Viral Video: ಟ್ರ್ಯಾಕ್​ನಲ್ಲಿ ಓಡುವ ಬದಲು ಮಾಲ್ ಒಳಗೆ ಜಾಗಿಂಗ್ ಮಾಡಿದ ಯುವಕ

ಮಿತಿ ಮೀರಿದ ವಾಯು ಮಾಲಿನ್ಯ, ವಾಹನಗಳ ಕಿರಿಕಿರಿ, ಧೂಳು, ಹೊಗೆ ಜಾಗಿಂಗ್ ಹಾಗಿರಲಿ ವಾಕಿಂಗ್ ಮಾಡುವುದೂ ಮುಂಬೈನಲ್ಲಿ ಕಷ್ಟಕರವಾಗಿದೆ. ಹೀಗಾಗಿ ವ್ಯಕ್ತಿಯೊಬ್ಬರು ಮಾಲ್​ ಒಳಗೆ ಬಂದು ಜಾಗಿಂಗ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ಈ ವೈರಲ್ ಕ್ಲಿಪ್ ಅನ್ನು ಭವಿನ್ ಪಾರ್ಮರ್ ಎಂಬುವವರು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.ಅದರಲ್ಲಿ ಟಿ ಶರ್ಟ್​ ಹಾಗೂ ಟ್ರ್ಯಾಕ್ ಪ್ಯಾಂಟ್ ಮತ್ತು ಸ್ಪೋರ್ಟ್ಸ್​ ಶೂ ಧರಿಸಿರುವ ಯುವಕ ಮಾಲ್ ಅನ್ನು ತನ್ನ ಪರ್ಸನಲ್ ಜಾಗಿಂಗ್ ಟ್ರ್ಯಾಕ್​ ಆಗಿ ಪರಿವರ್ತಿಸಿಕೊಂಡಿರುವುದನ್ನು ಕಾಣಬಹುದು.

Viral Video: ಟ್ರ್ಯಾಕ್​ನಲ್ಲಿ ಓಡುವ ಬದಲು ಮಾಲ್ ಒಳಗೆ ಜಾಗಿಂಗ್ ಮಾಡಿದ ಯುವಕ
ಜಾಗಿಂಗ್

Updated on: Jan 07, 2026 | 11:11 AM

ಮುಂಬೈ, ಜನವರಿ 07: ಯುವಕನೊಬ್ಬ ಟ್ರ್ಯಾಕ್​ನಲ್ಲಿ ಓಡುವ ಬದಲು ಮಾಲ್ ಅನ್ನೇ ಪರ್ಸನಲ್ ಟ್ರ್ಯಾಕ್ ಆಗಿ ಮಾಡಿಕೊಂಡು ಜಾಗಿಂಗ್(Jogging) ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದೆಹಲಿಯಷ್ಟಲ್ಲದಿದ್ದರೂ ಮುಂಬೈನಲ್ಲಿ ವಾಯು ಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ವಾಯು ಗುಣಮಟ್ಟ ಸೂಚ್ಯಂಕ(AQI)200ರ ಗಡಿ ದಾಟಿದೆ. ಹೀಗಾಗಿ ಯುವಕನೊಬ್ಬ ಟ್ರ್ಯಾಕ್​ನಲ್ಲಿ ಓಡುವ ಬದಲು ಮಾಲ್​ನಲ್ಲಿ ಜಾಗಿಂಗ್ ಮಾಡಿರುವ ವಿಡಿಯೋ ವೈರಲ್ ಆಗಿದೆ.

ಈ ವೈರಲ್ ಕ್ಲಿಪ್ ಅನ್ನು ಭವಿನ್ ಪಾರ್ಮರ್ ಎಂಬುವವರು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.ಅದರಲ್ಲಿ ಟಿ ಶರ್ಟ್​ ಹಾಗೂ ಟ್ರ್ಯಾಕ್ ಪ್ಯಾಂಟ್ ಮತ್ತು ಸ್ಪೋರ್ಟ್ಸ್​ ಶೂ ಧರಿಸಿರುವ ಯುವಕ ಮಾಲ್ ಅನ್ನು ತನ್ನ ಪರ್ಸನಲ್ ಜಾಗಿಂಗ್ ಟ್ರ್ಯಾಕ್​ ಆಗಿ ಪರಿವರ್ತಿಸಿಕೊಂಡಿರುವುದನ್ನು ಕಾಣಬಹುದು.
ಮಾಲ್​ನಲ್ಲಿ ಜಾಗಿಂಗ್ ಮಾಡಿದರೆ ಒಳಗೆ ಗಾಳಿಯೂ ಶುದ್ಧವಾಗಿರುತ್ತದೆ, ಅಕ್ಕ ಪಕ್ಕದ ಜಾಗ ಕೂಡ ಶುಚಿಯಾಗಿರುತ್ತದೆ.

ಎಸಿ ಇರುವ ಕಾರಣ ಯಾವುದೇ ಸಮಸ್ಯೆ ಇರುವುದಿಲ್ಲ. ಈ ವಿಡಿಯೋವನ್ನು ಜನವರಿ 05ರಂದು ಪೋಸ್ಟ್ ಮಾಡಲಾಗಿದೆ. ಆನ್​ಲೈನ್​ನಲ್ಲಿ ಒಳ್ಳೆಯ ಅಟೆನ್ಷನ್ ಪಡೆದಿದೆ. 2.94 ಲಕ್ಷ ವೀಕ್ಷಣೆಯನ್ನು ಪಡೆದಿದೆ. 6,600 ಲೈಕ್ಸ್​ಗಳನ್ನು ಪಡೆದಿದೆ.

ಮತ್ತಷ್ಟು ಒದಿ: ಜಾಗಿಂಗ್, ವ್ಯಾಯಾಮ ಶುರು ಮಾಡುವ ಮುನ್ನ ಈ 10 ಟೆಸ್ಟ್​ಗಳನ್ನು ಮಾಡಿಸಲು ಮರೆಯದಿರಿ

ಕಳಪೆ ಗಾಳಿಯಿಂದ ರಕ್ಷಿಸಿಕೊಳ್ಳಲು ಇದು ಒಳ್ಳೆಯ ಪ್ಲ್ಯಾನ್ ಎಂದು ನೆಟ್ಟಿಗರು ಖುಷಿ ಪಟ್ಟಿದ್ದಾರೆ. ಜನವರಿ 7 ರ ಮುಂಜಾನೆ ನಗರದ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ 332 ಕ್ಕೆ ತಲುಪಿದ್ದು, ಇದನ್ನು ‘ತೀವ್ರ’ ವರ್ಗಕ್ಕೆ ಸೇರಿದೆ. ಮಕ್ಕಳು, ಹಿರಿಯ ನಾಗರಿಕರು, ಉಸಿರಾಟ, ಹೃದಯ ಸಂಬಂಧಿ ಕಾಯಿಲೆಯಿಂದ ನರಳುವಂತಾಗಿದೆ.

ಮೆಟ್ರೋ ರೈಲು ಕಾರಿಡಾರ್‌ಗಳು, ಫ್ಲೈಓವರ್‌ಗಳು, ಕರಾವಳಿ ರಸ್ತೆ ವಿಸ್ತರಣೆಗಳು ಮತ್ತು ರಸ್ತೆ ಅಗಲೀಕರಣ ಕಾಮಗಾರಿಗಳಂತಹ ನಡೆಯುತ್ತಿರುವ ಮೂಲಸೌಕರ್ಯ ಅಭಿವೃದ್ಧಿಗಳು ಧೂಳಿನ ಮಟ್ಟವನ್ನು ಗಮನಾರ್ಹವಾಗಿ ಹೆಚ್ಚಿಸಿವೆ. ತ್ವರಿತ ಖಾಸಗಿ ರಿಯಲ್ ಎಸ್ಟೇಟ್ ನಿರ್ಮಾಣವು ಮಾಲಿನ್ಯಕಾರಕ ಹೊರೆಯನ್ನು ಮತ್ತಷ್ಟು ಹೆಚ್ಚಿಸಿದೆ. ವಾಹನಗಳಿಂದ ಹೊರಸೂಸುವ ಹೊಗೆ, ವಿಶೇಷವಾಗಿ ಗರಿಷ್ಠ ಸಂಚಾರ ಸಮಯದಲ್ಲಿ, ಪರಿಸ್ಥಿತಿಯನ್ನು ಉಲ್ಬಣಗೊಳಿಸುತ್ತಲೇ ಇರುತ್ತದೆ, ಇದರಿಂದಾಗಿ ಗಾಳಿಯ ಗುಣಮಟ್ಟ ನಿರ್ವಹಣೆ ನಗರಕ್ಕೆ ದೊಡ್ಡ ಸವಾಲಾಗಿದೆ.

 

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:10 am, Wed, 7 January 26

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us