ಜಾಗಿಂಗ್, ವ್ಯಾಯಾಮ ಶುರು ಮಾಡುವ ಮುನ್ನ ಈ 10 ಟೆಸ್ಟ್​ಗಳನ್ನು ಮಾಡಿಸಲು ಮರೆಯದಿರಿ

ಸ್ನಾಯುಗಳನ್ನು ಬಲಪಡಿಸಲು, ಹೃದಯರಕ್ತನಾಳದ ಫಿಟ್ನೆಸ್ ಅನ್ನು ಸುಧಾರಿಸಲು, ಕ್ಯಾಲೋರಿಯನ್ನು ಕಡಿಮೆ ಮಾಡಲು, ತೂಕ ಇಳಿಸಿಕೊಳ್ಳಲು ಜಾಗಿಂಗ್ ಅತ್ಯುತ್ತಮವಾದ ಆಯ್ಕೆಯಾಗಿದೆ. ನೀವು ಓಟವನ್ನು ಪ್ರಾರಂಭಿಸುವ ಅಥವಾ ಯಾವುದೇ ಇತರ ವ್ಯಾಯಾಮಗಳನ್ನು ಮಾಡುವ ಮೊದಲು ಮಾಡಿಸಿಕೊಳ್ಳಬೇಕಾದ 10 ಪರೀಕ್ಷೆಗಳು ಇಲ್ಲಿವೆ...

ಜಾಗಿಂಗ್, ವ್ಯಾಯಾಮ ಶುರು ಮಾಡುವ ಮುನ್ನ ಈ 10 ಟೆಸ್ಟ್​ಗಳನ್ನು ಮಾಡಿಸಲು ಮರೆಯದಿರಿ
ಜಾಗಿಂಗ್Image Credit source: iStock
Follow us
ಸುಷ್ಮಾ ಚಕ್ರೆ
|

Updated on: Oct 04, 2023 | 7:50 PM

ಇತ್ತೀಚೆಗೆ ಯುವಕರು, ವಯಸ್ಸಾದವರೆನ್ನದೆ ಎಲ್ಲ ವಯೋಮಾನದವರೂ ಆರೋಗ್ಯದ ಬಗ್ಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ನೀವು ನಿಮ್ಮ ದೇಹಕ್ಕೆ ವ್ಯಾಯಾಮ ನೀಡಬೇಕೆಂದರೆ ಜಾಗಿಂಗ್ ಅಥವಾ ರನ್ನಿಂಗ್​ನಿಂದ ಶುರು ಮಾಡಬೇಕು. ಓಡುವುದರಿಂದ ನಮ್ಮ ದೇಹದ ಎಲ್ಲ ಅಂಗಗಳಿಗೂ ವ್ಯಾಯಾಮ ಸಿಗುತ್ತದೆ. ಅದಕ್ಕೆಂದೇ ಹಲವೆಡೆ ರನ್ನಿಂಗ್ ಕ್ಲಬ್​ಗಳು ಕೂಡ ಇವೆ. ರನ್ನಿಂಗ್ ಮತ್ತು ಜಾಗಿಂಗ್‌ನಿಂದ ಆರೋಗ್ಯಕ್ಕೆ ಹಲವು ಉಪಯೋಗಗಳಿವೆ. ಆದರೆ, ನೀವು ಓಡಲು ಶುರು ಮಾಡುವ ಮುನ್ನ ಕೆಲವೊಂದಿಷ್ಟು ಆರೋಗ್ಯ ತಪಾಸಣೆಗಳನ್ನು ಮಾಡಿಸಿಕೊಳ್ಳುವುದು ಉತ್ತಮ. ಆ ಬಗ್ಗೆ ಮಾಹಿತಿ ಇಲ್ಲಿದೆ.

ಓಡುವುದರಿಂದ ಮೂಳೆಗಳು ಸದೃಢವಾಗುತ್ತವೆ. ಸ್ನಾಯುಗಳನ್ನು ಬಲಪಡಿಸಲು, ಹೃದಯರಕ್ತನಾಳದ ಫಿಟ್ನೆಸ್ ಅನ್ನು ಸುಧಾರಿಸಲು, ಕ್ಯಾಲೋರಿಯನ್ನು ಕಡಿಮೆ ಮಾಡಲು, ತೂಕ ಇಳಿಸಿಕೊಳ್ಳಲು ಜಾಗಿಂಗ್ ಅತ್ಯುತ್ತಮವಾದ ಆಯ್ಕೆಯಾಗಿದೆ. ಜಿಮ್​ನಲ್ಲಿ ಬೆವರು ಹರಿಸುವ ಬದಲು ದಿನಕ್ಕೆ 30 ನಿಮಿಷ ಓಡಿದರೂ ನಿಮ್ಮ ಆರೋಗ್ಯ ಮತ್ತು ದೇಹದಲ್ಲಿ ಬದಲಾವಣೆಗಳನ್ನು ಕಾಣಬಹುದು.

ನೀವು ಓಟವನ್ನು ಪ್ರಾರಂಭಿಸುವ ಮೊದಲು ಅಥವಾ ಯಾವುದೇ ಇತರ ವ್ಯಾಯಾಮಗಳನ್ನು ಮಾಡುವ ಮೊದಲು ಮಾಡಿಸಿಕೊಳ್ಳಬೇಕಾದ 10 ಪರೀಕ್ಷೆಗಳು ಇಲ್ಲಿವೆ…

ಇದನ್ನೂ ಓದಿ: Diabetes Care: ಮಧುಮೇಹಿಗಳು ಎಂದಿಗೂ ಈ ಹಣ್ಣುಗಳನ್ನು ತಿನ್ನಲೇಬೇಡಿ!

ಜಿಮ್​ನಲ್ಲಿ ವರ್ಕ್​ಔಟ್ ಮಾಡುವಾಗ ಕುಸಿದು ಬೀಳುವ, ಜಾಗಿಂಗ್​ನಲ್ಲೇ ಹೃದಯಾಘಾತವಾಗುವ ಕೆಲವು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇದನ್ನು ನೋಡಿದವರು ದೈಹಿಕ ವ್ಯಾಯಾಮಗಳನ್ನು ಮಾಡಲು ಹಿಂದೇಟು ಹಾಕುವಂತಾಗಿದೆ. ಆದರೆ, ಓಟದ ಅಥವಾ ಇತರ ವ್ಯಾಯಾಮದ ಸಮಯದಲ್ಲಿ ಆಗುವ ಈ ರೀತಿಯ ಹೃದಯಾಘಾತ ಅಥವಾ ಹೃದಯ ಸ್ತಂಭನದ ಅಪರೂಪದ ಘಟನೆಗಳು ಸಾಮಾನ್ಯವಾಗಿ ಮೊದಲೇ ಅಸ್ತಿತ್ವದಲ್ಲಿರುವ ಹೃದಯದ ಕಾಯಿಲೆಗಳು ಮತ್ತು ಅಪಾಯಕಾರಿ ಅಂಶಗಳಿಗೆ ಸಂಬಂಧಿಸಿದ್ದಾಗಿರುತ್ತವೆ. ಆ ಬಗ್ಗೆ ಆ ವ್ಯಕ್ತಿಗಳಿಗೆ ಸರಿಯಾದ ಮಾಹಿತಿ ಇರುವುದಿಲ್ಲ. ಹೀಗಾಗಿ, ಓಡುವುದರಿಂದ ಅಥವಾ ವ್ಯಾಯಾಮ ಮಾಡುವುದರಿಂದ ದೇಹದ ಮೇಲೆ ನೆಗೆಟಿವ್ ಪರಿಣಾಮ ಉಂಟಾಗಬಹುದು ಎಂದು ಭಯಪಡಬೇಕಾಗಿಲ್ಲ.

ನೀವು ನಿಮ್ಮ ಫಿಟ್‌ನೆಸ್ ಪ್ರಯಾಣವನ್ನು ಪ್ರಾರಂಭಿಸುವ ಮೊದಲು ಮಾಡಬೇಕಾದ 10 ಪ್ರಮುಖ ಪರೀಕ್ಷೆಗಳ ಬಗ್ಗೆ ಹೈದರಾಬಾದ್​ನ ಅಪೋಲೋ ಆಸ್ಪತ್ರೆ ನರರೋಗತಜ್ಞ ಡಾ. ಸುಧೀರ್ ಕುಮಾರ್ ಮಾಹಿತಿ ನೀಡಿದ್ದಾರೆ.

1. ರಕ್ತದೊತ್ತಡ: ಬಿಪಿ ಯಂತ್ರದ ಮೂಲಕ ಮನೆಯಲ್ಲಿಯೇ ಸುಲಭವಾಗಿ ತಪಾಸಣೆ ಮಾಡಬಹುದು. ರಕ್ತದೊತ್ತಡ 130/80 mmHgಗಿಂತ ಕೆಳಗೆ ಇರಬೇಕು.

2. ರಕ್ತದ ಸಕ್ಕರೆ ಅಂಶ: ಆಹಾರ ಸೇವನೆಗೂ ಮುನ್ನ ನಿಮ್ಮ ದೇಹದ ರಕ್ತದ ಸಕ್ಕರೆ ಪ್ರಮಾಣ 100 mg/dL ಗಿಂತ ಕಡಿಮೆ ಇರಬೇಕು.

ಇದನ್ನೂ ಓದಿ: ರಾತ್ರಿ ಊಟ ಬಿಟ್ಟರೆ ತೆಳ್ಳಗಾಗೋದು ನಿಜಾನಾ?

3. ಗ್ಲೈಕೇಟೆಡ್ ಹಿಮೋಗ್ಲೋಬಿನ್ (HbA1C): 5.6%ವರೆಗೆ ಸಾಮಾನ್ಯ ಎಂದು ಪರಿಗಣಿಸಲಾಗುತ್ತದೆ.

4. ಲಿಪಿಡ್ ಪ್ರೊಫೈಲ್: HDL 50ಕ್ಕಿಂತ ಹೆಚ್ಚಿರಲಿ, LDL 100ಕ್ಕಿಂತ ಕಡಿಮೆ ಇರಲಿ, ಟ್ರೈಗ್ಲಿಸರೈಡ್‌ಗಳು 150ಕ್ಕಿಂತ ಕಡಿಮೆ ಇರಲಿ, ಮತ್ತು ಒಟ್ಟು ಕೊಲೆಸ್ಟ್ರಾಲ್ 200ಕ್ಕಿಂತ ಕಡಿಮೆ ಇರಲಿ. ಟ್ರೈಗ್ಲಿಸರೈಡ್/ಎಚ್‌ಡಿಎಲ್ ಅನುಪಾತ 1 ಅಥವಾ ಅದಕ್ಕಿಂತ ಕಡಿಮೆ ಇದ್ದರೆ ತುಂಬಾ ಆರೋಗ್ಯಕರ ಎಂದು ಪರಿಗಣಿಸಲಾಗುತ್ತದೆ.

5. ಇಸಿಜಿ: ಅಸಹಜವಾದ ಹೃದಯದ ಬಡಿತವನ್ನು ಪತ್ತೆಹಚ್ಚಲು ಉಪಯುಕ್ತವಾಗಿದೆ.

6. ಎಕೋಕಾರ್ಡಿಯೋಗ್ರಾಂ: ಯುವ ಕ್ರೀಡಾಪಟುಗಳಲ್ಲಿ ಹಠಾತ್ ಹೃದಯ ಸ್ತಂಭನಕ್ಕೆ ಸಾಮಾನ್ಯ ಕಾರಣವಾದ ಹೈಪರ್ಟ್ರೋಫಿಕ್ ಕಾರ್ಡಿಯೊಮಿಯೋಪತಿ (HOCM) ಪತ್ತೆಹಚ್ಚಲು ತುಂಬಾ ಉಪಯುಕ್ತವಾಗಿದೆ.

7. ಹೋಮೋಸಿಸ್ಟೈನ್: ಇದರ ಮಟ್ಟ 15ಕ್ಕಿಂತ ಜಾಸ್ತಿ ಇದ್ದರೆ ಅದು ಹೃದಯಾಘಾತ ಅಥವಾ ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸಬಹುದು.

8. ವಿಟಮಿನ್ ಡಿ: ವಿಟಮಿನ್ ಡಿ ಕೊರತೆಯು ಎಲ್ಲರಲ್ಲೂ ಸಾಮಾನ್ಯವಾಗಿದೆ. ಇದು ಮೂಳೆಗಳ ಮುರಿತ ಇತ್ಯಾದಿಗಳ ಅಪಾಯವನ್ನು ಹೆಚ್ಚಿಸುತ್ತದೆ.

9. ವಿಟಮಿನ್ ಬಿ 12: ಈ ಕೊರತೆಯು ವಿಶೇಷವಾಗಿ ಸಸ್ಯಾಹಾರಿಗಳಲ್ಲಿ ಸಾಮಾನ್ಯವಾಗಿದೆ.

10. ಹಿಮೋಗ್ಲೋಬಿನ್: ಕಡಿಮೆ ಹಿಮೋಗ್ಲೋಬಿನ್ (ರಕ್ತಹೀನತೆ) ವ್ಯಾಯಾಮದ ಸಮಯದಲ್ಲಿ ನಿಮ್ಮ ಪರ್ಫಾರ್ಮೆನ್ಸ್​ ಅನ್ನು ಕಡಿಮೆ ಮಾಡುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ