ವೇಯ್ಟರ್ ಮೇಲೆ ಬಿಸಿ ಬಿಸಿ ಕಾಫಿ ಎರಚಿದ ಮಹಿಳೆ, ಅಷ್ಟಕ್ಕೂ ಆತ ಮಾಡಿದ ತಪ್ಪೇನು?

ಮೆಕ್‌ಡೊನಾಲ್ಡ್ಸ್‌ನಲ್ಲಿ ಕಾಫಿ ನೀಡುವುದು ವಿಳಂಬವಾದ ಕಾರಣಕ್ಕೆ ಅಮೆರಿಕದಲ್ಲಿ ಮಹಿಳೆಯೊಬ್ಬರು ಸಿಬ್ಬಂದಿ ಮೇಲೆ ಬಿಸಿ ಕಾಫಿ ಎರಚಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗಿದ್ದು, ಪೊಲೀಸರು ಕ್ಯಾಶರಾ ಬ್ರೌನ್ ಎಂಬ ಮಹಿಳೆಯ ಬಂಧನಕ್ಕೆ ವಾರಂಟ್ ಹೊರಡಿಸಿದ್ದಾರೆ. ಇದೀಗ ಈ ವಿಡಿಯೋ ನೋಡಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೇಯ್ಟರ್ ಮೇಲೆ ಬಿಸಿ ಬಿಸಿ ಕಾಫಿ ಎರಚಿದ ಮಹಿಳೆ, ಅಷ್ಟಕ್ಕೂ ಆತ ಮಾಡಿದ ತಪ್ಪೇನು?
ವೈರಲ್​​ ವಿಡಿಯೋ
Image Credit source: social Media

Updated on: Nov 10, 2025 | 1:05 PM

ಕಾಫಿ ಆರ್ಡರ್​ ಮಾಡಿ 1 ಗಂಟೆಯಾದರೂ  ಇನ್ನೂ ಬಂದಿಲ್ಲ ಎಂದು ಮಹಿಳೆಯೊಬ್ಬರು ಮೆಕ್‌ಡೊನಾಲ್ಡ್ಸ್ ಸಿಬ್ಬಂದಿ ಮೇಲೆ ಬಿಸಿ ಬಿಸಿ ಕಾಫಿ (Hot Coffee) ಎರಚಿರುವ ಘಟನೆ ಅಮೆರಿಕದಲ್ಲಿ ನಡೆದಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ವಿಡಿಯೋವನ್ನು ಬ್ಯೂನಾ ವಿಸ್ಟಾ ಪೊಲೀಸ್ ಇಲಾಖೆ ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಮಹಿಳೆಯೊಬ್ಬರು ಮಿಚಿಗನ್ ಎಂಬ ಕಾಫಿ ಶಾಪ್​​​​ನ ವ್ಯವಸ್ಥಾಪಕರ ಜತೆಗೆ ಒಂದು ಗಂಟೆಯಾದರೂ ಕಾಫಿ ನೀಡದಿದ್ದಕ್ಕೆ ವಾಗ್ವಾದ ನಡೆಸಿರುವುದು ತೋರಿಸಲಾಗಿದೆ. ಈ ವೇಳೆ ಅಲ್ಲಿನ ಸಿಬ್ಬಂದಿ ಮಹಿಳೆಯನ್ನು ಎಷ್ಟೇ ಸಮಾಧಾನ ಮಾಡಿದ್ರೂ, ಮಹಿಳೆ ಮಾತ್ರ ಶಾಂತವಾಗಿಲ್ಲ, ಮಹಿಳೆಯೂ ಸಿಬ್ಬಂದಿಯನ್ನು ಸುಳ್ಳುಗಾರ ಎಂದು ಕರೆಯುವುದನ್ನು ಈ ವಿಡಿಯೋದಲ್ಲಿ ನೋಡಬಹುದು.

ಮೇಡಂ ನಿಮ್ಮ ಕಾಫಿ ಬಂದಿದೆ ಸ್ವೀಕರಿಸಿ, ನಿಮಗೆ ಶುಲ್ಕ ವಿಧಿಸಲಾಗಿದೆ ಅಷ್ಟೇ. ಮರುಪಾವತಿಗೆ 48 ಗಂಟೆಗಳವರೆಗೆ ತೆಗೆದುಕೊಳ್ಳುತ್ತದೆ ಎಂದು ಮೆಕ್‌ಡೊನಾಲ್ಡ್ಸ್ ಸಿಬ್ಬಂದಿ ಹೇಳಿ ಹಿಂದಿರುಗಿ ಹೋಗಿದ್ದಾರೆ. ಈ ವೇಳೆ ಕೋಪಗೊಂಡ ಮಹಿಳೆ, ಬಿಸಿ ಬಿಸಿ ಕಾಫಿಯನ್ನು ಸಿಬ್ಬಂದಿಯ ಬೆನ್ನಿನ ಮೇಲೆ ಎರಚಿದ್ದಾರೆ. ಇನ್ನು ಮಹಿಳೆಯನ್ನು 48 ವರ್ಷದ ಕ್ಯಾಶರಾ ಬ್ರೌನ್ ಎಂದು ಪೊಲೀಸರು ಗುರುತಿಸಿದ್ದು,  ಅಧಿಕಾರಿಗಳು ಸಾಮಾಜಿಕ ಮಾಧ್ಯಮದಲ್ಲಿ ಈ ಆತಂಕಕಾರಿ ವೀಡಿಯೊವನ್ನು ಪೋಸ್ಟ್ ಮಾಡಿದ ನಂತರ ಕ್ಯಾಶರಾ ಬ್ರೌನ್ ಅವರ ಬಂಧನಕ್ಕೆ ವಾರಂಟ್ ಹೊರಡಿಸಲಾಗಿದೆ.

ಇದನ್ನೂ ಓದಿ: ಹೊರಗಿನ ಊಟದಿಂದ ಮನೆ ಊಟಕ್ಕೆ ಶಿಫ್ಟ್​​: ಸಣ್ಣ ಉಳಿತಾಯದಿಂದ ಭಾರೀ ಲಾಭ, ಜೇಬಲ್ಲೇ ಉಳಿಯಿತು ಸಾವಿರಾರು ರೂ!

ವೈರಲ್​​ ವಿಡಿಯೋ: 

ಈ ವಿಡಿಯೋವನ್ನು ನೋಡಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮಹಿಳೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಹೇಳಿದ್ದಾರೆ. ಮಹಿಳೆಯನ್ನು ನ್ಯಾಯಂಗ ಬಂಧನಕ್ಕೆ ಒಳಪಡಿಸುವಂತೆ ಒಬ್ಬರು ಒತ್ತಾಯಿಸಿದ್ದಾರೆ. ಮೆಕ್‌ಡೊನಾಲ್ಡ್ಸ್ ಸಿಬ್ಬಂದಿ ನಾನು ನಿಲ್ಲುತ್ತೇನೆ. ಅವರಿಗೆ ನ್ಯಾಯ ಸಿಗಲೇಬೇಕು. ಹಾಗೂ ಆ ಮಹಿಳೆಗೆ ಶಿಕ್ಷೆ ನೀಡಲೇಬೇಕು ಎಂದು ಮತ್ತೊಬ್ಬರು ಹೇಳಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Loading...
Unable to load recommendations.
Follow Us