Cockroach : ಯಕ್! ಆ ಜಿರಳೆಯ ಪಕ್ಕದಲ್ಲಿ ಗಮನಿಸಿ, ಎಗ್ ಸ್ಯಾಕ್ನಂತೆ ಕಾಣುತ್ತಿದೆ. ಅದು ಸ್ಯಾಕ್ ಇರಲಿಕ್ಕಿಲ್ಲ ಮೊಟ್ಟೆಯೇ ಇರಬೇಕು. ಹೌದು ನೀವು ಹೇಳಿದ್ದು ಸರಿ, ಗೂಗಲ್ ಇಮೇಜ್ ಮಾಡಿ ನೋಡಿದೆ ಅದು ಸ್ಯಾಕ್. ಈ ಸಲಾಡ್ ಒದಗಿಸಿದ ಕಂಪೆನಿಯ ವಿರುದ್ಧ ಕ್ರಮ ಕೈಗೊಳ್ಳಲೇಬೇಕು. ನೀವು ಇಷ್ಟು ಅಸಹ್ಯವಾದ ಆಹಾರವನ್ನು ತಿಂದು ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಇದೆ. ಆರೋಗ್ಯ ಇಲಾಖೆಗೆ ಈ ಕಂಪೆನಿಯ ಬಗ್ಗೆ ದೂರು ನೀಡಿ. ಸಲಾಡ್ನೊಳಗೆ ಬಂದು ಜಿರಳೆ ಮೊಟ್ಟೆ ಇಟ್ಟಿತೇ?. ಈಗಾಗಲೇ ಅದೆಷ್ಟು ಮೊಟ್ಟೆಗಳು ನಿಮ್ಮ ಹೊಟ್ಟೆ ಸೇರಿದವೋ? ಅಂತೆಲ್ಲ ರೆಡ್ಡಿಟ್ನಲ್ಲಿ ಈ ಫೋಟೋ ಪೋಸ್ಟ್ ಮಾಡಿರುವ ವ್ಯಕ್ತಿಗೆ ಸಲಹೆ ನೀಡುತ್ತಿದ್ದಾರೆ ನೆಟ್ಟಿಗರು.
ಇದನ್ನೂ ಓದಿ : Viral Video: ಕಾಮಾಟಿಪುರ; ನನ್ನ ಅಮ್ಮನನ್ನು ಮೊದಲ ಸಲ ನೋಡಿದಾಗ ನನಗೆ 8 ವರ್ಷ
ಕೇಲ್ ಸಲಾಡ್ನಲ್ಲಿ (Kale Salad) ಜಿರಳೆ ಮತ್ತು ಮೊಟ್ಟೆಯ ಚೀಲ (Sack) ಪತ್ತೆಯಾದ ಫೋಟೋವನ್ನು ರೆಡ್ಡಿಟ್ ಖಾತೆದಾರರು 10 ಗಂಟೆಗಳ ಹಿಂದೆ ಪೋಸ್ಟ್ ಮಾಡಿದ್ದಾರೆ. 7,7000 ಜನರು ಲೈಕ್ ಮಾಡಿದ್ದು, 1,400 ಜನರು ಪ್ರತಿಕ್ರಿಯಿಸಿದ್ದಾರೆ. ಅನೇಕರು ತಮಗಾದ ಇಂಥ ಕೆಟ್ಟ ಅನುಭವಗಳನ್ನು ದಂಡಿಯಾಗಿ ಹಂಚಿಕೊಳ್ಳುತ್ತಿರುವುದರಿಂದ ಕಮೆಂಟ್ ಬಾಕ್ಸ್ ಬಂದ್ ಮಾಡಲಾಗಿದೆ.
Was almost finished with my salad when I realized there was a dead fucking bug in it.
byu/vintagepop inWellthatsucks
ನಾನೊಮ್ಮೆ ಚಹಾದ ಅಂಗಡಿಯಲ್ಲಿ ಚಹಾ ಕುಡಿಯುತ್ತಿದ್ದೆ. ಚಹಾವನ್ನು ಇರುವೆಗಳು ಈಜುಗೊಳವನ್ನಾಗಿಸಿಕೊಂಡಿದ್ದವು ಎಂದಿದ್ದಾರೆ ಒಬ್ಬರು. ಇರುವೆಗಳನ್ನು ತಿಂದರೆ ಲಾಭವಿದೆ, ಆದರೆ ಜಿರಳೆಗಳು ವ್ಯಾಕ್ ಎಂದಿದ್ದಾರೆ ಇನ್ನೊಬ್ಬರು. ಮಾವಿನಹಣ್ಣಿನ ಜ್ಯೂಸ್ ಕುಡಿದು ಇನ್ನೇನು ಗ್ಲಾಸ್ ಇಡುವಾಗ ತಳದಲ್ಲಿ ಅದು ಕಂಡಿತು ಎಂದು ಮತ್ತೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ : Viral Puzzle: ಕ್ರಾಸ್ವರ್ಡ್; ಈ ಒಂದು ಶಬ್ದಕ್ಕಾಗಿ ನೆಟ್ಟಿಗರೆಲ್ಲಾ ಸಾಕಷ್ಟು ತಲೆ ಕೆಡಿಸಿಕೊಂಡಿದ್ದಾರೆ, ನೀವು?
ಚಿಕನ್ ಸೂಪ್ ಕುಡಿಯುವಾಗ ನನಗೊಮ್ಮೆ ಜಿರಳೆ ಬಂದಿತ್ತು. ಆದರೂ ನಾನು ಇಂದಿಗೂ ನಿಮ್ಮೆದುರು ಹೀಗೆ ಪ್ರತಿಕ್ರಿಯಿಸುತ್ತಿದ್ದೇನೆ ಎಂದಿದ್ದಾರೆ ಒಬ್ಬರು. ಇಂತ ಕಳಪೆ ಮತ್ತು ಅನಾರೋಗ್ಯಕರ ಪದಾರ್ಥವನ್ನು ಬಡಿಸಿದ ಆ ಹೋಟೆಲ್ ಅನ್ನು ರಿಪೋರ್ಟ್ ಮಾಡಿ ಅಥವಾ ಕಂಪ್ಲೇಂಟ್ ಕೊಡಿ ಎಂದು ಅನೇಕರು ರೆಡ್ಡಿಟ್ ಖಾತೆದಾರರಿಗೆ ಸಲಹೆ ನೀಡಿದ್ದಾರೆ.
ನೀವೇನಂತೀರಿ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ