Viral: ಆರೋಗ್ಯ ಸರಿಯಿಲ್ಲ, ವರ್ಕ್ ಫ್ರಮ್ ಹೋಮ್ ಮಾಡ್ತೇನೆ; ಉದ್ಯೋಗಿಯ ಮಾತಿಗೆ ಮ್ಯಾನೇಜರ್ ಏನಂದ್ರು ನೋಡಿ

ಖಾಸಗಿ ಕಂಪನಿಗಳಲ್ಲಿನ ಉದ್ಯೋಗಿಗಳು ರಜೆ ಹಾಗೂ ವರ್ಕ್ ವಿಷ್ಯದಲ್ಲಿನ ಮ್ಯಾನೇಜರ್ ಜತೆಗೆ ನಡೆಸುವ ಸಂಭಾಷಣೆಗಳು ಆಗಾಗ್ಗೆ ವೈರಲ್ ಆಗುತ್ತವೆ. ಆದರೆ ಇದೀಗ ಉದ್ಯೋಗಿಯೊಬ್ಬರು ಮ್ಯಾನೇಜರ್‌ ಜೊತೆಗಿನ ವಾಟ್ಸಾಪ್ ಚಾಟ್‌ನ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಮ್ಯಾನೇಜರ್‌ನ ಒಳ್ಳೆಯ ಗುಣವನ್ನು ಮೆಚ್ಚಿಕೊಂಡಿದ್ದಾರೆ. ಈ ರೆಡ್ಡಿಟ್ ಪೋಸ್ಟ್ ವೈರಲ್ ಆಗಿದ್ದು, ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: ಆರೋಗ್ಯ ಸರಿಯಿಲ್ಲ, ವರ್ಕ್ ಫ್ರಮ್ ಹೋಮ್ ಮಾಡ್ತೇನೆ; ಉದ್ಯೋಗಿಯ ಮಾತಿಗೆ ಮ್ಯಾನೇಜರ್ ಏನಂದ್ರು ನೋಡಿ
ಸಾಂದರ್ಭಿಕ ಚಿತ್ರ
Image Credit source: Getty Images

Updated on: Aug 27, 2026 | 1:57 PM

ವರ್ಕ್ ಫ್ರಮ್ ಹೋಮ್ (work from home) ಅಂದ್ರೆ ಎಲ್ಲರಿಗಗೂ ಇಷ್ಟನೇ. ಆದರೆ ಹುಷಾರಿಲ್ಲ ಮನೆಯಲ್ಲೇ ಕೆಲಸ ಮಾಡುವೆ ಎಂದರೆ ಹೆಚ್ಚಿನ ಮ್ಯಾನೇಜರ್ ನೋ ಅನ್ನೋದೇ ಹೆಚ್ಚು. ಆದರೆ ಇದೀಗ ಉದ್ಯೋಗಿಯೊಬ್ಬರು ಇದೇ ವಿಚಾರವಾಗಿ ಪೋಸ್ಟ್ ಹಂಚಿಕೊಂಡಿದ್ದಾರೆ. ಆರೋಗ್ಯ ಸಮಸ್ಯೆ ಎಂದಾಗ ಮನೆಯಲ್ಲೇ ಕೆಲಸ ಮಾಡಿ ಎಂದ ಮ್ಯಾನೇಜರ್‌ನ ಮಾನವೀಯ ಗುಣವನ್ನು ಹಾಡಿಹೊಗಳಿದ್ದಾರೆ.

ಇಂಡಿಯನ್ ವರ್ಕ್ ಪ್ಲೇಸ್ (r/Indianworkplace) ಹೆಸರಿಗೆ ರೆಡ್ಡಿಟ್ ಪೋಸ್ಟ್‌ನಲ್ಲಿ ಉದ್ಯೋಗಿಯೊಬ್ಬರು ಮ್ಯಾನೇಜರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮ್ಯಾನೇಜರ್ ಜತೆಗೆ ನಡೆಸಿದ ಸಂಭಾಷಣೆಯ ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದು,  ನನಗೆ ಗಂಟಲು ನೋವು ಹಾಗೂ ಕೆಮ್ಮು ಹೆಚ್ಚಾಗಿರುವ ಕಾರಣ ಆಫೀಸಿಗೆ ಬರಲು ಆಗಲ್ಲ. ಹೀಗಾಗಿ ಮನೆಯಿಂದಲೇ ಕೆಲಸ ಮಾಡುತ್ತೇನೆ ಎಂದು ಉದ್ಯೋಗಿ ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಮ್ಯಾನೇಜರ್ ಸರಿ, ನಿಮ್ಮ ಸಮಸ್ಯೆ ನನಗೆ ಅರ್ಥವಾಯಿತು. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಎಂದು ಹೇಳಿದ್ದಾರೆ.

ವೈರಲ್ ಪೋಸ್ಟ್ ಇಲ್ಲಿದೆ

One from the manager’s side
by
u/kaamchalau in
IndianWorkplace

ಮತ್ತೊಂದು ಬಾರಿ ಆರೋಗ್ಯ ಕೈ ಕೊಟ್ಟಾಗ ಇದೇ ಉದ್ಯೋಗಿಯೂ ಮನೆಯ ಕಾರ್ಯಕ್ರಮದ ಬಳಿಕ ನಂಗೆ ಜ್ವರ ಬಂದಿದೆ. ನಾನು ಮನೆಯಿಂದಲೇ ಕೆಲಸ ಮಾಡಲು ಅನುಮತಿ ಕೊಡುವಿರಾ ಎಂದು ಕೇಳಿದಾಗ ಅದಕ್ಕೂ ಕೂಡ ನೋ ಎನ್ನದ ಮ್ಯಾನೇಜರ್ ಸರಿ, ತೊಂದರೆಯಿಲ್ಲ ಎಂದಿದ್ದಾರೆ. ಉದ್ಯೋಗಿ ರಜೆ ಹಾಗೂ ಕೆಲಸದ ವಿಷಯದಲ್ಲಿ ಮ್ಯಾನೇಜರ್‌ ಶಾಂತ ರೀತಿಯಲ್ಲಿ ವರ್ತಿಸಿರುವುದನ್ನು ನೋಡಬಹುದು.

ಇದನ್ನೂ ಓದಿ: ಮಗಳು ಲೇಟ್ ನೈಟ್ ಮೀಟಿಂಗ್‌ನಲ್ಲಿದ್ದಾಗಲೇ ಕ್ಲಾಸ್‌ ತೆಗೆದುಕೊಂಡ ತಂದೆ, ಕಾರಣ ಇದೇ ನೋಡಿ

ಈ ರೆಡ್ಡಿಟ್ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ನಿಮ್ಮ ಮ್ಯಾನೇಜರ್ ಒಳ್ಳೆತನವನ್ನು ದಯವಿಟ್ಟು ದುರುಪಯೋಗ ಪಡಿಸಿಕೊಳ್ಳಬೇಡಿ ಎಂದಿದ್ದಾರೆ. ಇನ್ನೊಬ್ಬರು, ಹೆಚ್ಚಿನ ಉದ್ಯೋಗಿಗಳು ಇಂತಹ ಉತ್ತಮ ಕೆಲಸದ ಸಂಸ್ಕೃತಿಯನ್ನೇ ಇಷ್ಟ ಪಡ್ತಾರೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಈ ಮ್ಯಾನೇಜರ್ ಕೆಲಸಕ್ಕೆ ಹಾಗೂ ಉದ್ಯೋಗಿಯ ಆರೋಗ್ಯಕ್ಕೆ ಹೆಚ್ಚು ಗಮನ ಕೊಡ್ತಾರೆ, ಮಾನವೀಯ ಗುಣವುಳ್ಳ ಮ್ಯಾನೇಜರ್ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Loading...
Unable to load recommendations.
Follow Us