AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀವು ಯುವಕರಿಗೆ ಮಾದರಿಯಾಗಲು ಹೇಗೆ ಸಾಧ್ಯ? ಧವನ್, ರೈನಾ ವಿರುದ್ಧ ವಾಗ್ದಾಳಿ ನಡೆಸಿದ ಕರ್ನಾಟಕ ಮೂಲದ ಪೊಲೀಸ್ ಅಧಿಕಾರಿ

ಬೆಟ್ಟಿಂಗ್ ಆ್ಯಪ್ ಪ್ರಚಾರ ಪ್ರಕರಣದಲ್ಲಿ ಶಿಖರ್ ಧವನ್ ಮತ್ತು ಸುರೇಶ್ ರೈನಾ ಅವರ ₹11.14 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ತಾತ್ಕಾಲಿಕವಾಗಿ ಜಪ್ತಿ ಮಾಡಿದೆ. 1xBet ಪ್ರಚಾರಕ್ಕಾಗಿ ವಿದೇಶಿ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು ತನಿಖೆಯಿಂದ ಬಯಲಾಗಿದೆ. ಈ ಬಗ್ಗೆ ಹಿರಿಯ ಐಪಿಎಸ್ ಅಧಿಕಾರಿ ವಿಶ್ವನಾಥ್ ಸಿ ಸಜ್ಜನರ್, ಸೆಲೆಬ್ರಿಟಿಗಳು ಯುವಕರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದು ಯುವಕರ ಭವಿಷ್ಯದ ಮೇಲೆ ಬೀರುವ ಪರಿಣಾಮ ಎಂದು ಹೇಳಿದ್ದಾರೆ.

ನೀವು ಯುವಕರಿಗೆ ಮಾದರಿಯಾಗಲು ಹೇಗೆ ಸಾಧ್ಯ? ಧವನ್, ರೈನಾ ವಿರುದ್ಧ ವಾಗ್ದಾಳಿ ನಡೆಸಿದ ಕರ್ನಾಟಕ ಮೂಲದ ಪೊಲೀಸ್ ಅಧಿಕಾರಿ
ಶಿಖರ್ ಧವನ್, ಸುರೇಶ್ ರೈನಾ, ವಿಶ್ವನಾಥ್ ಸಿ ಸಜ್ಜನರ್
ಅಕ್ಷಯ್​ ಪಲ್ಲಮಜಲು​​
|

Updated on: Nov 08, 2025 | 4:47 PM

Share

ಬೆಟ್ಟಿಂಗ್ ಆ್ಯಪ್ ಪ್ರಚಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗರಾದ ಶಿಖರ್ ಧವನ್ (Shikhar Dhawan) ಹಾಗೂ ಸುರೇಶ್ ರೈನಾ (Suresh Raina) ಅವರಿಗೆ ಸಂಬಂಧಿಸಿದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ. ಇಬ್ಬರು ಕ್ರಿಕೆಟಿಗರಿಗೆ ಸೇರಿರುವ ಒಟ್ಟು 11.14 ಕೋಟಿ ರೂ ಮೊತ್ತದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ತಾತ್ಕಾಲಿಕವಾಗಿ 2002 ರ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಮುಟ್ಟುಗೋಲು ಹಾಕಿಕೊಂಡಿದೆ. ಇದೀಗ ಈ ಬಗ್ಗೆ ಕರ್ನಾಟಕ ಮೂಲದ ತೆಲಂಗಾಣ ಕೇಡರ್​​​ನ ಐಪಿಎಸ್​​​ ಅಧಿಕಾರ ಹಾಗೂ ಹೈದರಬಾದ್​​ ಪೊಲೀಸ್​ ಆಯುಕ್ತರಾಗಿರುವ ವಿಶ್ವನಾಥ್ ಸಿ ಸಜ್ಜನರ್​​ ಅವರು ಶಿಖರ್ ಧವನ್ ಹಾಗೂ ಸುರೇಶ್ ರೈನಾ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.

ಜನರಲ್ಲಿ ತಪ್ಪು ಕಲ್ಪನೆಯನ್ನು ಸೃಷ್ಟಿಸಿ,ಅವರ ದಾರಿ ತಪ್ಪಿಸುವವರು ಸೆಲೆಬ್ರಿಟಿಗಳೇ? ಎಂದು ಪ್ರಶ್ನೆ ಮಾಡಿದ್ದಾರೆ. ವಿಶ್ವನಾಥ್ ಸಿ ಸಜ್ಜನರ್ ಅವರು ಎಕ್ಸ್​​ನಲ್ಲಿ ಹೀಗೆ ಬರೆದುಕೊಂಡಿದ್ದಾರೆ. “ಇವರು ಭಾರತದ ಸೆಲೆಬ್ರಿಟಿಗಳಾ? ಜನರಿಂದ ಹಣ ಪಡೆದು ಆದರ್ಶ ವ್ಯಕ್ತಿಗಳು ಅಥವಾ ಆಟಗಾರರಾಗಲು ಹೇಗೆ ಸಾಧ್ಯ? ಬೆಟ್ಟಿಂಗ್​​ ಎನ್ನುವುದು ಯುವಕರಿಗೆ ಅಂಟಿರುವ ಸಾಂಕ್ರಾಮಿಕ ರೋಗ, ಇದರಿಂದ ಅವರ ಜೀವನ ಹಾಳಾಗಿದೆ. ಅದೆಷ್ಟೋ ಯುವಕರು ಈ ಬೆಟ್ಟಿಂಗ್​​ ಹುಚ್ಚಿನಿಂದ ಪ್ರಾಣ ಕಳೆದುಕೊಂಡಿದ್ದಾರೆ. ಇಡೀ ಸಮಾಜಕ್ಕೆ ಮಾರಕವಾಗಿರುವ ಈ ಬೆಟ್ಟಿಂಗ್ ಬಗ್ಗೆ ಪ್ರಚಾರ ನೀಡುವವರು ಈ ಯುವಕರ ಸಾವಿಗೆ ಕಾರಣ ಅಲ್ಲವೇ? ಯುವಕರನ್ನು ಉದ್ದಾರ ಮಾಡುವ, ಅವರ ಜೀವನಕ್ಕೆ ಲಾಭ ಆಗುವ ಒಳ್ಳೆಯ ಮಾತುಗಳನ್ನು ಹೇಳಿ, ಅದು ಬಿಟ್ಟು ಅವರನ್ನು ನಾಶ ಮಾಡುವ ಅಥವಾ ಪ್ರಾಣ ಕಳೆದುಕೊಳ್ಳವ ವಿಷಯಗಳನ್ನು ಪ್ರಚಾರ ಮಾಡಬೇಡಿ” ಎಂದು ಹೇಳಿದ್ದಾರೆ.

ಇಲ್ಲಿದೆ ನೋಡಿ ಪೋಸ್ಟ್​​:

ಏನಿದು ಪ್ರಕರಣ:

ಶಿಖರ್ ಧವ್ನ ಹಾಗೂ ಸುರೇಶ್ ರೈನಾ ಇಬ್ಬರೂ ವಿದೇಶಿ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಅಕ್ರಮ ಬೆಟ್ಟಿಂಗ್ ಪ್ಲಾಟ್‌ಫಾರ್ಮ್ 1xBet ಅನ್ನು ಪ್ರಚಾರ ಮಾಡಿದ್ದಾರೆ ಎಂಬುದು ಇಡಿ ತನಿಖೆಯಿಂದ ತಿಳಿದುಬಂದಿದೆ. ಹಾಗೆಯೇ ಇವರಿಬ್ಬರು 1xBet ಮತ್ತು ಅದರ ಅಂಗಸಂಸ್ಥೆಗಳನ್ನು ಉತ್ತೇಜಿಸಲು ವಿದೇಶಿ ಸಂಸ್ಥೆಗಳೊಂದಿಗೆ ಗೊತ್ತಿದ್ದೂ ಜಾಹೀರಾತು ಒಪ್ಪಂದಗಳನ್ನು ಮಾಡಿಕೊಂಡಿರುವುದು ಖಚಿತವಾಗಿದೆ. ಹೀಗಾಗಿ ಇವರಿಬ್ಬರ ಆಸ್ತಿಯನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಇದನ್ನೂ ಓದಿ: ಶಿಖರ್ ಧವನ್‌, ಸುರೇಶ್ ರೈನಾಗೆ ಸೇರಿದ 11.14 ಕೋಟಿ ಮೌಲ್ಯದ ಆಸ್ತಿ ಜಪ್ತಿ

ವಿಶ್ವನಾಥ್ ಸಿ ಸಜ್ಜನರ್ ಯಾರು?

ವಿಶ್ವನಾಥ್ ಸಿ ಸಜ್ಜನರ್ ಪ್ರಸ್ತುತ ತೆಲಂಗಾಣ ಕೇಡರ್​​​ನ ಐಪಿಎಸ್​​​ ಅಧಿಕಾರ ಹಾಗೂ ಹೈದರಬಾದ್​​ ಪೊಲೀಸ್​ ಆಯುಕ್ತರಾಗಿದ್ದಾರೆ. ಈ ಹಿಂದೆ ಟಿಎಸ್​​​​​ ಆರ್​​ಟಿಸಿ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಕೋವಿಡ್​​​-19 ಸಮಯದಲ್ಲಿ ಭಾರೀ ಜನಪ್ರಿಯ ಅಧಿಕಾರಿಯಾಗಿದ್ದರು. ಇನ್ನು ರೌಡಿಗಳಿಗೆ, ಸಿಂಹಸ್ವಪ್ನ ಆಗಿದ್ದಾರೆ. ವಿಶ್ವನಾಥ್ ಸಿ ಸಜ್ಜನರ್ ಅವರು ಮೂಲತ ಕರ್ನಾಟಕದ ಹುಬ್ಬಳ್ಳಿಯವರು.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್