Video: ನಾಲ್ಕು ಗಂಟೆಯ ಮದ್ವೆಗೆ ಲಕ್ಷ ಲಕ್ಷ ಹಣ ಖರ್ಚು ಮಾಡುವ ಅಗತ್ಯ ಏನಿದೆ? ಇದು ವಾಸ್ತವಿಕ ಸತ್ಯ

ಹಿಂದಿನ ಸರಳ ಮದುವೆಗಳಿಗಿಂತ ಇಂದಿನ ಆಧುನಿಕ ಮದುವೆಗಳು ಅತಿ ದುಬಾರಿಯಾಗಿವೆ. ಲಕ್ಷಾಂತರ ಖರ್ಚು ಮಾಡಿ ಮದುವೆಯಾಗಿ ಕೊನೆಗೆ ಸಣ್ಣ ವಿಚಾರಕ್ಕೆ ವಿಚ್ಛೇದನ ಪಡೆಯುವುದು ಸಾಮಾನ್ಯವಾಗಿದೆ. ಇತ್ತೀಚೆಗೆ ವೈರಲ್ ಆದ ವಿಡಿಯೋದಲ್ಲಿ 4 ಗಂಟೆಯ ಮದುವೆಗೆ ಇಷ್ಟೊಂದು ಖರ್ಚಿನ ಅಗತ್ಯವೇನು ಎಂದು ಪ್ರಶ್ನಿಸಿದ್ದಾರೆ. ಈ ಹಣವನ್ನು ಮಗಳ ಭವಿಷ್ಯಕ್ಕೆ ಹೂಡಿಕೆ ಮಾಡಿ ಎಂದು ಹೇಳಿದ್ದಾರೆ.

Video: ನಾಲ್ಕು ಗಂಟೆಯ ಮದ್ವೆಗೆ ಲಕ್ಷ ಲಕ್ಷ ಹಣ ಖರ್ಚು ಮಾಡುವ ಅಗತ್ಯ ಏನಿದೆ? ಇದು ವಾಸ್ತವಿಕ ಸತ್ಯ
ಸಾಂದರ್ಭಿಕ ಚಿತ್ರ

Updated on: Dec 01, 2025 | 4:39 PM

ಹಿಂದಿನ ಕಾಲದ ಮದುವೆಗಳೇ ಚಂದ, ಯಾವ ಆಡಂಬರನೂ ಇಲ್ಲ (Expensive modern weddings). ಲಕ್ಷ… ಲಕ್ಷ.. ಖರ್ಚೂ ಇಲ್ಲ. ಆದರೆ ಇಂದಿನ ಕಾಲದಲ್ಲಿ ಮದುವೆಯೆಂದರೆ ದುಬಾರಿ, ಲಕ್ಷ..ಲಕ್ಷ ಖರ್ಚು ಮಾಡಿ ಮದುವೆ ಮಾಡಿಕೊಳ್ಳುತ್ತಾರೆ. ಇದು ಇಂದಿನ ಕಾಲದಲ್ಲಿ ಘನತೆಯ ಪ್ರಶ್ನೆ. ಆದರೆ ಕೊನೆಗೆ ಸಣ್ಣ ಸಣ್ಣ ವಿಚಾರಗಳಿಗೆ ಜಗಳ ಮಾಡಿಕೊಂಡು ವಿಚ್ಛೇದನ ಪಡೆಯುತ್ತಾರೆ.  ಮಾಡಿದ ಖರ್ಚೆಲ್ಲ ನೀರಿನಲ್ಲಿ ಹೋಮ. ಇದು ಇಂದಿನ ಕಾಲದ ಮದುವೆ. ಆದರೆ ನಮ್ಮ ಹಿರಿಯರು ಕಾಲದ ಮದುವೆ ಒಂಥರ ಅದ್ಭುತ. ಹುಡುಗನ ಮನೆಯಲ್ಲೇ ಮದುವೆ, ಯಾವುದೇ ದೊಡ್ಡ ಮದುವೆ ಮಂಟಪ ಇರಲಿಲ್ಲ. ಎಲ್ಲ ಸಂಬಂಧಿಕರು, ಆ ಮನೆಗೆ ಬರುವುದು. ಮದುವೆ ಮನೆಯ ಕೆಲಸದಲ್ಲಿ ಭಾಗಿಯಾಗುತ್ತಾರೆ. ಹೀಗೆ ಅಂದಿನ ಕಾಲದ ಮದುವೆ ತುಂಬಾ ಸಂಭ್ರಮದಿಂದ ಇತ್ತು. ಆದರೆ ಇಂದು ಅದೆಲ್ಲ ಬದಲಾವಣೆ ಆಗಿದೆ. ಇದೀಗ ಆಡಂಬರ ಮದುವೆಗೆ ಸಂಬಂಧಿಸಿದಂತೆ ವಿಡಿಯೋವೊಂದು ವೈರಲ್​​ ಆಗಿದೆ. ಈ ವಿಡಿಯೋ ನೋಡಿ ಎಲ್ಲರೂ ಒಮ್ಮೆ ದುಬಾರಿ ಮದುವೆಯ ಬಗ್ಗೆ ಯೋಚನೆ ಮಾಡುವಂತೆ ಮಾಡಿದೆ.

ವೀಡಿಯೊವನ್ನು @sarviind ಎಂಬ ಎಕ್ಸ್​​ ಖಾತೆಯಿಂದ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಪೋಸ್ಟ್​​​​ ಆದ ಕೆಲವೇ ಸೆಕೆಂಡುಗಳಲ್ಲಿ ಸಾವಿರಾರು ಲೈಕ್‌ಗಳು, ಶೇರ್‌ಗಳು ಮತ್ತು ಕಾಮೆಂಟ್‌ಗಳನ್ನು ಗಳಿಸಿದೆ. ಇದು ಮದುವೆಯ ವಾಸ್ತವ ವಿಚಾರಗಳನ್ನು ಹೇಳುತ್ತದೆ. ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಹಂಚಿಕೊಂಡಿರುವ ಮದುವೆ ಅನುಭವ ಎಲ್ಲರಿಗೂ ಮನಮುಟ್ಟಿದೆ. ಅಷ್ಟಕ್ಕೂ ಈ ವಿಡಿಯೋದಲ್ಲಿ ಏನಿದೆ? ಯಾವ ಕಾರಣಕ್ಕೆ ಇಷ್ಟೊಂದು ವೈರಲ್​​ ಆಗುತ್ತಿದೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ. ಈ ವ್ಯಕ್ತಿ ವಿಡಿಯೋದಲ್ಲಿ ಹೀಗೆ ಹೇಳುತ್ತಾರೆ. “ನಾಲ್ಕು ಗಂಟೆಯ ಮದುವೆಗೆ ಇಷ್ಟೊಂದು ಖರ್ಚು ಮಾಡಬೇಕಾ? ಇದರ ಅಗತ್ಯವಾದರೂ ಏನು? ನಾಲ್ಕು ಗಂಟೆಗಳ ಕಾರ್ಯಕ್ರಮಕ್ಕೆ ಬಿಲ್ 37.40 ಲಕ್ಷ ರೂ., ಒಂದು ಪ್ಲೇಟ್ ಊಟಕ್ಕೆ 3040 ರೂ. ವೆಚ್ಚ. ಇಷ್ಟೊಂದು ಖರ್ಚು ಮಾಡಿ, ಮಾಡಿದ ಮದುವೆ ಎಷ್ಟು ವರ್ಷ ಇರುತ್ತದೆ. 4 ಗಂಟೆಯ ಮದುವೆಗೆ ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡುವ ಬದಲು, ಈ ಹಣವನ್ನು ನಿಮ್ಮ ಮಗಳಿಗೆ ನೀಡಿ” ಎಂದು ಹೇಳುತ್ತಾರೆ.

ಇದನ್ನೂ ಓದಿ: ಈ ದೇವಸ್ಥಾನದಲ್ಲಿ ಪಿಜ್ಜಾ, ಪಾನಿಪುರಿಯೇ ಪ್ರಸಾದ, ಇದರ ಹಿಂದಿದೆ ಪ್ರಮುಖ ಕಾರಣ

ವೈರಲ್​​ ವಿಡಿಯೋ

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗುತ್ತಿದ್ದಂತೆ ನೆಟ್ಟಿಗರು ಸಾಲು ಸಾಲು ಕಮೆಂಟ್​​​ ಮಾಡಿದ್ದಾರೆ. ಒಬ್ಬರು ಇದೊಂದು ಕಠೋರ ಸತ್ಯ ಎಂದು ಹೇಳಿದ್ದಾರೆ. ಮತ್ತೊಬ್ಬರು ಕೆಲವರು ಮದುವೆಗಳಿಗೆ ಅನಗತ್ಯವಾಗಿ ಖರ್ಚು ಮಾಡುವುದು ಸಾಮಾಜಿಕ ಒತ್ತಡ ಎಂದು ಹೇಳಿದ್ದಾರೆ. ಮದುವೆಯ ವೆಚ್ಚವನ್ನು ಕಡಿಮೆ ಇಟ್ಟುಕೊಂಡು ಹಣವನ್ನು ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಿ ಎಂದು ಮತ್ತೊಬ್ಬರು ಕಮೆಂಟ್​​ ಮಾಡಿದ್ದಾರೆ. ಇದು ಮದುವೆಯಲ್ಲ, ನಾಲ್ಕು ಗಂಟೆಗಳ ಆರ್ಥಿಕ ವಿಪತ್ತು ಎಂದು ಇನ್ನೊಬ್ಬರು ಹೇಳಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ