Guinness Records: 3 ಸೆಕೆಂಡುಗಳ ಒಳಗೆ A ಯಿಂದ Z ವರೆಗೆ ಟೈಪ್ ಮಾಡಿ ಗಿನ್ನೆಸ್ ದಾಖಲೆ ಬರೆದ ಭಾರತೀಯ
ಕೇವಲ ಮೂರು ಸೆಕೆಂಡುಗಳ ಒಳಗೆ ಒಟ್ಟು 26 ಅಕ್ಷರಗಳನ್ನು ಟೈಪ್ ಮಾಡಿದ್ದು, ಇವರ ಸಾಧನೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಣ್ಣು ಮಿಟುಕುವಷ್ಟರ ಒಳಗಡೆ Aಯಿಂದ Z ವರೆಗೆ ಟೈಪ್ ಮಾಡಿದ್ದು, ಇವರ ಈ ಸಾಧನೆಯ ವಿಡಿಯೋ ಇಲ್ಲಿದೆ ನೋಡಿ.
ಹೈದರಾಬಾದ್: ಪ್ರತೀ ದಿನ ಕಂಪ್ಯೂಟರ್ ಮುಂದೆ ಕುಳಿತು ಟೈಪ್ ಮಾಡಿ ಮಾಡಿ ಬೋರಾಗಿದ್ಯಾ? ಹಾಗಿದ್ರೆ ಈ ಚಾಲೆಂಜ್ ಪ್ರಯತ್ನಿಸಿ. ಹೌದು ಹೈದರಾಬಾದ್ನ ಎಸ್‌ಕೆ ಅಶ್ರಫ್ ಎಂಬ ವ್ಯಕ್ತಿಯೊಬ್ಬರು ಕ್ಷಣಾರ್ಧದಲ್ಲಿ ಅಂದರೆ ಕೇವಲ 3 ಸೆಕೆಂಡ್ ಒಳಗೆ ಇಂಗ್ಲೀಷ್ನ A-Z ಒಟ್ಟು 26 ಅಕ್ಷರಗನ್ನು ಟೈಪ್ ಮಾಡಿ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. ಸದ್ಯ ಇವರ ಸಾಧನೆಯನ್ನು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಸದ್ಯ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಕೇವಲ ಮೂರು ಸೆಕೆಂಡುಗಳ ಒಳಗೆ ಒಟ್ಟು 26 ಅಕ್ಷರಗಳನ್ನು ಟೈಪ್ ಮಾಡಿದ್ದು, ಇವರ ಸಾಧನೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಣ್ಣು ಮಿಟುಕುವಷ್ಟರ ಒಳಗಡೆ Aಯಿಂದ Z ವರೆಗೆ ಟೈಪ್ ಮಾಡಿದ್ದು, ಇವರ ಈ ಸಾಧನೆಯ ವಿಡಿಯೋ ಇಲ್ಲಿದೆ ನೋಡಿ.
View this post on Instagram
ಇದನ್ನೂ ಓದಿ: ಚಲಿಸುತ್ತಿರುವ ರೈಲಿನಲ್ಲಿ ಪತ್ನಿಗೆ ತ್ರಿವಳಿ ತಲಾಖ್ ನೀಡಿ, ಥಳಿಸಿ ಪರಾರಿಯಾದ ಪತಿ
ವಿಡಿಯಯೋದಲ್ಲಿ ಅಶ್ರಫ್ ಅವರು ಟೈಪ್ ಮಾಡಲು ಸಿದ್ಧವಾಗಿ ಕುಳಿತಿರುವುದನ್ನು ಕಾಣಬಹುದು. ಸಮಯ ಪ್ರಾರಂಭವಾಗುತ್ತಿದ್ದಂತೆ 3 ಸೆಕೆಂಡ್ಗಳ ಒಳಗೆ Zನಿಂದ ಪ್ರಾರಂಭಿಸಿ A ವೆರೆಗೆ ಟೈಪ್ ಮಾಡಿರುವುದು ಸೆರೆಯಾಗಿದೆ.
ಈ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗುತ್ತಿದ್ದಂತೆ ಸಾಕಷ್ಟು ನೆಟ್ಟಿಗರು ಪ್ರತಿಕ್ರಿಯಿಸಿದ್ದು, ಅವರ ಅದ್ಭುತ ಪ್ರದರ್ಶನಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ಮೇ 2 ರಂದು ಹಂಚಿಕೊಳ್ಳಲಾದ ವೀಡಿಯೊ ಈಗಾಗಲೇ 41 ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ. ಇದಲ್ಲದೇ ಒಂದೇ ದಿನದಲ್ಲಿ 10 ಲಕ್ಷಕ್ಕೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ