Brain Teaser: ನೀವು ಜಾಣರೇ, ಈ ಟ್ರಿಕ್ಕಿ ಗಣಿತದ ಲೆಕ್ಕ ಬಿಡಿಸಿ ಸರಿಯಾದ ಉತ್ತರ ಹೇಳಿ
ನೀವು ಜಾಣರು, ನಿಮಗೆ ಉತ್ತಮ ತಾರ್ಕಿಕ ತಾರ್ಕಿಕ ಕೌಶಲ್ಯವಿದೆ ಎಂದು ನೀವು ಭಾವಿಸುತ್ತೀರಾ. ಒಂದು ವೇಳೆ ನಾವು ಅಂದುಕೊಂಡಾದರೆ ನಿಮ್ಮನ್ನು ಗೊಂದಲಕ್ಕೀಡುಮಾಡಬಹುದಾದ ಮೆದುಳಿನ ಸವಾಲೆಸಗುವ ಸವಾಲನ್ನು ನಾವು ನಿಮಗೆ ನೀಡುತ್ತೇವೆ. ಈ ಒಗಟಿನ ಆಟವನ್ನು ಬಿಡಿಸಲು ಸಾಧ್ಯವೇ ಎಂದು ನೋಡಿ. ನಿಖರ ಉತ್ತರ ಕಂಡುಕೊಳ್ಳಲು ಪ್ರಯತ್ನಿಸಿ.

ಎಷ್ಟೇ ಬುದ್ಧಿವಂತರಾಗಿದ್ರೂ ಕೆಲ ಒಗಟುಗಳನ್ನು ಬಿಡಿಸುವುದು ಅಷ್ಟು ಸುಲಭವಲ್ಲ. ಸೋಶಿಯಲ್ ಮೀಡಿಯಾದಲ್ಲಿ ಬ್ರೈನ್ ಟೀಸರ್ (Brain Teaser) ಗಣಿತದ ಲೆಕ್ಕಕ್ಕೆ ಸಂಬಂಧ ಪಟ್ಟ ಒಗಟಿನ ಚಿತ್ರಗಳು ವೈರಲ್ ಆಗುತ್ತಿರುತ್ತವೆ. ಈ ಒಗಟಿನ ಆಟಗಳನ್ನು ಬಿಡಿಸುವಾಗ ನಿಮ್ಮ ಬುದ್ಧಿ ಖರ್ಚು ಮಾಡಬೇಕಾಗುತ್ತದೆ. ಎಷ್ಟೇ ಕಷ್ಟದ ಒಗಟಿರಲಿ, ನಾನು ಬಿಡಿಸಬಲ್ಲೆ ಎನ್ನುವ ಆತ್ಮವಿಶ್ವಾಸವಿದ್ರೂ ಒಂದು ಕಷ್ಟ ಟ್ರಿಕ್ಕಿ ಒಗಟನ್ನು ನೋಡಿದಾಗ ಸಾಧ್ಯವಿಲ್ಲ ಅನ್ನೋ ಭಾವನೆ ಬರಬಹುದು. ಇದೀಗ ಇಂತಹದ್ದೆ ಒಗಟಿನ ಚಿತ್ರ ವೈರಲ್ ಆಗಿದ್ದು, ಈ ಗಣಿತದ ಪಝಲ್ ಬಿಡಿಸಿ ಸೈ ಎನಿಸಿಕೊಳ್ಳಿ.
ಏನಿದು ಒಗಟು?
ಈ ಬ್ರೈನ್ ಟೀಸರ್ ಅನ್ನು ಪ್ರೈಮ್ ಮ್ಯಾನ್ಸ್ ಕ್ವಿಜ್ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇಲ್ಲಿ ಎರಡು ಬೈಕ್‌ಗಳ ಮೌಲ್ಯ 36, ಎರಡು ಸ್ಕೂಟರ್‌ಗಳ ಮೌಲ್ಯ 6, ಎರಡು ಸೈಕಲ್‌ಗಳ ಮೌಲ್ಯ 8 ಆಗಿದ್ದರೆ, ಒಂದು ಬೈಕ್‌ನೊಂದಿಗೆ ಎರಡು ಸೈಕಲ್‌ಗಳನ್ನು ಒಂದು ಸ್ಕೂಟರ್‌ನಿಂದ ಗುಣಿಸಿದಾಗ ಬರುವ ಮೌಲ್ಯವೆಷ್ಟು ಅನ್ನೋದು ಪ್ರಶ್ನೆಯಾಗಿದೆ. ಈ ಗಣಿತದ ಲೆಕ್ಕವನ್ನು ನೀವು ಜಾಣತನದಿಂದ ಬಿಡಿಸಿ ಸರಿಯಾದ ಉತ್ತರ ಹೇಳಬೇಕು. ಈ ಸವಾಲನ್ನು ಬಿಡಿಸಿ ಸರಿಯಾದ ಉತ್ತರ ಹೇಳಲು ನಿಮ್ಮಿಂದ ಸಾಧ್ಯವೇ ಎಂದು ಪ್ರಯತ್ನಿಸಿ ನೋಡಿ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ
View this post on Instagram
ಇದನ್ನೂ ಓದಿ:ನಾನು ಬದುಕಿಲ್ಲ, ಆದ್ರೂ ಬೆಳಿತೀನಿ ನಾನ್ಯಾರು; ಈ ಒಗಟಿನ ಉತ್ತರ ಹೇಳಿದ್ರೆ ನೀವು ಜಾಣರು
ಬಳಕೆ ದಾರರ ಕಾಮೆಂಟ್‌ಗಳು ಹೀಗಿವೆ
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ತಲೆಗೆ ಹುಳ ಬಿಡುವ ಈ ಪೋಸ್ಟ್ ಇದುವರೆಗೆ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರ ಈ ಒಗಟಿನ ಉತ್ತರ 42 ಎಂದು ಹೇಳಿದರೆ ಇನ್ನೂ ಕೆಲವರು ಮೂವತ್ತು ಹಾಗೂ ಎಪ್ಪತ್ತಾರು ಎಂದು ಹೇಳಿದ್ದಾರೆ. ಸಮಯ ತೆಗೆದುಕೊಂಡು ಈ ಒಗಟಿನ ಸರಿಯಾದ ಉತ್ತರ ಎಷ್ಟೆಂದು ಹೇಳಿ ನೋಡೋಣ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




