ಹೊರಗಿನ ಊಟದಿಂದ ಮನೆ ಊಟಕ್ಕೆ ಶಿಫ್ಟ್: ಸಣ್ಣ ಉಳಿತಾಯದಿಂದ ಭಾರೀ ಲಾಭ, ಜೇಬಲ್ಲೇ ಉಳಿಯಿತು ಸಾವಿರಾರು ರೂ!
ಚೆನ್ನೈನ ವ್ಯಕ್ತಿಯೊಬ್ಬರು ಪ್ರತಿದಿನ ಝೊಮ್ಯಾಟೋದಲ್ಲಿ 200-₹300 ರೂ.ಗೆ ಊಟ ಆರ್ಡರ್ ಮಾಡುತ್ತಿದ್ದವರು, ಇದೀಗ ದಿನಕ್ಕೆ 60 ರೂ. ಖರ್ಚು ಮಾಡುತ್ತಿದ್ದಾರೆ. ಈ ಬಗ್ಗೆ ಅವರ ಸ್ನೇಹಿತರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಒಂದು ಊಟಕ್ಕೆ 200ರಿಂದ 300 ರೂ. ಖರ್ಚು ಮಾಡುತ್ತಿದ್ದ ನನ್ನ ಸ್ನೇಹಿತ, ತನ್ನ ದಿನದ ಖರ್ಚಿನಲ್ಲಿ ದೊಡ್ಡ ಮಟ್ಟದ ಬದಲಾವಣೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಬೆಂಗಳೂರು, ದೆಹಲಿಯಂತಹ ದೊಡ್ಡ ದೊಡ್ಡ ನಗರದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಚೆನ್ನೈನ ವ್ಯಕ್ತಿಯೊಬ್ಬರು ಪ್ರತಿದಿನದ ಊಟದ ಖರ್ಚನ್ನು (daily meal expenses) ಕಡಿಮೆ ಮಾಡುವುದು ಹೇಗೆ? ಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟಿಪ್ಸ್ ನೀಡಿದ್ದಾರೆ. ಇದೀಗ ಇವರು ನೀಡಿರುವ ಸಲಹೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರೆಡ್ಡಿಟ್‌ನಲ್ಲಿ ವ್ಯಕ್ತಿಯೊಬ್ಬರು ತಮ್ಮ ಸಹೋದ್ಯೋಗಿ ದಿನನಿತ್ಯದ ಖರ್ಚಿನಲ್ಲಿ ಮಾಡಿದ ಬದಲಾವಣೆ ಬಗ್ಗೆ ಹಂಚಿಕೊಂಡಿದ್ದಾರೆ. “ನನ್ನ ಆಫೀಸ್ ಸ್ನೇಹಿತ ಪ್ರತಿದಿನ ಝೊಮ್ಯಾಟೊದಲ್ಲಿ ಫುಡ್ ಆರ್ಡರ್ ಮಾಡುತ್ತಿದ್ದರು, ಒಂದು ಊಟಕ್ಕೆ 200ರಿಂದ 300 ರೂ. ಖರ್ಚು ಆಗುತ್ತಿತ್ತು. ಆದರೆ ಈಗ ಅವರು ತಮ್ಮ ಮನೆಯಿಂದ ಬಾಕ್ಸ್ ತರುತ್ತಿದ್ದಾರೆ. ಇದರಿಂದ ತಮ್ಮ ದಿನನಿತ್ಯದ ಊಟದ ಖರ್ಚಿನಲ್ಲಿ ದೊಡ್ಡ ಮಟ್ಟದ ಉಳಿತಾಯವನ್ನು ಮಾಡುತ್ತಿದ್ದಾರೆ.” ಎಂದು ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಪ್ರತಿದಿನ ಅವರು ಸ್ಟೀಲ್ ಟಿಫಿನ್ನಲ್ಲಿ ಲೆಮನ್ ರೈಸ್, ಜತೆಗೆ ಒಂದು ಕಪ್ ಮೊಸರು ಮತ್ತು ಸ್ವಲ್ಪ ಹಪ್ಪಳ, ಇದು ಅವರ ಪ್ರತಿದಿನದ ಊಟ ಆಗಿತ್ತು. ಜ್ಯೂಸ್, ಟೀ, ಕಾಫಿ ಕುಡಿಯುವುದನ್ನು ಕೂಡ ಬಿಟ್ಟಿದ್ದಾರೆ. ಈಗ ಅವರ ದಿನದ ಖರ್ಚು 60 ರೂ., ಆಫೀಸ್ನಲ್ಲಿ ನೀರು ಬಿಟ್ಟು ಬೇರೆ ಯಾವುದನ್ನೂ ಕೂಡ ತೆಗೆದುಕೊಳ್ಳುವುದಿಲ್ಲ ಎಂದು ರೆಡ್ಡಿಟ್‌ನಲ್ಲಿ ಹೇಳಿಕೊಂಡಿದ್ದಾರೆ. ಝೊಮ್ಯಾಟೊದಲ್ಲಿ 200ರಿಂದ 300 ರೂ. ವರೆಗಿನ ಆಹಾರಗಳನ್ನು ಆರ್ಡರ್ ಮಾಡುತಿದ್ದಾಗ ಅವರಿಗೆ ತಿಂಗಳಿಗೆ 6,000 ರೂ.ಕ್ಕಿಂತ ಹೆಚ್ಚು ಖರ್ಚಾಗುತ್ತಿತ್ತು. ಇನ್ನು ವೀಕೆಂಡ್ನಲ್ಲಿ ಇದಕ್ಕಿಂತ ಹೆಚ್ಚು ಖರ್ಚು ಮಾಡುತ್ತಿದ್ದರು. ಅವರು ಪ್ರತಿದಿನ ರಾತ್ರಿಯೇ ಎಲ್ಲ ಅಡುಗೆ ಮಾಡಿ ಫ್ರಿಡ್ಜ್‌ನಲ್ಲಿ ಇಟ್ಟು ಬೆಳಿಗ್ಗೆ ಬಿಸಿ ಮಾಡಿ ಲಂಚ್ ಬಾಕ್ಸ್ಗೆ ಹಾಕಿ ತರುತ್ತಾರೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ:
My coworker eats the same ₹60 South Indian lunch every day… and I can’t stop respecting him byu/Late_Mousse_7801 inFrugal_Ind
ದುಬಾರಿ ಕಾಫಿ ಸೇವನೆ ಇಲ್ಲ:
ವಾರದಲ್ಲಿ ಎರಡು–ಮೂರು ಬಾರಿ ದುಬಾರಿ ಕಾಫಿ ಕುಡಿಯುತ್ತಿದ್ದರು, ಒಂದು ಕಾಫಿಗೆ 200 ರೂ., ಆದರೆ ಈಗ ಆಫೀಸ್ ಮುಂದೆ ಇರುವ ಚಿಕ್ಕ ಕ್ಯಾಂಟೀನ್ನಲ್ಲಿ 10 ರೂ. ಕಾಫಿ ಕುಡಿಯುತ್ತಿದ್ದಾರೆ. ಒಟ್ಟಾರೆಯಾಗಿ ಅವರ ಉಳಿತಾಯ ತುಂಬಾ ಪ್ರಯಾಣಿಕವಾಗಿದೆ. ಯಾರ ಮುಂದೆಯೂ ಈ ರೀತಿ ನಾಟಕ ಮಾಡುತ್ತಿಲ್ಲ. ಅವರಿಗೆ ಸರಳ ಜೀವನದಿಂದ ನೆಮ್ಮದಿ ಇದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಂಗೆ ಹುಷಾರಿಲ್ಲ, ರಜೆ ಬೇಡ ಬ್ರೇಕ್ ಕೊಡಿ; ಮ್ಯಾನೇಜರ್ ರಿಪ್ಲೈ ನೋಡಿ ಶಾಕ್ ಆದ ಉದ್ಯೋಗಿ
ನೆಟ್ಟಿಗರ ಕಮೆಂಟ್ ಹೀಗಿತ್ತು
ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ನಾನು ಪ್ರತಿದಿನ ಮನೆಯಲ್ಲೇ ಅಡುಗೆ ಮಾಡಿ ಆಫೀಸ್ಗೆ ತೆಗೆದುಕೊಂಡು ಹೋಗುತ್ತೇನೆ. ಊಟ, ರೊಟ್ಟಿ, ಹಣ್ಣುಗಳು ಮಾತ್ರ ನನ್ನ ದಿನನಿತ್ಯ ಆಹಾರ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಮನೆಯಲ್ಲಿ ಊಟ ತಯಾರಿಸಿ ತೆಗೆದುಕೊಂಡು ಹೋಗುವುದರಿಂದ ಖರ್ಚು ಕಡಿಮೆ, ಆರೋಗ್ಯವಾಗಿ ಕೂಡ ಇರುತ್ತದೆ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
