AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ನಂಗೆ ಹುಷಾರಿಲ್ಲ, ರಜೆ ಬೇಡ ಬ್ರೇಕ್ ಕೊಡಿ; ಮ್ಯಾನೇಜರ್ ರಿಪ್ಲೈ ನೋಡಿ ಶಾಕ್ ಆದ ಉದ್ಯೋಗಿ

ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಹುಷಾರಿಲ್ಲವೆಂದಾಗ ರಜೆ ಕೊಡಲು ಬಾಸ್ ಹಿಂದೇಟು ಹಾಕುತ್ತಾರೆ. ಇಂತಹ ಕಹಿ ಅನುಭವ ನಿಮಗೂ ಕೂಡ ಆಗಿರಬಹುದು. ಆದರೆ ಇಲ್ಲೊಬ್ಬ ಉದ್ಯೋಗಿಯೂ ಅನಾರೋಗ್ಯವಿದ್ರೂ ರಜೆ ತೆಗೆದುಕೊಳ್ಳದೇ ಕೆಲಸ ಮಾಡಿದ್ದಾರೆ. ಆದರೆ ಮ್ಯಾನೇಜರ್ ಮಾತ್ರ ಕರುಣೆಯಿಲ್ಲದೇ ವರ್ತಿಸಿದ್ದಾರೆ. ಈ ಬಗ್ಗೆ ಪೋಸ್ಟ್ ಹಂಚಿಕೊಂಡು ಉದ್ಯೋಗ ಸ್ಥಳದಲ್ಲಿನ ವಾಸ್ತವತೆಯನ್ನು ಬಿಚ್ಚಿಟ್ಟಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: ನಂಗೆ ಹುಷಾರಿಲ್ಲ, ರಜೆ ಬೇಡ ಬ್ರೇಕ್ ಕೊಡಿ; ಮ್ಯಾನೇಜರ್ ರಿಪ್ಲೈ ನೋಡಿ ಶಾಕ್ ಆದ ಉದ್ಯೋಗಿ
ಸಾಂದರ್ಭಿಕ ಚಿತ್ರImage Credit source: Pinterest
ಸಾಯಿನಂದಾ
|

Updated on:Nov 09, 2025 | 6:33 PM

Share

ನಮ್ಮ ಬಾಸ್ ಒಂದೇ ಒಂದು ರಜೆ ಕೇಳಿದ್ರು ಕೊಡಲ್ಲ. ಹುಷಾರಿಲ್ಲ ಅಂದ್ರೂ ಆಫೀಸಿಗೆ ಬಂದು ಕೆಲ್ಸ (job) ಮಾಡೋಕೆ ಹೇಳ್ತಾರೆ ಹೀಗೆನ್ನುವುದನ್ನು ಕೇಳಿರಬಹುದು. ಆರೋಗ್ಯ ಸರಿಯಲ್ಲ ಎಂದೇಳಿದ್ರೂ ಸುಳ್ಳು ಹೇಳುತ್ತಾರೆ ಅಂದುಕೊಳ್ತಾರೆ. ಆದರೆ ಇಲ್ಲೊಬ್ಬ ಉದ್ಯೋಗಿಯ (employee) ಪರಿಸ್ಥಿತಿಯೂ ಇದೇ ಆಗಿದೆ. ತೀವ್ರ ಜ್ವರದ ನಡುವೆಯೂ ಕೆಲಸ ಮಾಡುತ್ತಿದ್ದ ಉದ್ಯೋಗಿಗೆ ಮ್ಯಾನೇಜರ್ ನೀಡಿದ ಉತ್ತರವು ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ. ಉದ್ಯೋಗದ ಸ್ಥಳದಲ್ಲಿ ಸಹಾನುಭೂತಿ ಕೊರತೆ ಎದ್ದು ಕಾಣುತ್ತಿದೆ.

ಉದ್ಯೋಗಿಗೆ ಮ್ಯಾನೇಜರ್‌ ಕೊಟ್ಟ ರಿಪ್ಲೈ ಹೇಗಿತ್ತು ನೋಡಿ

r/Indianworkplace ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಉದ್ಯೋಗಿ ಮ್ಯಾನೇಜರ್ ಜತೆಗೆ ನಡೆಸಿದ ಸಂಭಾಷಣೆಯ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದಾರೆ. ನನಗೆ ಜ್ವರ ಇದೆ ಎಂದು ನನ್ನ ಮ್ಯಾನೇಜರ್‌ಗೆ ಹೇಳಿದೆ, ಇದು ಅವರ ಉತ್ತರ ಎಂದು ಪೋಸ್ಟ್‌ನ ಶೀರ್ಷಿಕೆ ಬರೆಯಲಾಗಿದೆ. ಈ ಸ್ಕ್ರೀನ್ ಶಾಟ್‌ನಲ್ಲಿ ನನಗೆ ತುಂಬಾ ಜ್ವರ ಬಂದಿದೆ, ನಾನು ರಜೆ ತೆಗೆದುಕೊಳ್ಳುತ್ತಿಲ್ಲ. ಕೆಲಸ ಮಧ್ಯೆ ವಿರಾಮಗಳನ್ನು ತೆಗೆದುಕೊಳ್ಳುತ್ತೇನೆ. ಇಲ್ಲ, ಇಂದಿನ ವಿತರಣೆಗೆ ತೊಂದರೆಯಾಗುತ್ತದೆ ಎಂದು ಸಂದೇಶದಲ್ಲಿ ಬರೆಯಲಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮ್ಯಾನೇಜರ್, ಸರಿ ಸಿಜೆಗೆ ಮಾಹಿತಿ ನೀಡಿ. ಯಾವಾಗಲೂ ವಿರಾಮದ ಸಮಯದಲ್ಲಿ ಯಾರಾದರೂ ಮೇಲ್ ಅನ್ನು ಟ್ರ್ಯಾಕ್ ಮಾಡುತ್ತಿದ್ದಾರೆ ಎಂದು ಖಚಿತಪಡಿಸಿಕೊಳ್ಳಿ ಎಂದು ಉತ್ತರಿಸಿರುವುದನ್ನು ನೋಡಬಹುದು.

ವೈರಲ್ ಪೋಸ್ಟ್ ಇಲ್ಲಿದೆ ನೋಡಿ

Told my manager I had fever, this was her reply byu/No_Brilliant_7338 inIndianWorkplace

ಈ ಸ್ಕ್ರೀನ್ ಶಾಟ್‌ನೊಂದಿಗೆ ಶುಕ್ರವಾರದ ದ್ವೀತಿಯಾರ್ಧದಲ್ಲಿ ತೀವ್ರ ಜ್ವರದಿಂದ ತೀವ್ರವಾಗಿ ಓಡುತ್ತಿದ್ದೆ. ನನ್ನ ಟೀಮ್ ಲೀಡರ್ ರಜೆಯಲ್ಲಿದ್ದ ಕಾರಣ, ಆ ದಿನ ನನಗೆ ಯಾವುದೇ ರೀತಿಯ ರಜೆ ನೀಡಲಾಗಲಿಲ್ಲ. ನನ್ನ ಮಹಿಳಾ ಮ್ಯಾನೇಜರ್‌ನಿಂದ ಸ್ವಲ್ಪ ಸೌಜನ್ಯ ಮತ್ತು ಎಚ್ಚರಿಕೆ ವಹಿಸಿ ಎಂಬ ಉತ್ತರವನ್ನು ನಿರೀಕ್ಷಿಸಲಾಗಿತ್ತು. ಊಹಿಸಿ, ನನಗೆ ಅದ್ಯಾವುದೂ ಸಿಗಲಿಲ್ಲ, ಬದಲಾಗಿ ಹೆಚ್ಚಿನ ಜವಾಬ್ದಾರಿಗಳು ಸಿಕ್ಕವು ಎಂದು ವ್ಯಂಗ್ಯವಾಗಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಬೇರೆ ಕಂಪನಿಗಳಿಗೆ ಸಂದರ್ಶನ ಇದೆ ಎಂದು ಸತ್ಯ ಹೇಳಿ ಕೆಲಸ ಕಳೆದುಕೊಂಡ ವ್ಯಕ್ತಿ!

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರರೊಬ್ಬರು ನಿಮ್ಮ ಸಂದೇಶದೊಂದಿಗೆ ನೀವೇ ನಿಮ್ಮ ಸಮಾಧಿಯನ್ನು ತೋಡಿಕೊಂಡಿದ್ದೀರಿ. ನೀವು ಅವಳನ್ನು ಮೆಚ್ಚಿಸಲು ಪ್ರಯತ್ನಿಸುತ್ತಿದ್ದೀರಾ ಅಥವಾ ಏನಾದರೂ ಮಾಡುತ್ತಿದ್ದೀರೋ ನನಗೆ ಗೊತ್ತಿಲ್ಲ. ಆದರೆ ನನಗೆ ಹುಷಾರಿಲ್ಲ ಮತ್ತು ಪ್ರಸ್ತುತ ಯಾವುದೇ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ನೀವು ಹೇಳಬೇಕಿತ್ತು. ನಾನು ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು ಆರೋಗ್ಯ ಸುಧಾರಿಸಿದರೆ ಹಿಂತಿರುಗುತ್ತೇನೆ ಎಂದಿದ್ದಾರೆ. ಇನ್ನೊಬ್ಬರು, ಕೆಲಸದ ಸ್ಥಳದಲ್ಲಿ ಮಾನವೀಯತೆ ನಿರೀಕ್ಷಿಸುವುದು ತಪ್ಪು ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ ನಾವು ರಜೆ ತೆಗೆದುಕೊಳ್ಳಲು ಏಕೆ ಇಷ್ಟೊಂದು ಹೆದರುತ್ತೇವೆ. ನಿಮ್ಮ ಆರೋಗ್ಯಕ್ಕೆ ಆದ್ಯತೆ ನೀಡಿ, ಆರೋಗ್ಯವಾಗಿಲ್ಲದಿದ್ದರೆ ಕಂಪನಿಯು ನಿಮ್ಮನ್ನು ಹೊರಗೆಸೆಯುತ್ತದೆ ಎಂದು ವಾಸ್ತವತೆಯ ಬಗ್ಗೆ ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:30 pm, Sun, 9 November 25

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್