ಹಾವು ಕಚ್ಚಿ ಯುವಕ ಸಾವು,  ಬದುಕಬಹುದು ಎಂದು ಶವವನ್ನು ಗಂಗಾ ನದಿಗೆ ಮುಳುಗಿಸಿದ ಕುಟುಂಬ 

ಈ ಘಟನೆಯನ್ನು  ಮೂಢ ನಂಬಿಕೆಯ ಪರಮಾವಧಿ ಅಂದ್ರೂ ತಪ್ಪಿಲ್ಲ. ಉತ್ತರ ಪ್ರದೇಶದ 20 ವರ್ಷದ ಯುವಕನೊಬ್ಬ ಹಾವು ಕಡಿತದಿಂದ ಸಾವನ್ನಪ್ಪಿದ್ದು,  ಈ ಶವವನ್ನು ಗಂಗಾ ನದಿಯಲ್ಲಿ ಮುಳುಗಿಸಿಟ್ಟರೆ, ದೇಹಕ್ಕೆ ಏರಿದ ವಿಷವೆಲ್ಲಾ ಹೋಗಿ ಆತ ಮತ್ತೆ ಬದುಕಿ ಬರುತ್ತಾನೆ ಎಂದು ಯಾರೋ ಹೇಳಿದ ಮಾತನ್ನು ಕೇಳಿ,  ಮೃತ ಯುವಕನ ಕುಟುಂಬಸ್ಥರು ಶವವನ್ನು ಹಗ್ಗದಲ್ಲಿ ಕಟ್ಟಿ ಎರಡು ದಿನಗಳ  ಗಂಗಾ ನದಿ ನೀರಿನಲ್ಲಿರಿಸಿದ್ದಾರೆ. 

ಹಾವು ಕಚ್ಚಿ ಯುವಕ ಸಾವು,  ಬದುಕಬಹುದು ಎಂದು ಶವವನ್ನು ಗಂಗಾ ನದಿಗೆ ಮುಳುಗಿಸಿದ ಕುಟುಂಬ 
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: May 03, 2024 | 4:40 PM

ಯಾವುದೇ ವಿಷಯಗಳಲ್ಲಿಯೂ  ಅತಿಯಾದ ಮೂಢನಂಬಿಕೆ ಒಳ್ಳೆಯದಲ್ಲ. ಸಾಕಷ್ಟು ಜನರು ಇಂತಹ ನಂಬಿಕೆಗಳಿಂದ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಾರೆ. ಅದೇ ರೀತಿ ಇಲ್ಲೊಂದು ಮೂಢನಂಬಿಕೆಯ ಪರಮಾವಧಿಗೆ ಸಂಬಂಧಿಸಿದ ಸುದ್ದಿಯೊಂದು ವೈರಲ್ ಆಗಿದ್ದು, 20 ವರ್ಷದ ಯುವಕನೊಬ್ಬ ಹಾವು ಕಡಿತದಿಂದ ಮೃತಪಟ್ಟಿದ್ದು, ಆತ ಬದುಕಿ ಬರುತ್ತಾನೆಂದು ನಂಬಿ ಕುಟುಂಬಸ್ಥರು ಆತನ ಶವವನ್ನು ಹಗ್ಗದಲ್ಲಿ ಕಟ್ಟಿ ಎರಡು ದಿನಗಳ ಕಾಲ ಗಂಗಾನದಿ ನೀರಿನಲ್ಲಿ ಮುಳುಗಿಸಿಟ್ಟಿದ್ದಾರೆ.

ಈ ಘಟನೆ ಉತ್ತರ ಪ್ರದೇಶದ ಬುಲಂದ್ ಶಹರ್ ನ ಜಹಾಂಗೀರಾಬಾದಿನಲ್ಲಿ ನಡೆದಿದ್ದು, ಏಪ್ರಿಲ್ 26 ರಂದು ಮೋಹಿತ್ ಎಂಬ 20 ವರ್ಷ ವಯಸ್ಸಿನ ಯುವಕನೊಬ್ಬ ಮತ ಚಲಾಯಿಸಿ ಬಂದು ಹೊಲದ ಕಡೆಗೆ ಹೋಗಿರುತ್ತಾನೆ.  ಅಲ್ಲಿ ಆತನಿಗೆ ಹಾವು ಕಡಿದಿದ್ದು, ಆ ತಕ್ಷಣ ಆ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಯುವಕ ಮೃತಪಟ್ಟಿದ್ದಾನೆ.

ಇದನ್ನೂ ಓದಿ: ಟ್ರೆಡ್ ಮಿಲ್ ಮೇಲೆ ಓಡುವಂತೆ ಒತ್ತಾಯಿಸಿ ಮಗ ಪ್ರಾಣವನ್ನೇ ಬಲಿ ಪಡೆದುಕೊಂಡ ತಂದೆ

ನಂತರ ಹೀಗೆ ಹಾವು ಕಡಿತದಿಂದ ಮೃತಪಟ್ಟವರು ಬದುಕಿಬರಬೇಕಾದರೆ ಹಾಗೂ ಅವರ ದೇಹಕ್ಕೆ ಏರಿದ ವಿಷ ಹೋಗಲಾಡಸಬೇಕಾದರೆ ಮೃತ ದೇಹವನ್ನು ಗಂಗಾ ನದಿನೀರಿನಲ್ಲಿ ಮುಳುಗಿಸಬೇಕು ಎಂದು ಯಾರೋ ಹೇಳಿದ ಮೂಢ ನಂಬಿಕೆಯ ಮಾತನ್ನು ನಂಬಿ, ಮೃತ ಯುವಕನ ಕುಟುಂಬಸ್ಥರು ಮೃತ ದೇಹವನ್ನು  ಹಗ್ಗದಲ್ಲಿ ಕಟ್ಟಿ ಎರಡು ದಿನಗಳ ಕಾಲ ಗಂಗಾ ನದಿ ನೀರಿನಲ್ಲಿ ಇರಿಸಿದ್ದಾರೆ. ನಂತರ ಉಸಿರು ಮರಳಿ ಬರದಿದ್ದಾಗ ಆ ಯುವಕನ ಅಂತ್ಯ ಸಂಸ್ಕಾರವನ್ನು ಅಲ್ಲಿಯೇ ನೆರವೇರಿಸಲಾಗಿದೆ. ಈ ಘಟನೆ ಮೂಢನಂಬಿಕೆಯ ಪರಮಾವಧಿಗೆ ಜ್ವಲಂತ ಉದಾಹರಣೆ ಎಂದರೆ ತಪ್ಪಾಗಲಾರದು.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ