Optical Illusion: ನೀವು ಬುದ್ಧಿವಂತರೇ, ಈ ಚಿತ್ರದಲ್ಲಿರುವ ಬೆಕ್ಕನ್ನು ಹುಡುಕಿ ನೋಡೋಣ
ನಿಮ್ಮ ಬುದ್ಧಿವಂತಿಕೆಯನ್ನು ಪರೀಕ್ಷಿಸುವ ಸಮಯ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಟ್ರಿಕ್ಕಿ ಒಗಟಿನ ಚಿತ್ರವೊಂದು ವೈರಲ್ ಆಗಿದೆ. ಈ ಚಿತ್ರದಲ್ಲಿ ಮಲಗಿರುವ ಬೆಕ್ಕನ್ನು ಇಂತಿಷ್ಟು ಸಮಯದೊಳಗೆ ಪತ್ತೆ ಹಚ್ಚುವ ಸವಾಲು ನೀಡಲಾಗಿದೆ. ಇದೀಗ ನಿಮ್ಮ ಮೆದುಳಿಗೆ ಕೆಲಸ ನೀಡಿ ಒಗಟು ಬಿಡಿಸಲು ಪ್ರಯತ್ನಿಸಿ. ಒಂದು ವೇಳೆ ನೀವು ಈ ಒಗಟು ಬಿಡಿಸಿದರೆ ಜಾಣರು ಎನ್ನುವುದು ಖಾತರಿಯಾಗುತ್ತದೆ.

ನಿಮ್ಮ ಮೆದುಳು ಎಷ್ಟು ಚುರುಕಾಗಿದೆ ತಿಳಿದುಕೊಳ್ಳಬೇಕೇ, ಹಾಗಾದ್ರೆ ನೀವು ಈ ಆಪ್ಟಿಕಲ್ ಇಲ್ಯೂಷನ್ (Optical Illusion) ಚಿತ್ರಗಳತ್ತ ಒಮ್ಮೆ ಕಣ್ಣಾಯಿಸುವುದು ಒಳ್ಳೆಯದು. ಈ ಒಗಟಿನ ಚಿತ್ರಗಳು ನಿಮಗೆ ಟ್ರಿಕ್ಕಿ ಎಂದೆನಿಸಬಹುದು. ನೀವು ಏಕಾಗ್ರತೆಯಿಂದ ಗಮನ ಹರಿಸಿದರೆ ಈ ಒಗಟು ಬಿಡಿಸುವುದು ಕಷ್ಟವಾಗಲ್ಲ. ಸಸ್ಯಗಳ ನಡುವೆ ಅಡಗಿರುವ ಬೆಕ್ಕನ್ನು ಕಂಡುಹಿಡಿಯಬೇಕು. ಇಲ್ಲಿ ಬೆಕ್ಕು ಮಲಗಿಕೊಂಡಿದೆ, ನೀವು ಕೇವಲ ಐದು ಸೆಕೆಂಡುಗಳೊಳಗೆ ಈ ಒಗಟು ಬಿಡಿಸಲು ಪ್ರಯತ್ನಿಸಿ.
@consiousovserver_22 ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಇಲ್ಯೂಷನ್ ಫೋಟೋವೊಂದನ್ನು ಹಂಚಿಕೊಳ್ಳಲಾಗಿದೆ. ನಿಮ್ಮ ಯೋಚನಾ ಸಾಮರ್ಥ್ಯಕ್ಕೆ ಸವಾಲು ನೀಡುವ ಈ ಒಗಟಿನ ಚಿತ್ರ ನೋಡಿದಾಗ ನಿಮ್ಮ ಕಣ್ಣಿಗೆ ಕಾಣಿಸುವುದೇ ಹಚ್ಚ ಹಸಿರಿನ ಸಸ್ಯಗಳಿಂದ ಆವೃತ್ತವಾಗಿರುವ ಪ್ರದೇಶ. ಆದರೆ ಈ ಸಸ್ಯಗಳ ನಡುವೆ ಬೆಕ್ಕೊಂದು ಮಲಗಿ ಕೊಂಡಿದೆ. ತೀಕ್ಷ್ಣ ದೃಷ್ಟಿ ಹೊಂದಿರುವವರು ಮಾತ್ರ ಬೆಕ್ಕನ್ನು ತಕ್ಷಣವೇ ಗುರುತಿಸಲು ಸಾಧ್ಯ. ನೀವು ಅಂತಹವರಲ್ಲಿ ಒಬ್ಬರೇ ಎಂದು ತಿಳಿಯಲು ಇದು ಸೂಕ್ತ ಸಮಯ.
ಇದನ್ನೂ ಓದಿ: ಜಸ್ಟ್ 15 ಸೆಕೆಂಡುಗಳಲ್ಲಿ ಈ ಚಿತ್ರದಲ್ಲಿರುವ ಪಾರಿವಾಳವನ್ನು ಕಂಡು ಹಿಡಿಯಬಲ್ಲಿರಾ
ಮಲಗಿರುವ ಬೆಕ್ಕು ನಿಮ್ಮ ಕಣ್ಣಿಗೆ ಕಾಣಿಸಿತೇ?
ಈ ಒಗಟಿನ ಚಿತ್ರಗಳು ನಿಮ್ಮ ಕಣ್ಣನ್ನು ಮೋಸಗೊಳಿಸುವುದೇನು ಸಹಜ. ಈ ಚಿತ್ರದಲ್ಲಿರುವ ಬೆಕ್ಕನ್ನು ಹುಡುಕುವುದು ಅಷ್ಟು ಸುಲಭವಲ್ಲ. ಬೆಕ್ಕಿನ ಮೈ ಬಣ್ಣವು ಸುತ್ತಲಿನ ಪ್ರದೇಶದೊಂದಿಗೆ ಬೆರೆತು ಹೋಗಿದೆ. ಎಷ್ಟೇ ಪ್ರಯತ್ನ ಪಟ್ಟರೂ ಬೆಕ್ಕನ್ನು ಕಂಡು ಹಿಡಿಯಲು ಸಾಧ್ಯವಾಗಿಲ್ಲವೇ. ಬೆಕ್ಕು ಎಲ್ಲಿದೆ ಎಂದು ನಾವೇ ಹೇಳುತ್ತೇವೆ. ನೀವು ಬೆಕ್ಕನ್ನು ಎಡಭಾಗದಲ್ಲಿರುವ ನೆರಳಿನಲ್ಲಿ, ಎರಡು ಹೂವುಗಳ ಮೇಲೆ ನೋಡಬಹುದು. ನೀವು ಮಲಗಿರುವ ಬೆಕ್ಕನ್ನು ನೋಡಿದ್ದೀರಿ ಎಂದು ನಾವು ಭಾವಿಸುತ್ತೇವೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
