Video: ಇದು ವೃದ್ಧ ದಂಪತಿಯ ಶುದ್ಧ ಪ್ರೀತಿ; ಮಡದಿಯ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ನೀಡಿದ ವೃದ್ಧ ವ್ಯಕ್ತಿ
ಇಂದಿನ ಕಾಲಘಟ್ಟದಲ್ಲಿ ಸಣ್ಣ ಸಣ್ಣ ವಿಷಯಕ್ಕೂ ದೂರಾಗುವ ಯುವ ಜೋಡಿಗಳ ನಡುವೆ ವೃದ್ಧ ದಂಪತಿಗಳ ದಾಂಪತ್ಯ ಜೀವನ ಎಲ್ಲರಿಗೂ ಮಾದರಿ. ಇದೀಗ ವೃದ್ಧ ದಂಪತಿಯ ಶುದ್ಧ ಪ್ರೀತಿಯನ್ನು ಸಾರುವ ವಿಡಿಯೋ ವೈರಲ್ ಆಗಿದೆ. ವೃದ್ಧ ವ್ಯಕ್ತಿಯೊಬ್ಬ ತನ್ನ ಜೀವನ ಸಂಗಾತಿಯ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ನೀಡಿರುವ ದೃಶ್ಯವಿದಾಗಿದೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಪ್ರತಿಯೊಬ್ಬ ಹೆಣ್ಣು ತನ್ನ ಉಸಿರು ಇರುವ ತನಕ ತನ್ನ ಗಂಡ ತನ್ನನ್ನು ಕಣ್ಣರೆಪ್ಪೆಯ ಹಾಗೆ ನೋಡಿಕೊಳ್ಳಲಿ ಎಂದು ಬಯಸುತ್ತಾಳೆ. ಅಂತಹ ಜೀವನ ಸಂಗಾತಿ ಸಿಕ್ಕರೆ ಆಕೆಗಿಂತ ಅದೃಷ್ಟವಂತೆ ಬೇರೆ ಯಾರಿಲ್ಲ. ಆದರೆ ಈ ಹೃದಯಸ್ಪರ್ಶಿ ದೃಶ್ಯ ನೋಡಿದಾಗ ಈ ವೃದ್ಧ ದಂಪತಿಯೂ (Elderly couple) ಯುವ ಜೋಡಿಗಳಿಗೆ ಮಾದರಿ ಎಂದೆನಿಸುತ್ತದೆ. ವಯಸ್ಸಾದ ವ್ಯಕ್ತಿ (Old man) ತನ್ನ ಪತ್ನಿಯನ್ನು ಸಂತೋಷವಾಗಿರಿಸುವ ಸಣ್ಣ ಪ್ರಯತ್ನದಲ್ಲಿ ತೊಡಗಿಕೊಂಡಿದ್ದಾರೆ. ವೃದ್ಧರೊಬ್ಬರು ತಮ್ಮ ಪತ್ನಿಯ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ನೀಡಿದ್ದಾರೆ. ಭಾವುಕ ಕ್ಷಣದ ಈ ವಿಡಿಯೋ ವೈರಲ್ ಆಗಿದ್ದು, ಈ ದೃಶ್ಯವನ್ನು ನೆಟ್ಟಿಗರು ಕಣ್ತುಂಬಿಸಿಕೊಂಡಿದ್ದಾರೆ.
Little Letters Linked ಎಂಬ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ವೃದ್ಧ ವ್ಯಕ್ತಿಯೊಬ್ಬರು ಮಡದಿಯ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ನೀಡುತ್ತಿರುವುದನ್ನು ಕಾಣಬಹುದು. ವಯಸ್ಸಾದ ವ್ಯಕ್ತಿಯೂ ಪುಟ್ಟದಾದ ಕೇಕ್ ಮೇಲೆ ಕ್ಯಾಂಡಲ್ ಇಟ್ಟುಕೊಂಡು ಮೆಲ್ಲನೆ ನಡೆದುಕೊಂಡು ಬಂದು ಪತ್ನಿಯ ಮುಂದೆ ಇರಿಸುತ್ತಾರೆ. ಇದನ್ನು ನೋಡುತ್ತಿದ್ದಂತೆ ವೃದ್ಧೆಯ ಮುಖವು ಖುಷಿಯಲ್ಲಿ ಅರಳುತ್ತದೆ. ಕೈ ಮುಗಿದು ಕ್ಯಾಂಡಲ್ ಆರಿಸಿ ಕೇಕ್ ಕತ್ತರಿಸಿ ಪತಿಗೂ ಕೇಕ್ ತಿನ್ನಿಸುತ್ತಾರೆ. ಈ ವೇಳೆಯಲ್ಲಿ ತನ್ನ ಮಡದಿಗಾಗಿ ತನ್ನ ಸರ್ಪ್ರೈಸ್ ಉಡುಗೊರೆಯನ್ನು ನೀಡುತ್ತಾರೆ. ಪತಿ ನೀಡಿದ ಉಡುಗೊರೆ ಬಾಕ್ಸ್ ತೆರೆಯುತ್ತಿದ್ದಂತೆ ಮೇಕಪ್ ಕಿಟ್ ಎನ್ನುವುದು ವೃದ್ಧೆಗೆ ತಿಳಿಯುತ್ತದೆ. ಪತಿ ನೀಡಿದ ಉಡುಗೊರೆ ನೋಡಿ ವೃದ್ಧೆಯೂ ಖುಷಿಯಾಗಿದ್ದು ಮುಖದಲ್ಲೇ ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ
View this post on Instagram
ಇದನ್ನೂ ಓದಿ:ಮೊದಲ ಬಾರಿಗೆ ಕಡಲ ತೀರಕ್ಕೆ ಭೇಟಿ ನೀಡಿ ಸೌಂದರ್ಯ ಸವಿದ ವೃದ್ಧ ದಂಪತಿ
ಈ ವಿಡಿಯೋ ನಾಲ್ಕು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಆದರ್ಶ ದಂಪತಿಗಳು ಎಂದಿದ್ದಾರೆ. ಇನ್ನೊಬ್ಬರು, ಇಂತಹ ಮಾದರಿ ಜೋಡಿಗಳು ಕಾಣಸಿಗುವುದೇ ವಿರಳ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಮತ್ತೆ ಮತ್ತೆ ನೋಡಬೇಕೇನಿಸುವ ವಿಡಿಯೋ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:46 pm, Mon, 12 January 26
