ಆಕಾಶದಲ್ಲಿರುವಾಗಲೇ ಹಾರಿ ಹೋಗಿತ್ತು ವಿಮಾನದ ಮೇಲ್ಭಾಗ, ಪವಾಡವೆಂಬಂತೆ ಪ್ರಯಾಣಿಕರು ಪಾರಾದ ಕಥೆ

|

Updated on: Nov 22, 2023 | 7:56 AM

ವಿಮಾನದಲ್ಲಿ ಕುಳಿತಾಗ ಗಾಳಿಯ ಒತ್ತಡಕ್ಕೆ ವಿಮಾನ ಸ್ವಲ್ಪ ಜೋರಾಗಿ ಅಲ್ಲಾಡಿದರೂ ಏನೋ ಆಗಿಬಿಡುತ್ತೆ ಎನ್ನುವಷ್ಟು ಭಯವಾಗುತ್ತೆ. ಆದರೆ ಈ ವಿಮಾನದ ಮೇಲ್ಭಾಗವೇ ಗಾಳಿಯ ಒತ್ತಡಕ್ಕೆ ಸಿಲುಕಿ ಹಾರಿ ಹೋಗಿತ್ತು. ಇನ್ನು ಪ್ರಯಾಣಿಕರ ಕಥೆ ಏನಾಗಿರಬೇಡ. ಇದು 1988, ಏಪ್ರಿಲ್ 28ರ ಕಥೆ, ಅಂದು 89 ಪ್ರಯಾಣಿಕರು ಹಾಗೂ 6 ಸಿಬ್ಬಂದಿಯನ್ನು ಹೊತ್ತು ಅಮೆರಿಕದ ಅಲೋಹಾ ಏರ್​ಲೈನ್ಸ್​ ಹಾರಾಟ ಆರಂಭಿಸಿತ್ತು.

ಆಕಾಶದಲ್ಲಿರುವಾಗಲೇ ಹಾರಿ ಹೋಗಿತ್ತು ವಿಮಾನದ ಮೇಲ್ಭಾಗ, ಪವಾಡವೆಂಬಂತೆ ಪ್ರಯಾಣಿಕರು ಪಾರಾದ ಕಥೆ
ವಿಮಾನ
Follow us on

ವಿಮಾನದಲ್ಲಿ ಕುಳಿತಾಗ ಗಾಳಿಯ ಒತ್ತಡಕ್ಕೆ ವಿಮಾನ ಸ್ವಲ್ಪ ಜೋರಾಗಿ ಅಲ್ಲಾಡಿದರೂ ಏನೋ ಆಗಿಬಿಡುತ್ತೆ ಎನ್ನುವಷ್ಟು ಭಯವಾಗುತ್ತೆ. ಆದರೆ ಈ ವಿಮಾನದ ಮೇಲ್ಭಾಗವೇ ಗಾಳಿಯ ಒತ್ತಡಕ್ಕೆ ಸಿಲುಕಿ ಹಾರಿ ಹೋಗಿತ್ತು. ಇನ್ನು ಪ್ರಯಾಣಿಕರ ಕಥೆ ಏನಾಗಿರಬೇಡ. ಇದು 1988, ಏಪ್ರಿಲ್ 28ರ ಕಥೆ, ಅಂದು 89 ಪ್ರಯಾಣಿಕರು ಹಾಗೂ 6 ಸಿಬ್ಬಂದಿಯನ್ನು ಹೊತ್ತು ಅಮೆರಿಕದ ಅಲೋಹಾ ಏರ್​ಲೈನ್ಸ್​ ಹಾರಾಟ ಆರಂಭಿಸಿತ್ತು.

ಮಾರ್ಗಮಧ್ಯದಲ್ಲಿ ಗಾಳಿಯ ಒತ್ತಡಕ್ಕೆ ಸಿಲುಕಿ ವಿಮಾನದ ರೂಫ್​(ಮೇಲ್ಭಾಗ)ನ ಒಂದು ಭಾಗ ಹಾರಿ ಹೋಗಿತ್ತು. ಹಾಗೆಯೇ ಪೆಸಿಫಿಕ್ ಮಹಾಸಾಗರದ ಮೇಲೆ 24,000 ಅಡಿಗಳಷ್ಟು ತೀವ್ರವಾದ ಗಾಳಿಗೆ ಪ್ರಯಾಣಿಕರನ್ನು ಒಡ್ಡಿತ್ತು.

ಸಿಬ್ಬಂದಿ ಹಾಗೂ ಪ್ರಯಾಣಿಕರು ಗಾಬರಿಯಿಂದ ಕಿರುಚಾಡುತ್ತಿದ್ದರು. ಆದರೆ ಪೈಲಟ್​ ಧೈರ್ಯದಿಂದ ಹಾನಿಗೊಳಗಾದ ವಿಮಾನವನ್ನು 24,000 ಅಡಿ ಕೆಳಗಿಳಿಸಿದರು. 95 ಜನರಲ್ಲಿ ಒಬ್ಬರು ಸಾವನ್ನಪ್ಪಿದ್ದರು, ಎಂಟು ಮಂದಿಗೆ ಗಾಯಗಳಾಗಿತ್ತು. ಆ ಸಮಯದಲ್ಲಿ ಎಲ್ಲಾ ಪ್ರಯಾಣಿಕರು ಕುಳಿತು ಬೆಲ್ಟ್​ ಧರಿಸಿದ್ದರು. ಆದರೆ ಫ್ಲೈಟ್​ ಅಟೆಂಡೆಂಟ್ ದೇಹವು ಎಲ್ಲೂ ಕಂಡುಬಂದಿಲ್ಲ.

ವರದಿ ಪ್ರಕಾರ ವಿಮಾನವು ಡಿಕಂಪ್ರೆಷನ್ ಅನುಭವಿಸಿತ್ತು, ಪ್ರಯಾಣಿಕರೊಬ್ಬರು ಬೋರ್ಡಿಂಗ್ ಸಮಯದಲ್ಲಿ ವಿಮಾನದ ಫ್ಯೂಸ್‌ಲೇಜ್‌ನಲ್ಲಿ ಬಿರುಕು ಬಿಟ್ಟಿರುವುದನ್ನು ಗಮನಿಸಿದ್ದರು, ಆದರೆ ಅವರು ಟೇಕಾಫ್ ಮಾಡುವ ಮೊದಲು ಸಿಬ್ಬಂದಿಗೆ ತಿಳಿಸಿರಲಿಲ್ಲ.

ಮತ್ತಷ್ಟು ಓದಿ:Nepal Plane Crash: ನೇಪಾಳ ವಿಮಾನ ದುರಂತದಲ್ಲಿ ಎಲ್ಲಾ ಪ್ರಯಾಣಿಕರ ಸಾವು, 5 ಸದಸ್ಯರ ತನಿಖಾ ಆಯೋಗ ರಚನೆ

ನಾನು ವಿಮಾನದಲ್ಲಿ ಇದ್ದಕ್ಕಿದ್ದಂತೆ ಶಬ್ದವನ್ನು ಕೇಳಿದೆ ಆದರೆ ಅದು ಸ್ಫೋಟವಾಗಿರಲಿಲ್ಲ, ವಿಮಾನದ ಮೇಲ್ಭಾಗ ಹಾರಿ ಹೋಗಿತ್ತು. ಗಾಳಿಯ ಒತ್ತಡ ತುಂಬಾ ಇತ್ತು. ಒಂದು ಸಣ್ಣ ರಂಧ್ರದಿಂದ ಪ್ರಾರಂಭವಾಗಿತ್ತು, ಕ್ರಮೇಣವಾಗಿ ವಿಮಾನದ ಭಾಗವು ಬೇರ್ಪಡುತ್ತಲೇ ಇತ್ತು. ಗಾಳಿಯ ಒತ್ತಡವೂ ಹೆಚ್ಚಾದಾಗ ಒಂದೇ ಬಾರಿಗೆ ವಿಮಾನದ ಭಾಗ ಗಾಳಿಯಲ್ಲಿ ಹಾರಿ ಹೋಗಿತ್ತು ಎಂದು ಪ್ರಯಾಣಿಕ ಎರಿಕ್ ಬೆಕ್ಲಿನ್ ತಿಳಿಸಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ