ನಿಮ್ಮ ಮಗುವಿಗೆ ಜ್ಞಾಪಕಶಕ್ತಿ ಕೊರತೆಯಿದೆಯೇ?; ಕಬ್ಬಿಣಾಂಶ ಕಡಿಮೆ ಇರಬಹುದು ಎಚ್ಚರ!

ಶಿಶುಗಳು ಹುಟ್ಟುವಾಗಲೇ ತಮ್ಮ ದೇಹದಲ್ಲಿ ಕಬ್ಬಿಣದ ಅಂಶದ ಸಂಗ್ರಹದೊಂದಿಗೆ ಜನಿಸುತ್ತವೆ. ಆದರೆ ಮಗುವಿನ ಬೆಳವಣಿಗೆಯನ್ನು ಉತ್ತೇಜಿಸಲು ಹೆಚ್ಚುವರಿ ಕಬ್ಬಿಣದಂಶದ ಅಗತ್ಯವಿದೆ. ಕಬ್ಬಿಣವು ಆಮ್ಲಜನಕವನ್ನು ಶ್ವಾಸಕೋಶದಿಂದ ದೇಹದ ಉಳಿದ ಭಾಗಗಳಿಗೆ ಸಾಗಿಸಲು ಸಹಾಯ ಮಾಡುತ್ತದೆ.

ನಿಮ್ಮ ಮಗುವಿಗೆ ಜ್ಞಾಪಕಶಕ್ತಿ ಕೊರತೆಯಿದೆಯೇ?; ಕಬ್ಬಿಣಾಂಶ ಕಡಿಮೆ ಇರಬಹುದು ಎಚ್ಚರ!
ಸಾಂದರ್ಭಿಕ ಚಿತ್ರImage Credit source: iStock
Follow us
ಸುಷ್ಮಾ ಚಕ್ರೆ
|

Updated on: Oct 05, 2023 | 12:17 PM

ನಿಮ್ಮ ಮಗು ಯಾವುದನ್ನೂ ನೆನಪಿನಲ್ಲಿಟ್ಟುಕೊಳ್ಳುವುದಿಲ್ಲವೇ? ಮಗುವಿಗೆ ಮರೆವಿನ ಸಮಸ್ಯೆ ಇದೆಯೇ? ಹಾಗಾದರೆ ನಿಮ್ಮ ಮಗುವಿನ ದೇಹದಲ್ಲಿ ಕಬ್ಬಿಣದ ಅಂಶದ ಕೊರತೆಯಿದೆ ಎಂದು ಅರ್ಥ. ಕಬ್ಬಿಣಾಂಶದ ಕೊರತೆ ಇರುವ ಮಕ್ಕಳು ಐಕ್ಯೂ, ಮೆಮೊರಿ, ನಿದ್ರೆ ಮತ್ತು ನಡವಳಿಕೆಯಲ್ಲಿ ಸಮಸ್ಯೆಗಳನ್ನು ಹೊಂದಿರುತ್ತಾರೆ. ಜ್ವರದೊಂದಿಗೆ ರಕ್ತಹೀನತೆಯ ಸಮಸ್ಯೆಯನ್ನು ಕೂಡ ಇಂತಹ ಮಕ್ಕಳು ಎದುರಿಸಬೇಕಾಗುತ್ತದೆ ಎಂದು ಬೆಂಗಳೂರಿನ ಡಿಹೆಚ್‌ಇಇ ಆಸ್ಪತ್ರೆಗಳ ಹಿರಿಯ ಮಕ್ಕಳ ತಜ್ಞರಾದ ಡಾ. ಸುಪ್ರಜಾ ಚಂದ್ರಶೇಖರ್ ಹೇಳಿದ್ದಾರೆ.

ಶಿಶುಗಳು ಹುಟ್ಟುವಾಗಲೇ ತಮ್ಮ ದೇಹದಲ್ಲಿ ಕಬ್ಬಿಣದ ಅಂಶದ ಸಂಗ್ರಹದೊಂದಿಗೆ ಜನಿಸುತ್ತವೆ. ಆದರೆ ಮಗುವಿನ ಬೆಳವಣಿಗೆಯನ್ನು ಉತ್ತೇಜಿಸಲು ಹೆಚ್ಚುವರಿ ಕಬ್ಬಿಣದಂಶದ ಅಗತ್ಯವಿದೆ.

ಕೆಲವು ತಿಂಗಳ ಹಿಂದೆ ಜ್ವರ, ಕೆಮ್ಮು ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಒಂದೂವರೆ ವರ್ಷದ ಮಗುವಿನ ಉದಾಹರಣೆಯನ್ನು ಡಾ. ಸುಪ್ರಜಾ ಚಂದ್ರಶೇಖರ್ ನೆನಪಿಸಿಕೊಂಡಿದ್ದಾರೆ. ಆ ಹೆಣ್ಣು ಮಗುವಿಗೆ ಆಮ್ಲಜನಕದ ಬೆಂಬಲದ ಅಗತ್ಯವಿತ್ತು. ಆಕೆಯಲ್ಲಿ ನ್ಯುಮೋನಿಯಾದ ಲಕ್ಷಣಗಳಿತ್ತು. ಸೆಪ್ಟಿಕ್ ಶಾಕ್ ಎಂಬ ತೊಂದರೆಗೂ ಸಿಲುಕಿದ್ದಳು. ಎಲ್ಲಾ ಚಿಕಿತ್ಸಾ ತಂತ್ರಗಳನ್ನು ಮಾಡಿದರೂ ಆ ಮಗುವಿನ ಆರೋಗ್ಯದಲ್ಲಿ ಸುಧಾರಣೆ ಉಂಟಾಗಲಿಲ್ಲ. ಆಕೆಯ ರಕ್ತ ಪರೀಕ್ಷೆ ಮಾಡಿದಾಗ ತೀವ್ರ ರಕ್ತಹೀನತೆ ಇರುವುದು ಗೊತ್ತಾಯಿತು. ಆಕೆಯ ಹಿಮೋಗ್ಲೋಬಿನ್ ಕೌಂಟ್ 6.7 ಆಗಿತ್ತು. ಪರೀಕ್ಷೆಯಲ್ಲಿ ತೀವ್ರ ಕಬ್ಬಿಣದ ಕೊರತೆ ಕಂಡುಬಂದಿತ್ತು, ಬೇರೆ ಯಾವುದೇ ಸಮಸ್ಯೆ ಆಕೆಗೆ ಇರಲಿಲ್ಲ. ಆ ಮಗು ಏನು ಆಹಾರ ಸೇವಿಸುತ್ತಿತ್ತು ಎಂಬ ಬಗ್ಗೆ ಪೋಷಕರಲ್ಲಿ ಕೇಳಿದಾಗ ಮಗುವಿಗೆ ಮೊದಲಿನಿಂದಲೂ ಹಸುವಿನ ಹಾಲನ್ನು ನೀಡುತ್ತಿದ್ದುದು ಗೊತ್ತಾಯಿತು. ಅಲ್ಲದೆ, ಆಕೆಯ ವಯಸ್ಸಿಗೆ ಸರಿಯಾಗಿ ಬೇಕಾದ ಸಪ್ಲಿಮೆಂಟರಿ ಆಹಾರವನ್ನು ಆಕೆಯ ಪೋಷಕರು ಇನ್ನೂ ಆರಂಭಿಸಿರಲಿಲ್ಲ. ಇದರಿಂದ ಆ ಮಗು ಕುಪೋಷಣೆಗೆ ಒಳಗಾಗಿತ್ತು. 5 ದಿನ ಐಸಿಯುನಲ್ಲಿ, 3 ದಿನ ವಾರ್ಡ್​ನಲ್ಲಿಟ್ಟು ಚಿಕಿತ್ಸೆ ನೀಡಿದ ಬಳಿಕ ಆ ಮಗುವನ್ನು ಡಿಸ್ಚಾರ್ಜ್ ಮಾಡಿದೆವು ಎಂದು ಹೇಳಿದ್ದಾರೆ.

ಇದನ್ನೂ ಓದಿ: Iron Rich Drink: ನಿಮ್ಮ ದೇಹದಲ್ಲಿ ಕಬ್ಬಿಣದ ಕೊರತೆಯುಂಟಾಗಿದ್ದರೆ, ಈ ಜ್ಯೂಸ್​ಗಳನ್ನು ಕುಡಿಯಿರಿ

ಕಬ್ಬಿಣ ಹಿಮೋಗ್ಲೋಬಿನ್‌ಗೆ ಅಗತ್ಯವಾದ ಪ್ರಮುಖ ಅಂಶವಾಗಿದೆ. ಹಲವಾರು ಸೆಲ್ಯುಲಾರ್ ಪ್ರಕ್ರಿಯೆಗಳಲ್ಲಿ ಇದು ತೊಡಗಿಸಿಕೊಂಡಿದೆ. ಕಬ್ಬಿಣದ ಕೊರತೆಯಿರುವ ಮಕ್ಕಳಲ್ಲಿ ಜ್ಞಾಪಕಶಕ್ತಿಯ ಸಮಸ್ಯೆ ಮತ್ತು ನಡವಳಿಕೆಯ ಸಮಸ್ಯೆಗಳನ್ನು ಹೊಂದಿರುತ್ತಾರೆ. ಡಾ. ಬೆಂಗಳೂರಿನಂತಹ ನಗರಗಳಲ್ಲಿ 2 ಮಕ್ಕಳಲ್ಲಿ ಒಬ್ಬರಿಗೆ ಕಬ್ಬಿಣದ ಕೊರತೆಯಿದೆ. ಮಕ್ಕಳಲ್ಲಿ ಕಬ್ಬಿಣದ ಕೊರತೆಯ ರಕ್ತಹೀನತೆ ಕೆಲವೊಮ್ಮೆ ಗಮನಕ್ಕೆ ಬರುವುದಿಲ್ಲ. ಇದು ಗಂಭೀರ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಕೆಲವೊಮ್ಮೆ ತೀವ್ರವಾದ ರಕ್ತಹೀನತೆಯಿಂದಾಗಿ 3-4 gm/dl ಗಿಂತ ಕಡಿಮೆ ಹಿಮೋಗ್ಲೋಬಿನ್ ಉಂಟಾಗಿ ಹೃದಯಾಘಾತ ಉಂಟಾದ ಉದಾಹರಣೆಗಳೂ ಇವೆ. ಕಬ್ಬಿಣದ ಕೊರತೆಯಿಂದ ರಕ್ತಹೀನತೆ ಉಂಟಾಗಿ ಪಾರ್ಶ್ವವಾಯು ಕೂಡ ಸಂಭವಿಸಬಹುದು ಎನ್ನುತ್ತಾರೆ ವೈದ್ಯರು.

ಕಬ್ಬಿಣವು ನಿಮ್ಮ ಮಗುವಿನ ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶವಾಗಿದೆ. ಆದರೆ ಕೆಲವು ಮಕ್ಕಳು ಸಾಕಷ್ಟು ಕಬ್ಬಿಣಾಂಶವನ್ನು ಹೊಂದಿರುವುದಿಲ್ಲ. ಮಕ್ಕಳಲ್ಲಿ ಕಬ್ಬಿಣದ ಕೊರತೆಗೆ ಕಾರಣವೇನು? ಅದನ್ನು ಹೇಗೆ ಗುರುತಿಸುವುದು? ಮತ್ತು ಅದನ್ನು ತಡೆಯುವುದು ಹೇಗೆ? ಎಂಬ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಹುಟ್ಟುವಾಗಲೇ ಮಗು ಮೃತಪಟ್ಟಿತ್ತು ಎಂದಿದ್ದ ವೈದ್ಯರು, ಅಂತ್ಯಕ್ರಿಯೆ ವೇಳೆ ಕಣ್ಣು ತೆರೆದ ಶಿಶು

ಮಕ್ಕಳಿಗೆ ಕಬ್ಬಿಣದ ಅಂಶ ಏಕೆ ಮುಖ್ಯ?:

ಕಬ್ಬಿಣವು ಆಮ್ಲಜನಕವನ್ನು ಶ್ವಾಸಕೋಶದಿಂದ ದೇಹದ ಉಳಿದ ಭಾಗಗಳಿಗೆ ಸಾಗಿಸಲು ಸಹಾಯ ಮಾಡುತ್ತದೆ. ಸ್ನಾಯುಗಳು ಆಮ್ಲಜನಕವನ್ನು ಸಂಗ್ರಹಿಸಲು ಮತ್ತು ಬಳಸಲು ಸಹಾಯ ಮಾಡುತ್ತದೆ. ನಿಮ್ಮ ಮಗುವಿನ ಆಹಾರದಲ್ಲಿ ಕಬ್ಬಿಣದ ಕೊರತೆಯಿದ್ದರೆ ಆ ಮಗು ಕಬ್ಬಿಣದ ಕೊರತೆಯಿಂದಾಗುವ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಕಬ್ಬಿಣದ ಕೊರತೆಯಿಂದ ಯಾರಿಗೆ ಅಪಾಯ ಜಾಸ್ತಿ?:

– ಅವಧಿಗೂ ಮುನ್ನ ಜನಿಸಿದ ಅಥವಾ ಕಡಿಮೆ ತೂಕ ಹೊಂದಿರುವ ಶಿಶುಗಳು.

– 1 ವರ್ಷಕ್ಕಿಂತ ಮೊದಲು ಹಸುವಿನ ಹಾಲು ಅಥವಾ ಮೇಕೆ ಹಾಲು ಕುಡಿಯುವ ಶಿಶುಗಳು.

– 6 ತಿಂಗಳ ವಯಸ್ಸಿನ ನಂತರ ಕಬ್ಬಿಣವನ್ನು ಹೊಂದಿರುವ ಪೂರಕ ಆಹಾರವನ್ನು ಸೇವಿಸದ ಶಿಶುಗಳು.

– ದೀರ್ಘಕಾಲದ ಸೋಂಕುಗಳು ಅಥವಾ ನಿರ್ಬಂಧಿತ ಆಹಾರಗಳಂತಹ ಕೆಲವು ಆರೋಗ್ಯ ಸಮಸ್ಯೆಗಳನ್ನು ಹೊಂದಿರುವ ಮಕ್ಕಳು.

– ಸಾಕಷ್ಟು ಕಬ್ಬಿಣಾಂಶವಿರುವ ಆಹಾರವನ್ನು ಸೇವಿಸದ ಮಕ್ಕಳು.

– ಅಧಿಕ ತೂಕ ಅಥವಾ ಬೊಜ್ಜು ಹೊಂದಿರುವ ಮಕ್ಕಳು.

ಮಕ್ಕಳಲ್ಲಿ ಕಬ್ಬಿಣದ ಕೊರತೆಯ ಲಕ್ಷಣಗಳೇನು?:

– ತೆಳುವಾದ ಚರ್ಮ.

– ಆಯಾಸ.

– ತಣ್ಣನೆಯ ಕೈಗಳು ಮತ್ತು ಪಾದಗಳು.

– ನಿಧಾನಗತಿಯ ಬೆಳವಣಿಗೆ ಮತ್ತು ಅಭಿವೃದ್ಧಿ.

– ಹಸಿವಾಗದಿರುವುದು.

– ಅಸಹಜವಾಗಿ ಜೋರಾಗಿ ಉಸಿರಾಡುವುದು.

– ವರ್ತನೆಯ ಸಮಸ್ಯೆಗಳು.

– ಆಗಾಗ ಸೋಂಕು ಕಾಣಿಸಿಕೊಳ್ಳುವುದು.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ