ಹೊಟ್ಟೆ ಹಸಿದಾಗ ಬರುವ ಶಬ್ದ ಕೇಳಿ ಫುಡ್​​​ ಆರ್ಡರ್ ಮಾಡುವ ಎಐ ಸಾಧನ ಕಂಡುಹಿಡಿದ ಮಂಗಳೂರಿನ ಯುವಕ

ಮಂಗಳೂರಿನ ಸೋಹನ್ ಎಂ ರೈ ಕೃತಕ ಬುದ್ಧಿಮತ್ತೆ ಚಾಲಿತ 'MOM' ಎಂಬ ಸಾಧನವನ್ನು ಆವಿಷ್ಕರಿಸಿದ್ದಾರೆ. ಈ ಸಾಧನವು ಹೊಟ್ಟೆ ಹಸಿವನ್ನು ಪತ್ತೆ ಹಚ್ಚಿ, ಸ್ವಯಂಚಾಲಿತವಾಗಿ Zomato ಮೂಲಕ ಆಹಾರ ಆರ್ಡರ್ ಮಾಡುತ್ತದೆ. ಕ್ಲೌಡ್ AI ಬಳಸುವ ಈ ಆವಿಷ್ಕಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಯುವಕನ ಈ ತಾಂತ್ರಿಕ ಪ್ರಗತಿ ಹಲವರ ಗಮನ ಸೆಳೆದಿದೆ.

ಹೊಟ್ಟೆ ಹಸಿದಾಗ ಬರುವ ಶಬ್ದ ಕೇಳಿ ಫುಡ್​​​ ಆರ್ಡರ್ ಮಾಡುವ ಎಐ ಸಾಧನ ಕಂಡುಹಿಡಿದ ಮಂಗಳೂರಿನ ಯುವಕ
ವೈರಲ್​ ವಿಡಿಯೋ

Updated on: Nov 27, 2025 | 2:25 PM

ಕೃತಕ ಬುದ್ಧಿಮತ್ತೆ (AI)ಯಲ್ಲಿ ವಿಭಿನ್ನ ಅಪ್ಡೇಟ್​​ಗಳು ಬಂದಿದೆ. ಮನುಷ್ಯರು ಈ ಕೃತಕ ಬುದ್ಧಿಮತ್ತೆಯನ್ನು ಆಳವಾಗಿ ಅವಲಂಬಿಸಿಕೊಂಡಿದ್ದಾರೆ. ಇಂದಿನ ಯುವಕರು ಎಐ ಮೂಲಕ ಹಲವು ಹೊಸ ಹೊಸ ವಿಚಾರಗಳನ್ನು ಸಂಶೋಧನೆ ಮಾಡಿದ್ದಾರೆ. ಇದೀಗ ಮಂಗಳೂರಿನ ಯುವಕ ಮಾಡಿದ ಈ ಎಐ ಆವಿಷ್ಕರ ಭಾರೀ ಸುದ್ದಿ ಮಾಡಿದೆ. ಮಂಗಳೂರಿನ ಸೋಹನ್ ಎಂ ರೈ ಎಂಬ ಯುವಕ ಕೃತಕ ಬುದ್ಧಿಮತ್ತೆ (AI) ಚಾಲಿತ ಸಾಧನದ ಬಗ್ಗೆ ವಿಡಿಯೋವೊಂದು ಹಂಚಿಕೊಂಡಿದ್ದಾರೆ. ಹೊಟ್ಟೆ ಹಸಿವಿನಿಂದ ಘರ್ಜಿಸಿದ್ರೆ ಈ ಕೃತಕ ಬುದ್ಧಿಮತ್ತೆ ಚಾಲಿತ ಸಾಧನ ಸ್ವಯಂಚಾಲಿತವಾಗಿ ಫುಡ್​​ ಆರ್ಡರ್​​ ಮಾಡುತ್ತದೆ. ಇದೀಗ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರನ್ನು ಅಚ್ಚರಿಗೊಳಿಸಿದೆ.

ಈ ವಿಡಿಯೋದಲ್ಲಿ ಅವರು ಆವಿಷ್ಕರಿಸಿದ ಸಾಧನದ ಬಗ್ಗೆ ಸೋಹನ್ ಎಂ ರೈ ಹೀಗೆ ವಿವರಿಸಿದ್ದಾರೆ. ” ನಾನು ಹಸಿವಾದಾಗ ಅರ್ಥಮಾಡಿಕೊಳ್ಳುವ ಮತ್ತು ಜೊಮಾಟೊದಲ್ಲಿ ಸ್ವಯಂಚಾಲಿತವಾಗಿ ಆಹಾರವನ್ನು ಆರ್ಡರ್ ಮಾಡುವ ಈ ಸಾಧನವನ್ನು ಕಂಡುಹಿಡಿದಿದ್ದೇನೆ. ಇದನ್ನು ಸೊಂಟಕ್ಕೆ ಹಾಕುವ ಬೆಲ್ಟ್​​​ನಲ್ಲಿ ಫಿಕ್ಸ್​​ ಮಾಡಬಹುದಾದ ಸಾಧನವಾಗಿದೆ. ಇದನ್ನು MOM (ಊಟ ಆರ್ಡರ್ ಮಾಡ್ಯೂಲ್) ಎಂದು ಕರೆಯಲಾಗುತ್ತದೆ. ಹೊಟ್ಟೆಯಲ್ಲಿ ಹಸಿದಾಗ ಬರುವ ಶಬ್ದವನ್ನು ಕೇಳಿಸಿಕೊಂಡು, ಈ ಸಾಧನ ಸ್ವಯಂಚಾಲಿತವಾಗಿ ಆಹಾರವನ್ನು ಆರ್ಡರ್ ಮಾಡುತ್ತದೆ. ಇದನ್ನು ತಯಾರಿಸಲು ನಾನು, ನನ್ನ ಸಹೋದರಿಯ ಸ್ಟೆತೋಸ್ಕೋಪ್ ಸೇರಿದಂತೆ ಹಲವಾರು ವಸ್ತುಗಳನ್ನು ಬಳಸಿದ್ದೇನೆ. ಈ ಸಾಧನವು ಹಸಿವಿನ ಮಟ್ಟವನ್ನು ನಿರ್ಧರಿಸಲು ಕ್ಲೌಡ್ AI ಅನ್ನು ಬಳಸಿದ್ದೇನೆ” ಎಂದು ಹೇಳಿದ್ದಾರೆ.

ವೈರಲ್​​​​ ವಿಡಿಯೋ ಇಲ್ಲಿದೆ ನೋಡಿ:

ಸೋಶಿಯಲ್​​ ಮೀಡಿಯಾದಲ್ಲಿ ನೆಟ್ಟಿಗರು ಹೇಳಿದ್ದೇನು?

ಸೋಹನ್ ಎಂ ರೈ ಆವಿಷ್ಕಾರ ಮಾಡಿದ ಹೊಸ ಸಾಧನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಕಮೆಂಟ್​​ ಮಾಡಿದ್ದಾರೆ. ಊಟವಿಲ್ಲದೆ ಇಡೀ ದಿನ ಕುಳಿತುಕೊಳ್ಳಬೇಕು ಎಂದು ತಮಾಷೆಯಾಗಿ ಕೆಲವು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಹೊಟ್ಟೆ ಗೊಣಗುವುದು ಎಂದರೆ ಹಸಿವು ಎಂದರ್ಥವಲ್ಲ, ಅದರೂ ನಿಮ್ಮ ಹೊಸ ಸಾಧನೆಗೆ ಮೆಚ್ಚಲೇಬೇಕು ಎಂದು ಹೇಳಿದ್ದಾರೆ. ಇದಕ್ಕೆ ಉತ್ತರಿಸಿದ ಸೋಹನ್ ಎಂ ರೈ, ನನಗೆ ಹಸಿದಾಗ ಅದಕ್ಕೆ ಅರ್ಥವಾಗುತ್ತದೆ. ಆಗಾ ತನ್ನ ಕೆಲಸ ಮಾಡುತ್ತದೆ. ಈ ಸಾಧನವು ಚಿಕ್ಕದಾಗಿದ್ದರೆ ಮತ್ತು ಹಗುರವಾಗಿದ್ದರೆ ನಾನು ಅದನ್ನು ನನ್ನ ಬೆಕ್ಕಿಗೆ ಜೋಡಿಸಿಬೇಕು ಎಂದು ಒಬ್ಬರು ಹೇಳಿದ್ದಾರೆ.

ಇದನ್ನೂ ಓದಿ: ಪದೇ ಪದೇ ಬಿಸಿನೀರು ಕೇಳಿದ್ದಕ್ಕೆ ವರನನ್ನು ಹುಚ್ಚ ಎಂದ ವಧು: ರಣರಂಗವಾಯಿತು ಮದುವೆ ಮಂಟಪ

ಸೋಹನ್ ಎಂ ರೈ ಯಾರು?

ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್​​​ನಲ್ಲಿ ಪದವಿಯನ್ನು ಪಡೆದು, ಬೇರೆ ಬೇರೆ ಕಂಪನಿಗಳಲ್ಲಿ ಇಂಟರ್ನ್‌ಶಿಪ್ ಮಾಡಿದ ನಂತರ, ತಮ್ಮದೇ ಆದ ಸ್ಟಾರ್ಟ್‌ಅಪ್ ಅನ್ನು ಪ್ರಾರಂಭಿಸಿದರು. ಸೋಹನ್ ಎಂ ರೈ ಅವರು “zikiguy” ಎಂಬ ಇನ್‌ಸ್ಟಾಗ್ರಾಮ್ ಪುಟದಲ್ಲಿ ಟೆಕ್​​​ ಅಪ್ಡೇಟ್​​​ಗಳನ್ನು ಹಾಗೂ ಹೊಸ ಹೊಸ ತಂತ್ರಜ್ಞಾನದ ಬಗ್ಗೆ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. 2023ರಲ್ಲಿ ಜೊಮಾಟೊದಲ್ಲಿ ಡೆಲಿವರಿ ಬಾಯ್ ಆಗಿ ಸೇರಿಕೊಂಡು, ಅಲ್ಲಿ ಡ್ರೋನ್ ಬಳಸಿ ಆಹಾರವನ್ನು ಹೇಗೆ ಸಾಗಿಸಬಹುದು ಎಂಬ ಬಗ್ಗೆ ವಿಡಿಯೋವೊಂದನ್ನು ಹಂಚಿಕೊಂಡು ಸುದ್ದಿಯಾಗಿದ್ದರು.

ವೈರಲ್​​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ