Video: ರೈಲಿನಲ್ಲಿ ಬ್ರೇಸ್ಲೆಟ್‌ ಮಾರಿ ಸ್ವಾಭಿಮಾನದ ಬದುಕು ಕಟ್ಟಿಕೊಂಡ ಅಜ್ಜಿ, ವೈರಲ್ ಆಯ್ತು ದೃಶ್ಯ

ವಯಸ್ಸಾದ ಕಾಲದಲ್ಲೂ ಸ್ವಾಭಿಮಾನದಿಂದಲೇ ದುಡಿದು ತಿನ್ನುವ ಹಿರಿಜೀವಗಳನ್ನು ಕಂಡಾಗ ನಿಜಕ್ಕೂ ಹೆಮ್ಮೆ ಎನಿಸುತ್ತದೆ. ಆದರೆ ಇದೀಗ ವೃದ್ಧೆಯೊಬ್ಬರು ಮುಂಬೈನ ಲೋಕಲ್‌  ರೈಲಿನಲ್ಲಿ ಬ್ರೇಸ್ಲೆಟ್‌ಗಳನ್ನು ಮಾರುತ್ತಿರುವ ವಿಡಿಯೋ ವೈರಲ್ ಆಗಿದೆ. ತನ್ನ ಇಳಿ ವಯಸ್ಸಿನಲ್ಲಿ ಜೀವನ ನಿರ್ವಹಣೆಗಾಗಿ ಈ ಕಾಯಕವನ್ನು ಅವಲಂಬಿಸಿರುವ ವೃದ್ಧ ಮಹಿಳೆಯ ಬಗ್ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ರೈಲಿನಲ್ಲಿ ಬ್ರೇಸ್ಲೆಟ್‌ ಮಾರಿ ಸ್ವಾಭಿಮಾನದ ಬದುಕು ಕಟ್ಟಿಕೊಂಡ ಅಜ್ಜಿ, ವೈರಲ್ ಆಯ್ತು ದೃಶ್ಯ
ವೈರಲ್‌ ವಿಡಿಯೋ
Image Credit source: Instagram

Updated on: Feb 05, 2026 | 2:20 PM

ಮುಂಬೈ, ಫೆಬ್ರವರಿ 05: ಸ್ವಾಭಿಮಾನದ ಬದುಕೇ ಹಾಗೆ, ಯಾರ ಬಳಿ ಕೈಯೊಡ್ಡದೇ ಮೂರು ಹೊತ್ತಿನ ಊಟಕ್ಕಾಗಿ ಕಷ್ಟಪಟ್ಟು ದುಡಿಯುತ್ತಾರೆ. ಇದಕ್ಕೆ ಸಾಕ್ಷಿಯಂತಿದೆ ಈ ವಿಡಿಯೋ. ಮಕ್ಕಳು ತಮ್ಮನ್ನು ನೋಡಬೇಕಾದ ಸಮಯದಲ್ಲಿ ತಾವೇ ದುಡಿದು ಜೀವನ ನಡೆಸುತ್ತಿರುವವರಲ್ಲಿ ಈ ವೃದ್ಧೆ (old woman) ಕೂಡ ಒಬ್ಬರು. ಹೌದು, 89 ವರ್ಷದ ಅಜ್ಜಿಯೊಬ್ಬರು ಮುಂಬೈನ (Mumbai) ಲೋಕಲ್ ರೈಲಿನಲ್ಲಿ ಬ್ರೇಸ್ಲೆಟ್‌ಗಳನ್ನು ಮಾರುತ್ತಿದ್ದು, ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರ ಕಣ್ಣು ಒದ್ದೆಯಾಗಿದೆ.

ಮೀತಾ ತುಷಿತ್ ಶಾ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿ ಕೊಳ್ಳಲಾದ ಈ ವಿಡಿಯೋದಲ್ಲಿ ಮುಂಬೈ ಲೋಕಲ್ ರೈಲಿನಲ್ಲಿ ವೃದ್ಧೆಯೊಬ್ಬರು ಬ್ರೇಸ್ಲೆಟ್‌ಗಳನ್ನು ಮಾರುತ್ತಿರುವುದನ್ನು ಕಾಣಬಹುದು. ಈ ವಿಡಿಯೋಗೆ ಇದು ಪ್ರೋತ್ಸಾಹದಾಯಕ ಮತ್ತು ಸ್ಪೂರ್ತಿದಾಯಕವಲ್ಲವೇ?. ಇಂದು ಮಧ್ಯಾಹ್ನ ಮುಂಬೈ ಲೋಕಲ್ ರೈಲಿನಲ್ಲಿ ಹತ್ತುತ್ತಿದ್ದಾಗ, ನಾನು ಬಳೆಗಳನ್ನು ಮಾರುತ್ತಿದ್ದ 89 ವರ್ಷದ ವೃದ್ಧೆಯನ್ನು ಭೇಟಿಯಾದೆ.

ವೈರಲ್ ವಿಡಿಯೋ ಇಲ್ಲಿದೆ

ನಾನು ಎಲ್ಲವನ್ನೂ ಖರೀದಿಸಲು ಬಯಸಿದ್ದೆ, ಆದರೆ ಹಣದ ಕೊರತೆಯಿಂದಾಗಿ ಸಾಧ್ಯವಾಗಲಿಲ್ಲ. ತನ್ನ ಕುಟುಂಬದ ಜೀವನ ವೆಚ್ಚವನ್ನು ಭರಿಸಬೇಕು, ಅದಕ್ಕಾಗಿ ಈ ಕೆಲಸ ಎಂದು ಹೇಳಿದರು. ಇದು ನಿಜವಾಗಿಯೂ ಮಹಿಳಾ ಸಬಲೀಕರಣಕ್ಕೆ ಒಂದು ಉದಾಹರಣೆಯಾಗಿದೆ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋದಲ್ಲಿ ಮೀತಾ ತುಷಿತ್ ಶಾ ಈ ಅಜ್ಜಿಯನ್ನು ಮಾತನಾಡಿಸಿದ್ದು, ನನ್ನ ಹೆಸರು ಕಮಲಾಬೆನ್ ಮೆಹ್ತಾ. ನಾನು ನಲಸೋಪರಾದಲ್ಲಿ ನೆಲೆಸಿದ್ದೇನೆಂದು ಹೇಳುವುದನ್ನು ನೀವಿಲ್ಲಿ ನೋಡಬಹುದು.

ಇದನ್ನೂ ಓದಿ: 70 ನೇ ವಯಸ್ಸಿನಲ್ಲಿ ಮೊದಲ ವ್ಲಾಗ್, ಈ ವೃದ್ಧನ ಪ್ರಯತ್ನಕ್ಕೆ ನೆಟ್ಟಿಗರಿಂದ ಭಾರೀ ಮೆಚ್ಚುಗೆ

ಈ ವಿಡಿಯೋ ಎರಡು ಮಿಲಿಯನ್ ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರರು, ಈ ವೃದ್ಧೆಯ ಸ್ವಾಭಿಮಾನದ ಬದುಕಿಗೆ ನನ್ನದೊಂದು ಸಲಾಂ ಎಂದರೆ, ಮತ್ತೊಬ್ಬರು, ಈ ವೃದ್ಧೆ ನಾನು ಜೂನಿಯರ್ ಕಾಲೇಜಿನಲ್ಲಿದ್ದಾಗ ರೈಲುಗಳಲ್ಲಿ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು. ಆದರೆ ಈಗ ನನಗೆ 40 ವರ್ಷ. ಇವತ್ತಿಗೂ ಅವರಲ್ಲಿ ಉತ್ಸಾಹ ಹಾಗೆಯೇ ಇದೆ. ಅವರಿಗೊಂದು ಸಲಾಂ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಎಲ್ಲಾ ಇದ್ದು ಕುಳಿತು ತಿನ್ನುವವರ ನಡುವೆ ಈ ವೃದ್ಧೆ ಎಲ್ಲರಿಗೂ ಮಾದರಿ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ