AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: 70 ನೇ ವಯಸ್ಸಿನಲ್ಲಿ ಮೊದಲ ವ್ಲಾಗ್, ಈ ವೃದ್ಧನ ಪ್ರಯತ್ನಕ್ಕೆ ನೆಟ್ಟಿಗರಿಂದ ಭಾರೀ ಮೆಚ್ಚುಗೆ

ಮಕ್ಕಳಿಂದ ಹಿಡಿದು ವೃದ್ಧವರೆಗೂ ಮೊಬೈಲ್ ಕೈಯಲ್ಲಿಡು ಬ್ಲಾಗ್ ಮಾಡುವುದನ್ನು ನೀವು ನೋಡಿರುತ್ತೀರಿ. ಆದರೆ 70 ವರ್ಷದ ವೃದ್ಧ ವ್ಯಕ್ತಿಯೊಬ್ಬರು ಮೊದಲ ಬಾರಿಗೆ ವ್ಲಾಗ್ ಮಾಡಿದ್ದಾರೆ. ಇವರ ಮೊದಲ ವಿಡಿಯೋ ವೈರಲ್ ಆಗಿದ್ದು, 72 ಗಂಟೆಗಳಲ್ಲಿ ಮಿಲಿಯನ್‌ಗಟ್ಟಲೇ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಈ ವಿಡಿಯೋದ ಮೂಲಕಕಲಿಕೆಗೆ ವಯಸ್ಸಿನ ಮಿತಿಯಿಲ್ಲ ಎಂದು ಸಾಭೀತು ಪಡಿಸಿದ್ದಾರೆ. ಕುರಿತಾದ ಸ್ಟೋರಿ ಇಲ್ಲಿದೆ.

Video: 70 ನೇ ವಯಸ್ಸಿನಲ್ಲಿ ಮೊದಲ ವ್ಲಾಗ್, ಈ ವೃದ್ಧನ ಪ್ರಯತ್ನಕ್ಕೆ ನೆಟ್ಟಿಗರಿಂದ ಭಾರೀ ಮೆಚ್ಚುಗೆ
ವಿನೋದ್ ಕುಮಾರ್ ಶರ್ಮಾImage Credit source: Instagram
ಸಾಯಿನಂದಾ
|

Updated on:Jan 22, 2026 | 3:21 PM

Share

ಸೋಶಿಯಲ್ ಮೀಡಿಯಾವೇ (social media) ಹಾಗೆ, ಜನಸಾಮಾನ್ಯರನ್ನು ಫೇಮಸ್ ಮಾಡಿ ಬಿಡುತ್ತದೆ. ರಾತ್ರಿ ಬೆಳಗಾಗುವಷ್ಟರಲ್ಲಿ ಫೇಮಸ್ ಆದವರ ಬಗ್ಗೆ ನೀವು ಕೇಳಿರುತ್ತೀರಿ. ಆದರೆ ಉತ್ತರ ಪ್ರದೇಶದ (Uttar Pradesh) 70 ವರ್ಷದ ವೃದ್ಧರೊಬ್ಬರು ಮೊದಲ ಬಾರಿಗೆ ವ್ಲಾಗ್ ಮಾಡಿದ್ದು, ತಮ್ಮ ಪ್ರಾಮಾಣಿಕ ಪ್ರಯತ್ನದಿಂದ ನೆಟ್ಟಿಗರ ಹೃದಯ ಗೆದ್ದು ಕೊಂಡಿದ್ದಾರೆ. ಇವರು ಅಪ್ಲೋಡ್ ಮಾಡಿದ ಮೊದಲ ವಿಡಿಯೋ 30 ಮಿಲಿಯನ್‌ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ.

ವಿನೋದ್ ಕುಮಾರ್ ಶರ್ಮಾ (Vinod Kumar Sharma) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಮೊದಲ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಬಹಳ ವಿನ್ರಮವಾಗಿ ತಮ್ಮನ್ನು ತಾವು ಪರಿಚಯಿಸಿಕೊಂಡಿದ್ದಾರೆ. ನನ್ನ ಹೆಸರು ವಿನೋದ್ ಕುಮಾರ್ ಶರ್ಮಾ. ನಾನು ಉತ್ತರ ಪ್ರದೇಶದವನು. ನನಗೆ ವ್ಲಾಗ್ ಮಾಡುವುದು ಹೇಗೆಂದು ಗೊತ್ತಿಲ್ಲ, ಆದರೆ ನಾನು ವೀಡಿಯೊಗಳನ್ನು ಮಾಡುವ ಮೂಲಕ ನನ್ನ ಸಮಯವನ್ನು ಅರ್ಥ ಪೂರ್ಣವಾಗಿಸಲು ಪ್ರಯತ್ನಿಸುತ್ತಿದ್ದೇನೆ. ನಾನು ಈ ವ್ಲಾಗ್ ಅನ್ನು ಇಷ್ಟಪಡುತ್ತೇನೆ ಆದ್ದರಿಂದ ನಾನು ಈ ಕೆಲಸವನ್ನು ಮುಂದುವರಿಸಲು ನೀವು ಪ್ರೋತ್ಸಾಹಿಸುತ್ತೀರಿ ನಾನು ಭಾವಿಸುತ್ತೇನೆ ಎಂದು ಹೇಳುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಇದು ವೃದ್ಧ ದಂಪತಿಯ ಶುದ್ಧ ಪ್ರೀತಿ; ಮಡದಿಯ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ನೀಡಿದ ವೃದ್ಧ ವ್ಯಕ್ತಿ

ಜನವರಿ 19 ರಂದು ಹಂಚಿ ಕೊಂಡ ಈ ವಿಡಿಯೋ 30 ಮಿಲಿಯನ್‌ಗಿಂತಲೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಇದೇ ರೀತಿ ಮುಂದುವರಿಸಿ, ದಾದಾ ಜಿ.ಕಲಿಯಲು ಯಾವುದೇ ವಯಸ್ಸಿಲ್ಲ. ಈ ಮಾತನ್ನು ನೀವು ಚೆನ್ನಾಗಿ ಸಾಬೀತುಪಡಿಸಿದ್ದೀರಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ನೀವು ನಮ್ಮ ಹೃದಯವನ್ನು ಗೆದ್ದಿದ್ದೀರಿ ಎಂದಿದ್ದಾರೆ. ಇನ್ನೊಬ್ಬರು, ನಿಮ್ಮ ಸರಳತೆ ನಿಮ್ಮ ವಿಶಿಷ್ಟ ಲಕ್ಷಣ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:19 pm, Thu, 22 January 26

ಮುಸ್ಲಿಂ ಯುವತಿಯೊಂದಿಗೆ ಇದ್ದ ಹಿಂದೂ ಯುವಕರು ಮೇಲೆ ಹಲ್ಲೆ
ಮುಸ್ಲಿಂ ಯುವತಿಯೊಂದಿಗೆ ಇದ್ದ ಹಿಂದೂ ಯುವಕರು ಮೇಲೆ ಹಲ್ಲೆ
ಶಿವಮೊಗ್ಗ: ಗ್ರಾಮಸ್ಥನಿಗೆ ಅವಾಚ್ಯವಾಗಿ ನಿಂದಿಸಿದ ಕಾಂಗ್ರೆಸ್ ಕಾರ್ಯಕರ್ತ
ಶಿವಮೊಗ್ಗ: ಗ್ರಾಮಸ್ಥನಿಗೆ ಅವಾಚ್ಯವಾಗಿ ನಿಂದಿಸಿದ ಕಾಂಗ್ರೆಸ್ ಕಾರ್ಯಕರ್ತ
ಬಿಕೆ ಹರಿಪ್ರಸಾದ್ ಬಟ್ಟೆ ಹರಿದರಾ ಬಿಜೆಪಿಗರು? ಅಸಲಿ ಸತ್ಯ ಈ ವಿಡಿಯೋದಲ್ಲಿದೆ
ಬಿಕೆ ಹರಿಪ್ರಸಾದ್ ಬಟ್ಟೆ ಹರಿದರಾ ಬಿಜೆಪಿಗರು? ಅಸಲಿ ಸತ್ಯ ಈ ವಿಡಿಯೋದಲ್ಲಿದೆ
ಭಾಷಣಕ್ಕೆ ಹರಿಪ್ರಸಾದ್​​ ಪಟ್ಟು: ಸದನದಿಂದ ಹೊರಟ ಗವರ್ನರ್​ ತಡೆದು ಹೈಡ್ರಾಮಾ
ಭಾಷಣಕ್ಕೆ ಹರಿಪ್ರಸಾದ್​​ ಪಟ್ಟು: ಸದನದಿಂದ ಹೊರಟ ಗವರ್ನರ್​ ತಡೆದು ಹೈಡ್ರಾಮಾ
ವಾಸ್ತವಕ್ಕೆ ಬರಲು ಒದ್ದಾಡಿದ ಗಿಲ್ಲಿ; ಹೊಸ ವಿಡಿಯೋ ವೈರಲ್
ವಾಸ್ತವಕ್ಕೆ ಬರಲು ಒದ್ದಾಡಿದ ಗಿಲ್ಲಿ; ಹೊಸ ವಿಡಿಯೋ ವೈರಲ್
ನರೇಗಾ ಹೆಸರು ಬದಲಾವಣೆ ವಿವಾದ, ರಾಜ್ಯಪಾಲರ ಭಾಷಣ
ನರೇಗಾ ಹೆಸರು ಬದಲಾವಣೆ ವಿವಾದ, ರಾಜ್ಯಪಾಲರ ಭಾಷಣ
ರೋಡ್​​ಶೋ ವೇಳೆ ಮೀನು  ಹಿಡಿದು ಕುಣಿದ ಪಟಾಕಿ ರಕ್ಷಿತಾ
ರೋಡ್​​ಶೋ ವೇಳೆ ಮೀನು  ಹಿಡಿದು ಕುಣಿದ ಪಟಾಕಿ ರಕ್ಷಿತಾ
ಕೊನೆಯ ಓವರ್​ನಲ್ಲಿ 3 ಸಿಕ್ಸ್​ ಸಿಡಿಸಿ 3 ರನ್​ಗಳಿಂದ ಗೆದ್ದ ಹೋಬಾರ್ಟ್​ ಪಡೆ
ಕೊನೆಯ ಓವರ್​ನಲ್ಲಿ 3 ಸಿಕ್ಸ್​ ಸಿಡಿಸಿ 3 ರನ್​ಗಳಿಂದ ಗೆದ್ದ ಹೋಬಾರ್ಟ್​ ಪಡೆ
ಬೀದಿಯಲ್ಲಿ ವ್ಯಕ್ತಿಯ ಬೆನ್ನಟ್ಟಿ ಚಾಕುವಿನಿಂದ ಇರಿದು ಪುರುಷರ ಗುಂಪು
ಬೀದಿಯಲ್ಲಿ ವ್ಯಕ್ತಿಯ ಬೆನ್ನಟ್ಟಿ ಚಾಕುವಿನಿಂದ ಇರಿದು ಪುರುಷರ ಗುಂಪು
ಮಾಲೀಕರ ಅಂತ್ಯಕ್ರಿಯೆಗೂ ಟ್ರ್ಯಾಕ್ಟರ್ ಹತ್ತಿ ಬಂದ ನಾಯಿ
ಮಾಲೀಕರ ಅಂತ್ಯಕ್ರಿಯೆಗೂ ಟ್ರ್ಯಾಕ್ಟರ್ ಹತ್ತಿ ಬಂದ ನಾಯಿ