Viral Video: ಟ್ರೆಡ್ ಮಿಲ್ ಮೇಲೆ  ಓಡುವಂತೆ ಒತ್ತಾಯಿಸಿ ಮಗ ಪ್ರಾಣವನ್ನೇ ಬಲಿ ಪಡೆದುಕೊಂಡ ತಂದೆ

ಮೂರು ವರ್ಷಗಳ ಹಿಂದೆ ನಡೆದಂತಹ ಆಘಾತಕಾರಿ ಘಟನೆಯೊಂದರ ವಿಡಿಯೋವೊಂದು ಇದೀಗ ವೈರಲ್ ಆಗಿದ್ದು, ಅಮೇರಿಕಾದ ನ್ಯೂಜೆರ್ಸಿಯ ವ್ಯಕ್ತಿಯೊಬ್ಬ ಆತನ ಮಗ ದಪ್ಪಗಾಗಿದ್ದಾನೆ ಎಂಬ ಕಾರಣಕ್ಕೆ, ಒತ್ತಾಯ ಪೂರ್ವಕವಾಗಿ ಮಗನನ್ನು ಟ್ರೆಡ್ಮಿಲ್ ನಲ್ಲಿ ಓಡಿಸಿದ್ದಾನೆ. ಪರಿಣಾಮವಾಗಿ  ಎದೆ, ಹೊಟ್ಟೆ, ಹೃದಯ, ಶ್ವಾಸಕೋಶ ಮತ್ತು ಯಕೃತ್ತಿಗೆ ಬಲವಾದ ಏಟು ಬಿದ್ದು ಬಾಲಕ ಸಾವನ್ನಪ್ಪಿದ್ದಾನೆ. 

Viral Video: ಟ್ರೆಡ್ ಮಿಲ್ ಮೇಲೆ  ಓಡುವಂತೆ ಒತ್ತಾಯಿಸಿ ಮಗ ಪ್ರಾಣವನ್ನೇ ಬಲಿ ಪಡೆದುಕೊಂಡ ತಂದೆ
Edited By:

Updated on: May 03, 2024 | 4:23 PM

ಅನೇಕರು ಬೊಜ್ಜು ಕರಗಿಸಿ ದೇಹವನ್ನು ಫಿಟ್ ಆಗಿರಿಸಲು ಜಿಮ್ ಮೊರೆ ಹೋಗುತ್ತಾರೆ. ಅಲ್ಲಿ ಕಷ್ಟ ಪಟ್ಟು ವರ್ಕ್ಔಟ್ ಮಾಡುವ ಮೂಲಕ ದೇಹ ಸೌಂದರ್ಯವನ್ನು ಕಾಪಾಡಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಮಗ ಕೂಡಾ ದಪ್ಪಗಿದ್ದಾನೆ ಎಂದು ಆತನ ಬೊಜ್ಜು ಕರಗಿಸಲು 6 ವರ್ಷದ ಬಾಲಕನನ್ನು ಬಲವಂತವಾಗಿ ಟ್ರೆಡ್ ಮಿಲ್ ಮೇಲೆ ಓಡಿಸಿ ವರ್ಕ್ಔಟ್ ಮಾಡಿಸಿದ್ದಾನೆ. ವೇಗವಾಗಿ ಟ್ರೆಡ್ ಮಿಲ್ ಮೇಲೆ ಓಡಿದ ಪರಿಣಾಮ ಎದೆ, ಹೊಟ್ಟೆ, ಹೃದಯ, ಶ್ವಾಸಕೋಶ ಮತ್ತು ಯಕೃತ್ತಿಗೆ ಬಲವಾಗಿ ಏಟು ಬಿದ್ದು ಬಾಲಕ ಸಾವನ್ನಪ್ಪಿದ್ದಾನೆ.

ಈ ಆಘಾತಕಾರಿ ಘಟನೆ ಏಪ್ರಿಲ್ 2, 2021 ರಲ್ಲಿ ಅಮೇರಿಕಾದ ನ್ಯೂಜೆರ್ಸಿಯಲ್ಲಿ ನಡೆದಿದ್ದು, ಇಲ್ಲಿನ ಅಟ್ಲಾಂಟಿಕ್ ಹೈಟ್ಸ್ಕ್ಲಬ್ಹೌಸ್ ಫಿಟ್ನೆಸ್ ಸೆಂಟರ್ ಅಲ್ಲಿದ್ದ ಸಿಸಿ ಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ. ಕ್ರಿಸ್ಟೋಫರ್ ಗ್ರೆಗರ್ ಎಂಬ ವ್ಯಕ್ತಿ ಮಗ ತುಂಬಾ ದಪ್ಪಗಾಗಿದ್ದಾನೆ ಎಂದು ತನ್ನ 6 ವರ್ಷದ ಮಗನನ್ನು ಫಿಟ್ನೆಸ್ ಸೆಂಟರ್ ಒಂದರಲ್ಲಿ ಒತ್ತಾಯಪೂರ್ವಕವಾಗಿ ಟ್ರೆಡ್ಮಿಲ್ ಮೇಲೆ ವೇಗವಾಗಿ   ಓಡಿಸಿದ್ದಾನೆ. ವೇಗವಾಗಿ ಓಡಿದ ಪರಿಣಾಮ ಪುಟ್ಟ ಬಾಲಕನ ಎದೆ, ಶ್ವಾಸಕೋಶ ಮತ್ತು ಯಕೃತ್ತಿಗೆ ತೀವ್ರವಾದ ಪೆಟ್ಟು ಬಿದ್ದು ಮೃತಪಟ್ಟಿದ್ದಾನೆ. ಮಕ್ಕಳ ಬಗ್ಗೆ ನಿರ್ಲಕ್ಷ್ಯ ವಹಿಸಿದ ಆರೋಪದ ಅಡಿಯಲ್ಲಿ  ಗ್ರೆಗರ್ ಅನ್ನು ಪೊಲೀಸರು ಜುಲೈ  2021 ರಂದು ಬಂಧಿಸುತ್ತಾರೆ,  ಇದೀಗ ಈ ಪ್ರಕರಣದ ಬಗ್ಗೆ ತನಿಖೆ ಹಾಗೂ ಆರೋಪಿಯ ವಿಚಾರಣೆ ನಡೆಯುತ್ತಿದ್ದು, ಆರೋಪ ಸಾಬೀತಾದರೆ ಗ್ರೆಗರ್ ಜೀವಾವಧಿ ಶಿಕ್ಷೆಗೆ ಗುರಿಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: ದೇಶ ಸೇವೆಯೇ ಈಶ ಸೇವೆ; ಊಟವನ್ನು ಅರ್ಧಕ್ಕೆ ಬಿಟ್ಟು ಕರ್ತವ್ಯಕ್ಕೆ ಹಾಜರಾದ ಸೈನಿಕ

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

@Collin Rugg ಎಂಬ ಎಕ್ಸ್ ಖಾತೆಯಲ್ಲಿ ಈ ಕುರಿತ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಕೋರ್ಟ್ ವಿಚಾರಣೆಯ ವೇಳೆ  ಗ್ರೆಗರ್ ತನ್ನ ಮಗನನ್ನು ಬಲವಂತವಾಗಿ ಟ್ರೆಡ್ಮಿಲ್ ಮೇಲೆ ಓಡಿಸುವಂತಹ ವಿಡಿಯೋ ದೃಶ್ಯವನ್ನು ಪ್ಲೇ ಮಾಡಲಾಗಿದ್ದು, ವಿಡಿಯೋವನ್ನು ನೋಡಿ ಅಲ್ಲೇ ಇದ್ದ ಪುಟ್ಟ ಬಾಲಕನ ತಾಯಿ ಕಂದಮ್ಮನನ್ನು ನೆನೆದು ಕಣ್ಣೀರು ಹಾಕಿದ್ದಾರೆ. ಈ ಹೃದಯ ವಿದ್ರಾವಕ ದೃಶ್ಯ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ