ತನಗೆ ಹೆಸರಿಟ್ಟು, ತೊಟ್ಟಿಲು ತೂಗಿದ ಮನೆಗೆ 15 ವರ್ಷಗಳ ನಂತರ ಭೇಟಿ, ಹೇಗಿತ್ತು ನೋಡಿ ಈ ವ್ಯಕ್ತಿಯ ಅನುಭವ

ತನ್ನ ಹುಟ್ಟೂರು, ಆಡಿ ಬೆಳೆದ ಸ್ಥಳವನ್ನು ಕಂಡಾಗ ಪ್ರತಿಯೊಬ್ಬರು ಕೂಡ ಭಾವುಕರಾಗುವುದು ಸಹಜ. ತನ್ನ ಬಾಲ್ಯದಲ್ಲಿ ಕಳೆದ ಆ ದಿನಗಳು ಹಾಗೂ ಸ್ಥಳಗಳು ನೋಡಿದಾಗ ಎಂತಹವರ ಕಣ್ಣಂಚಲಿ ನೀರು ತರಿಸುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ವಿದೇಶಿಗನೊಬ್ಬನು ಹದಿನೈದು ವರ್ಷಗಳ ಬಳಿಕ ಭಾರತಕ್ಕೆ ಬಂದಿದ್ದು, ಈ ವೇಳೆ ತಾನು ಆಡಿ ಬೆಳೆದ ಮನೆ ಹಾಗೂ ಬಾಲ್ಯದ ಆ ಸುಂದರ ನೆನಪುಗಳನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತಿದ್ದಾನೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಬಳಕೆದಾರರು ಮಿಶ್ರ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

ತನಗೆ ಹೆಸರಿಟ್ಟು, ತೊಟ್ಟಿಲು ತೂಗಿದ ಮನೆಗೆ 15 ವರ್ಷಗಳ ನಂತರ ಭೇಟಿ, ಹೇಗಿತ್ತು ನೋಡಿ ಈ ವ್ಯಕ್ತಿಯ ಅನುಭವ
ವೈರಲ್ ವಿಡಿಯೋ
Image Credit source: Instagram

Updated on: May 01, 2025 | 5:49 PM

ಎಲ್ಲರಿಗೂ ಕೂಡ ತಮ್ಮ ಬಾಲ್ಯ (childhood) ಹಾಗೂ ಬಾಲ್ಯದ ಸ್ನೇಹಿತರನ್ನು ನೆನಪಿಸಿಕೊಳ್ಳುತ್ತಾರೆ. ತಾವು ಆಟವಾಡಿ ಬೆಳೆದ ಮನೆಯ ವಾತಾವರಣವನ್ನು ಕಂಡಾಗ ಮತ್ತೆ ಆ ಸ್ನೇಹಿತರು ಹಾಗೂ ಬಾಲ್ಯವು ಮರಳಿ ಬರಬಾರದೆ ಎಂದೇನಿಸುತ್ತದೆ. ಕೆಲವರು ಅನಿವಾರ್ಯ ಕಾರಣಕ್ಕೆ ಒಂದು ಊರಿನಿಂದ ಮತ್ತೊಂದು ಊರಿಗೆ ಹೋಗಬೇಕಾಗುತ್ತದೆ. ಈ ವೇಳೆಯಲ್ಲಿ ಹೊಸ ಊರಿನಲ್ಲಿ ಒಳ್ಳೆಯ ಸ್ನೇಹಿತರು ಸಿಕ್ಕರೂ ಕೂಡ ತನ್ನ ಹಳೆಯ ಸ್ನೇಹಿತರು, ಅಲ್ಲಿನ ವಾತಾವರಣ ಮಾತ್ರ ನೆನಪಿನಲ್ಲಿ ಶಾಶ್ವತವಾಗಿ ಉಳಿಯುವಂತೆ ಮಾಡುತ್ತದೆ. ಇದೀಗ ಇಂಗ್ಲೆಂಡಿ (england) ನ ವ್ಯಕ್ತಿಯೊಬ್ಬನು ತನ್ನ ಸುಂದರ ಬಾಲ್ಯವನ್ನು ಕಳೆದ ಭಾರತ (india) ದಲ್ಲಿರುವ ಮನೆಗೆ ಹದಿನೈದು ವರ್ಷಗಳ ಬಳಿಕ ಭೇಟಿ ನೀಡಿದ್ದು, ಈ ವೇಳೆಯಲ್ಲಿ ಭಾವುಕನಾಗಿದ್ದಾನೆ.

ralphleng ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದು, ಈ ವಿಡಿಯೋದಲ್ಲಿ ರಾಲ್ಫ್ ಲೆಂಗ್ ವಿದೇಶಿಗನು ಸುದೀರ್ಘ ವರ್ಷಗಳ ಬಳಿಕ ಭಾರತಕ್ಕೆ ಮರಳುವ ಕ್ಷಣವನ್ನು ವಿಡಿಯೋ ಮಾಡಿರುವುದನ್ನು ನೋಡಬಹುದು. ಈ ವಿಡಿಯೋದಲ್ಲಿ ತನ್ನ ಬಾಲ್ಯದಲ್ಲಿ ಕಳೆದ ಆ ಸುಂದರ ಮನೆಗೆ ಭೇಟಿ ನೀಡಿದ್ದು, ಮನೆಯ ಗೇಟ್ ವ್ಯಕ್ತಿಯೊಬ್ಬರು ಓಪನ್ ಮಾಡುವುದನ್ನು ನೀವಿಲ್ಲಿ ನೋಡಬಹುದು. ಅಲ್ಲಿರುವ ವಾತಾವರಣ ನೋಡುತ್ತಿದ್ದಂತೆ ತನ್ನ ಬಾಲ್ಯದ ಸುಂದರ ಚಿತ್ರಣವು ಆತನ ಕಣ್ಣ ಮುಂದೆ ಬಂದಂತಿದೆ. ಆ ನೆನಪುಗಳನ್ನು ಮೆಲುಕು ಹಾಕುತ್ತಿದ್ದಂತೆ ಬಿಕ್ಕಿ ಬಿಕ್ಕಿ ಅಳುತ್ತಿರುವುದನ್ನು ನೋಡಬಹುದು. ಈ ವಿಡಿಯೋದಲ್ಲಿ ಬಾಲ್ಯದ ಆ ದಿನಗಳು ಹೇಗಿತ್ತು ಎನ್ನುವುದನ್ನು ಹೇಳಿದ್ದಾರೆ. ಅದಲ್ಲದೇ, ಇಲ್ಲಿಂದ ಹೋಗುವಾಗ ತನ್ನ ಸ್ನೇಹಿತರು, ಈ ಮನೆಯನ್ನು ಬಿಟ್ಟು ಹೋಗಬೇಕಾಯಿತು ಎಂದಿರುವುದನ್ನು ನೀವಿಲ್ಲಿ ಗಮನಿಸಬಹುದು.

ಇದನ್ನೂ ಓದಿ
ದುಡಿಯುವ ಕೈಗೆ ಆಸರೆಯಾದ, ಹಸಿದ ಗೋವಿಗೆ ಅನ್ನದಾತನಾದ, ನಿಜವಾದ ಪರಮಾತ್ಮ
ಗಂಡ ಗಡ್ಡ ಶೇವ್​ ಮಾಡಿಲ್ಲ ಎಂದು ಮೈದುನನ ಜತೆ ಓಡಿ ಹೋದ ಮಹಿಳೆ
ಕರಡಿ ಘರ್ಜನೆಗೆ ಬೆದರಿದ ಹುಲಿರಾಯ
ಮದುವೆ ಆಮಂತ್ರಣ ಪತ್ರಿಕೆಯಲ್ಲಿ ತನ್ನ ಅರ್ಹತೆ ತಿಳಿಸಿದ ವರ

ಇದನ್ನೂ ಓದಿ : ಇಬ್ಬರಿಗೂ ಹಸಿವು, ದೇವರಂತೆ ಬಂದು ಅಜ್ಜಿ, ಗೋವಿನ ಹಸಿವು ನೀಗಿಸಿದ ವ್ಯಕ್ತಿ

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಈ ವಿಡಿಯೋ ಇಪ್ಪತ್ತೈದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ನೆಟ್ಟಿಗರು ನಾನಾ ರೀತಿಯ ಕಾಮೆಂಟ್ ಮಾಡುವ ಮೂಲಕ ತಮ್ಮ ಬಾಲ್ಯವನ್ನು ನೆನಪಿಸಿಕೊಂಡಿದ್ದಾರೆ. ಬಳಕೆದಾರರೊಬ್ಬರು, ಎಲ್ಲವು ಬದಲಾಗುತ್ತಿರುತ್ತದೆ, ಎಲ್ಲವೂ ಒಂದೇ ರೀತಿ ಇರುವುದಿಲ್ಲ ಎಂದಿದ್ದಾರೆ. ಇನ್ನೊರ್ವರು, ಈ ವ್ಯಕ್ತಿಯೂ ಅಳುವಾಗ ಮುಖವೆಲ್ಲವು ಟೊಮೊಟೊದಂತೆ ಕೆಂಪಾಗೆ ಆಗುತ್ತದೆ ಎಂದು ತಮಾಷೆ ಮಾಡಿದ್ದಾರೆ. ಮತ್ತೊಬ್ಬರು, ದಯವಿಟ್ಟು ಅಳಬೇಡಿ, ನನಗೆ ನೀವು ಅಳುವುದನ್ನು ನೋಡಲು ಆಗುವುದಿಲ್ಲ. ಸದಾ ನಗುತ್ತೀರಿ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Follow Us