Viral Post: ಬೇರೆ ಕಂಪನಿಗಳಿಗೆ ಸಂದರ್ಶನ ಇದೆ ಎಂದು ಸತ್ಯ ಹೇಳಿ ಕೆಲಸ ಕಳೆದುಕೊಂಡ ವ್ಯಕ್ತಿ!
ವ್ಯಕ್ತಿಯೊಬ್ಬರು ಸಂದರ್ಶನದ ವೇಳೆ ಬೇರೆ ಕಂಪನಿಗಳಿಗೆ ಸಂದರ್ಶನ ಇದೆ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದಾರೆ, ಇದೀಗ ಈ ಸತ್ಯ ಹೇಳಿ ಕೆಲಸದ ಅವಕಾಶವನ್ನು ಕಳೆದುಕೊಂಡಿದ್ದಾನೆ. ಎಚ್‌ಆರ್, ಸತ್ಯ ಹೇಳಿದ ತಕ್ಷಣ ಸಂದರ್ಶನವನ್ನು ಮಧ್ಯದಲ್ಲೇ ನಿಲ್ಲಿಸಿದ್ದಾರೆ. ಸತ್ಯ ಹೇಳುವುದು ಕೆಲವು ಬಾರಿ ಕಹಿಯಾಗಿರುತ್ತದೆ. ಇಂದಿನ ಕಾಲದಲ್ಲಿ ಸತ್ಯಕ್ಕೆ ಬೆಲೆ ಇಲ್ಲದಿರುವುದು ದುರದೃಷ್ಟಕರ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ, ಪ್ರಾಮಾಣಿಕತೆ ಮತ್ತು ವೃತ್ತಿ ಬದುಕು ಎಂಬ ಬಗ್ಗೆ ಚರ್ಚೆ ಹುಟ್ಟುಹಾಕಿದೆ.

ಸತ್ಯ ಎನ್ನುವುದು ಕೆಲವೊಂದು ಬಾರಿ ಜೀವನಕ್ಕೆ ಕಹಿಯಾಗಿರುತ್ತದೆ, ಈ ಜಗತ್ತಿನಲ್ಲಿ ಸತ್ಯಕ್ಕೆ ಬೆಲೆ ಇಲ್ಲ. ಕೆಲವೊಂದು ಬಾರಿ ನಮ್ಮ ಲಾಭಕ್ಕಾಗಿ ಸುಳ್ಳು ಹೇಳುವುದು ಕೂಡ ಅನಿವಾರ್ಯವಾಗಿರುತ್ತದೆ. ಅದರಲ್ಲೂ ಕೆಲಸದ ವಿಚಾರದಲ್ಲಿ ಹೆಚ್ಚು ನಿಷ್ಠೆಯನ್ನು ತೋರಬಾರದು. ಏನೇ ಆದರೂ ಕೊನೆಗೆ ಗೆಲ್ಲುವುದು ಸತ್ಯ ಹೊರತು ಸುಳ್ಳಲ್ಲ. ಇಲ್ಲೊಬ್ಬರು ಉದ್ಯೋಗಿ ಸತ್ಯ ಹೇಳಿ ಕೆಲಸ ಕಳೆದುಕೊಂಡಿದ್ದಾರೆ. ಕಂಪನಿಯೊಂದರ ಸಂದರ್ಶನದ (Job Interview Honesty) ವೇಳೆ ಮತ್ತೊಂದು ಕಡೆ ನನಗೆ ಸಂದರ್ಶನ ಇದೆ ಎಂದು ಹೇಳಿದ್ದಾರೆ. ಪ್ರಮಾಣಿಕವಾಗಿ ಸಂದರ್ಶಕರ ಮುಂದೆ ಸತ್ಯವನ್ನು ಹೇಳಿದ್ದಾರೆ. ಆದರೆ ಈ ಸತ್ಯವೇ ಅವರ ಕೆಲಸಕ್ಕೆ ಮುಳುವಾಗಿದೆ. ಈ ಬಗ್ಗೆ ರೆಡ್ಡಿಟರ್ ಹಂಚಿಕೊಂಡಿದ್ದಾರೆ.
“ಸಂದರ್ಶನ ನಡೆಯುತ್ತಿದ್ದ ವೇಳೆ HR, ನೀವು ಬೇರೆ ಯಾವುದಾದರೂ ಕಂಪನಿಗೆ ಸಂದರ್ಶನ ನೀಡುತ್ತಿದ್ದೀರಾ? ಎಂದು ಕೇಳಿದ್ದಾರೆ. ಅದಕ್ಕೆ ಎಸ್ ಸರ್ ನಾನು ಬೇರೆ ಕಂಪನಿಗೆ ಸಂದರ್ಶನ ನೀಡುತ್ತಿದ್ದೇನೆ ಎಂದು ಹೇಳಿದ ತಕ್ಷಣ ಸಂದರ್ಶನವನ್ನು ಮಧ್ಯದಲ್ಲೇ ನಿಲ್ಲಿಸಿದ್ದಾರೆ. ಈ ಬಗ್ಗೆ ಮತ್ತೆ ಎಚ್ಆರ್ಗೆ ಫೋನ್ ಮಾಡಿ ಕೇಳಿದಾಗ, ನಮ್ಮ ಸಂಸ್ಥೆಯಲ್ಲಿ ಕೆಲಸ ಮಾಡಲು ಆಸಕ್ತಿ ಇರುವವರಿಗೆ ಮಾತ್ರ ಉದ್ಯೋಗ ನೀಡುವುದು ಎಂದಿದ್ದಾರೆ. ಸತ್ಯ ಹೇಳಿದ ತಕ್ಷಣ ಇಂತಹ ಪ್ರತಿಕ್ರಿಯೆ ಬರಬಹುದು ಎಂಬ ಊಹೆ ಕೂಡ ನನಗೆ ಇರಲಿಲ್ಲ” ಎಂದು ರೆಡ್ಡಿಟರ್ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ನಾನು ಬದುಕಿಲ್ಲ, ಆದ್ರೂ ಬೆಳಿತೀನಿ ನಾನ್ಯಾರು; ಈ ಒಗಟಿನ ಉತ್ತರ ಹೇಳಿದ್ರೆ ನೀವು ಜಾಣರು
ವೈರಲ್ ಪೋಸ್ಟ್ ಇಲ್ಲಿದೆ ನೋಡಿ:
ನೆಟ್ಟಿಗರ ಪ್ರತಿಕ್ರಿಯೆ ಹೀಗಿತ್ತು:
ಈ ಪೋಸ್ಟ್ ನೋಡಿ ಅನೇಕ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ. ಕಂಪನಿಯು ಪ್ರಾಮಾಣಿಕತೆಗೆ ಬೆಲೆ ನೀಡುತ್ತಿಲ್ಲ ಎಂದು ಕೆಲವರು ಟೀಕಿಸಿದ್ದಾರೆ. ಇನ್ನೂ ಕೆಲವರು ಇದು ಒಂದು ಕಂಪನಿಯ ನಿಯಮ, ಕಂಪನಿಗೆ ಪ್ರಮಾಣಿಕರಾಗಿ ಇರಬೇಕು ಎಂಬ ಉದ್ದೇಶದಿಂದ ಮಾಡಿದ್ದಾರೆ ಎಂದು ಹೇಳಿದ್ದಾರೆ.ಕಂಪನಿಯೂ ಕಡಿಮೆ ಸಂಬಳದ ಉದ್ಯೋಗಿಯನ್ನು ಹುಡುಕುತ್ತಿದೆ, ಅದಕ್ಕೆ ನಿಮಗೆ ರೀತಿ ಮಾಡಿದ್ದಾರೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




