅವನ ಕಣ್ಣಿಗೋ ಮೂಗಿಗೋ ಬಾಯಿಗೋ ಕಿವಿಗೋ ಹುಲಿಯ ಉಗುರು ತಾಕಿದರೆ ಏನು ಗತಿ? ಎನ್ನಿಸುತ್ತದೆಯಲ್ಲವೆ ಈ ವಿಡಿಯೋ ನೋಡಿದಾಗ. ಅವ ಮಾತ್ರ ಯಾವುದೂ ಆತಂಕ, ಭಯವಿಲ್ಲದೆ ಆರಾಮಾಗಿ ಜಾಗ್ವಾರ್ನ ಮರಿಗೆ ಹಾಲು ಕುಡಿಸುತ್ತಿದ್ದಾನೆ.
ಮೊದಲು ನನಗೆ ಕೊಡಬೇಕಿತ್ತು ಅಂತಲೋ ಇನ್ನಷ್ಟು ಹಾಲು ಕೊಡು ಎಂತಲೋ ಹುಲಿ ಅವನ ಮೇಲೆರಗಿ ಮುದ್ದುಮಾಡುತ್ತಿದೆ. ಬಹುಶಃ ಹುಲಿಮುದ್ದು ಎಂದರೆ ಇದೇ ಇರಬೇಕು ಅಲ್ಲವೆ?
ಈ ವಿಡಿಯೋ ಅನ್ನು ಸುಮಾರು 3,000 ಹೆಚ್ಚು ಜನರು ನೋಡಿದ್ದಾರೆ. ಇದನ್ನು ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 3:40 pm, Wed, 7 December 22