ಹುಟ್ಟುವಾಗಲೇ ಮಗು ಮೃತಪಟ್ಟಿತ್ತು ಎಂದಿದ್ದ ವೈದ್ಯರು, ಅಂತ್ಯಕ್ರಿಯೆ ವೇಳೆ ಕಣ್ಣು ತೆರೆದ ಶಿಶು

ಮಗುವನ್ನು ನೋಡಲು 9 ತಿಂಗಳು ತಾಯಿ ಕಾತುರದಿಂದ ಕಾಯುತ್ತಿರುತ್ತಾಳೆ, ಯಾವಾಗ ಮಗುವನ್ನು ಎತ್ತಿಕೊಂಡು ಮುದ್ದಾಡುತ್ತೀನೋ ಎಂದು ಕನಸು ಕಂಡಿರುತ್ತಾಳೆ, ಅದೇ ಮಗು ಹುಟ್ಟಿದಾಕ್ಷಣ ಸತ್ತೇ ಹೋಗಿದೆ ಎಂದರೆ ಆ ತಾಯಿಗೆ ಹೇಗಾಗಬೇಡ ಹೇಳಿ. ಅದೇ ಮಗು ಕೊನೆಯ ಕ್ಷಣದಲ್ಲಿ ಬದುಕಿಬಂದರೆ ಎಲ್ಲಿಲ್ಲದ ಸಂತಸ. ಅಸ್ಸಾಂನ ಸಿಲ್ಚಾರ್ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರು ಸಾವನ್ನಪ್ಪಿದೆ ಎಂದು ಘೋಷಿಸಿದ್ದ ಮಗು ಅಂತ್ಯ ಕ್ರಿಯೆ ವೇಳೆ ಕಣ್ಣು ತೆರೆದಿರುವ ಘಟನೆ ನಡೆದಿದೆ.

ಮಗುImage Credit source: Moneycontrol.com
Follow us
ನಯನಾ ರಾಜೀವ್
|

Updated on: Oct 05, 2023 | 10:02 AM

ಮಗುವನ್ನು ನೋಡಲು 9 ತಿಂಗಳು ತಾಯಿ ಕಾತುರದಿಂದ ಕಾಯುತ್ತಿರುತ್ತಾಳೆ, ಯಾವಾಗ ಮಗುವನ್ನು ಎತ್ತಿಕೊಂಡು ಮುದ್ದಾಡುತ್ತೀನೋ ಎಂದು ಕನಸು ಕಂಡಿರುತ್ತಾಳೆ, ಅದೇ ಮಗು ಹುಟ್ಟಿದಾಕ್ಷಣ ಸತ್ತೇ ಹೋಗಿದೆ ಎಂದರೆ ಆ ತಾಯಿಗೆ ಹೇಗಾಗಬೇಡ ಹೇಳಿ. ಅದೇ ಮಗು ಕೊನೆಯ ಕ್ಷಣದಲ್ಲಿ ಬದುಕಿಬಂದರೆ ಎಲ್ಲಿಲ್ಲದ ಸಂತಸ. ಅಸ್ಸಾಂನ ಸಿಲ್ಚಾರ್ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರು ಸಾವನ್ನಪ್ಪಿದೆ ಎಂದು ಘೋಷಿಸಿದ್ದ ಮಗು ಅಂತ್ಯ ಕ್ರಿಯೆ ವೇಳೆ ಕಣ್ಣು ತೆರೆದಿರುವ ಘಟನೆ ನಡೆದಿದೆ.

ರತನ್ ದಾಸ್ ಅವರು ತಮ್ಮ ಗರ್ಭಿಣಿ ಪತ್ನಿಯನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ವೈದ್ಯರು ಹಲವು ತೊಡಕುಗಳಿಂದಾಗಿ ತಾಯಿ ಅಥವಾ ಮಗು ಯಾವುದಾದರೊಂದನ್ನು ಮಾತ್ರ ಉಳಿಸಲು ಸಾಧ್ಯ ಎಂದು ಹೇಳಿದ್ದರು. ನಾವು ಅವರಿಗೆ ಹೆರಿಗೆ ಮಾಡಲು ಅವಕಾಶ ಮಾಡಿಕೊಟ್ಟಿದ್ದೆವು, ಅವರ ಪತ್ನಿ ಸತ್ತ ಮಗುವಿಗೆ ಜನ್ಮ ನೀಡಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ, ಮಗುವನ್ನು ಮೃತದೇಹವನ್ನು ತೆಗೆದುಕೊಂಡು ಮನೆಗೆ ಹೋದೆವು. ಶವವನ್ನು ಪ್ಯಾಕೆಟ್‌ನಲ್ಲಿ ಕೊಟ್ಟಿದ್ದರು, ನಂತರ ಶವವನ್ನು ಸ್ಮಶಾನಕ್ಕೆ ಕೊಂಡೊಯ್ದರು.

ಸಿಲ್ಚಾರ್ ಸ್ಮಶಾನವನ್ನು ತಲುಪಿದ ನಂತರ, ಅಂತಿಮ ಸಂಸ್ಕಾರದ ಮೊದಲು ಪ್ಯಾಕೆಟ್ ಅನ್ನು ತೆರೆದಾಗ, ಮಗು ಅಳುತ್ತಿತ್ತು. ತಕ್ಷಣ ಮತ್ತೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಶ್ರೀದಾಸ್ ಹೇಳಿದ್ದಾರೆ.

ಮತ್ತಷ್ಟು ಓದಿ: ಮಹಾರಾಷ್ಟ್ರದ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಒಂದೇ ದಿನದಲ್ಲಿ 12 ನವಜಾತ ಶಿಶುಗಳು ಸೇರಿ 24 ಮಂದಿ ಸಾವು

ಘಟನೆ ನಡೆದ ಕೂಡಲೇ ಸಿಲ್ಚಾರ್‌ನ ಮಾಲಿನಿಬಿಲ್ ಪ್ರದೇಶದ ಜನರ ಗುಂಪೊಂದು ಖಾಸಗಿ ಆಸ್ಪತ್ರೆ ಎದುರು ಜಮಾಯಿಸಿ ಆಸ್ಪತ್ರೆಯ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು.

ಇದೇ ವೇಳೆ ಕರ್ತವ್ಯ ನಿರ್ಲಕ್ಷ್ಯದ ಆರೋಪದ ಮೇಲೆ ಕುಟುಂಬಸ್ಥರು ಆಸ್ಪತ್ರೆ ಹಾಗೂ ವೈದ್ಯರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಮತ್ತೊಂದೆಡೆ, ಆಸ್ಪತ್ರೆಯ ಅಧಿಕಾರಿಗಳು ಮಗುವನ್ನು ಸತ್ತಿದೆ ಎಂದು ಘೋಷಿಸುವ ಮೊದಲು ಎಂಟು ಗಂಟೆಗಳ ಕಾಲ ಮಗುವನ್ನು ನಿಗಾದಲ್ಲಿ ಇರಿಸಿದ್ದರು ಎಂದು ಹೇಳಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ