AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಬೆಂಗಳೂರಿನ ಮಹಿಳೆ ಸ್ಕರ್ಟ್ ಧರಿಸಿದ್ದಕ್ಕೆ ಕೋಪಗೊಂಡ ಆಟೋ ಚಾಲಕ, ಮುಂದೇನಾಯ್ತು ನೋಡಿ

ರಾತ್ರಿ ಬಿಡಿ ಹಗಲಿನಲ್ಲಿ ಹೆಣ್ಣು ಮಕ್ಕಳು ಓಡಾಡುವುದು ಕಷ್ಟ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಸಾಕ್ಷಿಯೆನ್ನುವಂತಿದೆ ಈ ಘಟನೆ. ಇದೀಗ ಬೆಂಗಳೂರಿನಲ್ಲಿ ಮಹಿಳೆಗೆ ಕಹಿ ಅನುಭವವಾಗಿದ್ದು, ಆಟೋ ಚಾಲಕನ ವರ್ತನೆಯನ್ನು ಕಂಡು ಭಯಭೀತಳಾಗಿದ್ದಾಳೆ. ಈ ಬಗ್ಗೆ ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದು, ಆಟೋ ಚಾಲಕನ ಅಹಿತಕರ ವರ್ತನೆಯ ಬಗ್ಗೆ ನೆಟ್ಟಿಗರು ಗರಂ ಆಗಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: ಬೆಂಗಳೂರಿನ ಮಹಿಳೆ ಸ್ಕರ್ಟ್ ಧರಿಸಿದ್ದಕ್ಕೆ ಕೋಪಗೊಂಡ ಆಟೋ ಚಾಲಕ, ಮುಂದೇನಾಯ್ತು ನೋಡಿ
ಸಾಂದರ್ಭಿಕ ಚಿತ್ರImage Credit source: Pinterest
ಸಾಯಿನಂದಾ
|

Updated on:Nov 09, 2025 | 2:13 PM

Share

ಬೆಂಗಳೂರು, ನವೆಂಬರ್ 09: ಹೆಣ್ಣು ಮಕ್ಕಳಿಗೆ ಬೆಂಗಳೂರು ಎಷ್ಟು ಸೇಫ್ ಎನ್ನುವ ಪ್ರಶ್ನೆ ಮೂಡುವಂತಹ ಘಟನೆಗಳು ಆಗಾಗ್ಗೆ ನಡೆಯುತ್ತವೆ. ಕೆಲವೊಮ್ಮೆ ಆಟೋ, ಟ್ಯಾಕ್ಸಿ ಚಾಲಕರು ಸೇರಿದಂತೆ ಪುಂಡಪೋಕರಿಗಳು ಹೆಣ್ಣು ಮಕ್ಕಳ ಜತೆ ಅಹಿತಕರವಾಗಿ ವರ್ತಿಸುವುದಿದೆ. ಇದೀಗ ಬೆಂಗಳೂರಿನ (Bengaluru) ಮಹಿಳೆಯೊಬ್ಬರು ಇಂದಿರಾನಗರದಲ್ಲಿ ತಾನು ತನ್ನ ಗೆಳೆಯ ಎದುರಿಸಿದ ಆತಂಕಕಾರಿ ಅನುಭವವನ್ನು ವಿವರಿಸಿದ್ದಾಳೆ. ತಾನು ಧರಿಸಿದ ಉಡುಗೆಯನ್ನೇ ಪ್ರಶ್ನಿಸಿ ಆಟೋ ಚಾಲಕ (auto driver) ತನ್ನ ಮೇಲೆ ಅತ್ಯಾಚಾರ ಮಾಡುವುದಾಗಿ ಬೆದರಿಕೆ ಹಾಕಿದ್ದಾಗಿ ಹೇಳಿಕೊಂಡಿದ್ದಾಳೆ.

ಮಹಿಳೆಗೆ ಬೆದರಿಕೆ ಹಾಕಿದ ಆಟೋ ಚಾಲಕ

r/bengluru ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಮಹಿಳೆಯೂ ತಾನು ಹಾಗೂ ತನ್ನ ಪ್ರಿಯಕರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಆಟೋ ಚಾಲಕನೊಬ್ಬ ನಮ್ಮ ಮೇಲೆ ಕೂಗಲು ಪ್ರಾರಂಭಿಸಿದಾಗ ಈ ಘಟನೆ ನಡೆದಿದೆ. ಆಟೋಚಾಲಕ ಏನು ಹೇಳುತ್ತಿದ್ದಾನೆಂದು ನಮಗೆ ನಿಜವಾಗಿಯೂ ತಿಳಿಯಲು ಸಾಧ್ಯವಾಗಲಿಲ್ಲ ಮತ್ತು ಅದನ್ನು ತಳ್ಳಿಹಾಕಿ ಹೊರಟುಹೋದನು. ಆ ಬಳಿಕ ಅದೇ ವ್ಯಕ್ತಿ ಶೀಘ್ರದಲ್ಲೇ ಹತ್ತಿರ ಬಂದು ಮತ್ತೆ ಕೂಗಲು ಪ್ರಾರಂಭಿಸಿದನು, ನನ್ನ ಬಟ್ಟೆಯ ಆಯ್ಕೆಯನ್ನು ಪ್ರಶ್ನಿಸಿದನು. ನನ್ನ ಖಾಸಗಿತನದೊಂದಿಗೆ ನಾನು ಏಕೆ ಇಷ್ಟು ಸಣ್ಣ ಸ್ಕರ್ಟ್ ಧರಿಸಿದ್ದೇನೆ ಎಂದು ಕಿರುಚಲು ಪ್ರಾರಂಭಿಸಿದನು. ಒಂದು ಕ್ಷಣ ಶಾಕ್ ಆಗಿದ್ದು, ಪ್ರತಿಕ್ರಿಯಿಸಲು ಸಾಧ್ಯವಾಗಲಿಲ್ಲ. ಆದರೆ ಚಾಲಕನು ತನ್ನ ಗೆಳೆಯನ ಕಡೆಗೆ ತಿರುಗಿಸಿ ಮಾತನಾಡಲು ಶುರು ಮಾಡಿದನು ಎಂದಿದ್ದಾಳೆ.

ವೈರಲ್ ಪೋಸ್ಟ್‌ ಇಲ್ಲಿದೆ ನೋಡಿ

verbal harassment in indiranagar byu/nyxieversal inbangalore

ನನ್ನ ಗೆಳೆಯ ಪ್ರತಿಕ್ರಿಯಿಸುತ್ತಾ ಅದು ಅವಳ ಇಷ್ಟ, ಅವಳಿಗೆ ಹೇಗೆ ಬೇಕೋ ಹಾಗೆ ಬಟ್ಟೆ ಹಾಕುತ್ತಾಳೆ ನಿಮಗೇನು ಕಷ್ಟ ಎಂದು ಉತ್ತರಿಸಿದ್ದು. ಆದರೆ ಆಟೋಚಾಲಕನು, ಅವಳು ಇದೇ ತರಹದ ಬಟ್ಟೆ ಧರಿಸಿದರೆ ಅವಳನ್ನು ಜನ ಅತ್ಯಾಚಾರ ಮಾಡುತ್ತಾರೆ, ನಾನು ಕೂಡ ಆಕೆಯ ಮೇಲೆ ಅತ್ಯಾಚಾರ ಮಾಡುತ್ತೇನೆ ಎಂದು ಹೇಳಿದ್ದಾನೆ. ಅಲ್ಲಿನ ಪರಿಸ್ಥಿತಿ ಉಲ್ಬಣಗೊಳ್ಳುತ್ತಿದ್ದಂತೆ ಜನ ಸೇರಿದರು. ಈ ವೇಳೆ ಆಟೋ ಚಾಲಕ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ ಎಂದು ಹೇಳಿದ್ದಾಳೆ.

ಮಧ್ಯಾಹ್ನದ ಹೊತ್ತಿನಲ್ಲಿ ಜನ ಸಂದಣಿ ಇರುವ ಸ್ಥಳದಲ್ಲಿ ಓರ್ವ ಯುವಕ ಇರುವಾಗಲೇ ಒಂದು ಹೆಣ್ಣಿನ ಮೇಲೆ ಈ ರೀತಿಯ ದೌರ್ಜನ್ಯ ಎಸಗಿರುವುದು. ಇನ್ನು ಒಂಟಿ ಮಹಿಳೆಯರು ಇದ್ದಾಗ ಸುಮ್ಮನೆ ಬಿಡುತ್ತಾರೆಯೇ. ಈ ಚಾಲಕನ ವರ್ತನೆಯಿಂದ ಒಂದು ಕ್ಷಣ ಭಯಗೊಂಡೆ. ನಾನು ಆತನ ಫೋಟೋ ಅಥವಾ ಆಟೋ ನಂಬರ್ ಅನ್ನು ನೋಟ್ ಮಾಡಲು ಆಗಲಿಲ್ಲ. ಬಹಳ ಕೆಟ್ಟದಾಗಿ ವರ್ತಿಸಿದ್ದಾನೆ ಎಂದು ಇಲ್ಲಿ ಉಲ್ಲೇಖಿಸಿದ್ದಾಳೆ.

ಆಟೋ ಚಾಲಕನಿಗೆ ವಯಸ್ಸಾಗಿತ್ತು, ಬೋಳು ಬಿಳಿ ಕೂದಲು ಇತ್ತು. ನೋಡಲು ಒಳ್ಳೆಯವನು ಎಂದು ಕಾಣಿಸಿದರೂ ಯಾಕೆ ಈ ರೀತಿ ಮಾಡಿದ್ದಾರೆ ಎಂದು ಗೊತ್ತಿಲ್ಲ .. ನನ್ನ ಗೆಳೆಯ ಇದ್ದಿದ್ದರಿಂದ ನನಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ, ಅದೇ ನಾನೊಬ್ಬಳೇ ಇದ್ದಾರೆ ಪರಿಸ್ಥಿತಿ ಏನಾಗುತ್ತಿತ್ತು ಎಂದು ಊಹಿಸಿಕೊಳ್ಳಲು ಕಷ್ಟ ಎಂದು ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾಳೆ.

ಇದನ್ನೂ ಓದಿ:ಷೇರ್ ಮಾರ್ಕೆಟ್ ಲಾಭ ನಷ್ಟ ತಿಳಿಯಲು ಬೆಡ್ ರೂಮಿನಲ್ಲೇ ಲೈಟಿಂಗ್ ವ್ಯವಸ್ಥೆ ಮಾಡಿಕೊಂಡ ಬೆಂಗಳೂರಿಗ

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರರೊಬ್ಬರು, ಈ ರೀತಿ ಘಟನೆಯನ್ನು ನೋಡುವಾಗ ಮಹಿಳೆಯರಿಗೆ ಸುರಕ್ಷತೆ ಅನ್ನೋದೇ ಇಲ್ಲ ಎನ್ನುವುದು ಖಚಿತವಾಗುತ್ತದೆ ಎಂದಿದ್ದಾರೆ. ಇನ್ನೊಬ್ಬ ಬಳಕೆದಾರ ಈ ಪೋಸ್ಟ್ ನ ಸ್ಕ್ರೀನ್ ಶಾಟ್ ಅನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿ. ಬಳಕೆದಾರರ ಹೆಸರನ್ನು ಕ್ರಾಪ್ ಮಾಡಿ ಹಾಗೂ ಬೆಂಗಳೂರು ಪೊಲೀಸರನ್ನು ಟ್ಯಾಗ್ ಮಾಡಿ ಎಂದು ಸಲಹೆ ನೀಡಿದ್ದಾರೆ. ಮತ್ತೊಬ್ಬರು ನಿಮಗೆ ಆ ಆಟೋಚಾಲಕನ ನಂಬರ್ ಪ್ಲೇಟ್ ಬೇಕಿದ್ದರೆ ಸುತ್ತಮುತ್ತಲಿನ ಕೆಫೆ, ಮನೆಗಳಿದ್ದರೆ ಅವರಿಗೆ ತಿಳಿಸಿ. ಅವರು ನಿಮಗೆ ಸಿಸಿಟಿವಿ ನೋಡಿ ನಂಬರ್ ಪ್ಲೇಟ್ ಒದಗಿಸಬಹುದು ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:12 pm, Sun, 9 November 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ