ಮನೆಯಲ್ಲಿ ಯಾರು ಇಲ್ಲದಿರುವಾಗ ಅಕ್ಕ- ತಮ್ಮ ಇಬ್ಬರು ಸೇರಿ ಅಶ್ಲೀಲ ವಿಡಿಯೋ ನೋಡುತ್ತಿದ್ದು, ಇದೀಗ 15 ವರ್ಷದ ಅಕ್ಕ ತನ್ನ 13 ವರ್ಷದ ತಮ್ಮನಿಂದಲೇ ಗರ್ಭಿಣಿಯಾಗಿದ್ದಾಳೆ. ಈ ಆಘಾತಕಾರಿ ಘಟನೆ ಮುಂಬೈನಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿಲಾಗಿದ್ದು, ಅಪ್ರಾಪ್ತ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದು ಬಾಲಾಪರಾಧಿ ಕೇಂದ್ರಕ್ಕೆ ಒಪ್ಪಿಸಿದ್ದಾರೆ.
ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ , ಪೋಲೀಸರಿಗೆ ಬಾಲಕಿ ನೀಡಿರುವ ಹೇಳಿಕೆಯ ಪ್ರಕಾರ ” ತನ್ನ ಸಹೋದರ ಅಶ್ಲೀಲ ವಿಡಿಯೋ ನೋಡುವ ಚಟಕ್ಕೆ ಬಿದ್ದಿದ್ದ. ಬಳಿಕ ತಾನು ನೋಡುವಂತೆ ಪ್ರೇರೇಪಿಸಿದ್ದ. ಇದರಿಂದಾಗಿ ಮನೆಯಲ್ಲಿ ಯಾರು ಇಲ್ಲದಿರುವಾಗ ನಾವಿಬ್ಬರು ವಿಡಿಯೋ ನೋಡುತ್ತಿದ್ದೆವು. ಕಳೆದ ವರ್ಷ ಡಿಸೆಂಬರ್‌ನಲ್ಲಿ ಮೊದಲ ಬಾರಿಗೆ ಸಂಭೋಗಕ್ಕೆ ಯತ್ನಿಸಿ ವಿಫಲರಾಗಿದ್ದೆವು” ಎಂದು ತಿಳಿಸಿದ್ದಾಳೆ.
ಆದರೆ ಮುಂದಿನ ತಿಂಗಳಲ್ಲಿ (ಜನವರಿ), ಬಾಲಕಿ ಬೇಡವೆಂದು ಕೇಳಿಕೊಂಡಿದ್ದರೂ ಸಹ ಬಾಲಕ ಅವಳ ಮೇಲೆ ಅತ್ಯಾಚಾರವೆಸಗಿದ್ದಾನೆ. ಸಂತ್ರಸ್ತೆ ಬಾಲಕಿಗೆ ಮುಟ್ಟು ಆಗದೇ ಇರುವಾಗ ಈ ವಿಷಯವನ್ನು ಅಂತಿಮವಾಗಿ ತಾಯಿಗೆ ಬಹಿರಂಗಪಡಿಸಿದ್ದಾಳೆ .
ಇದನ್ನೂ ಓದಿ: ಕೈಗಳಿಗೆ ಹಸಿರು ಬಳೆ ತೊಟ್ಟು, ವಧುವಿನಂತೆ ಸಿಂಗಾರಗೊಂಡು ಹಾಸ್ಟೆಲ್ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಯುವಕ
ಬಾಲಕನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (ಅತ್ಯಾಚಾರ) ಮತ್ತು 376 (2)( ಪದೇ ಪದೇ ಅತ್ಯಾಚಾರ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಸೆಕ್ಷನ್ 4, 6, 8 ಮತ್ತು 12 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣವನ್ನು ಖಂಡೇಶ್ವರ ಪೊಲೀಸರಿಗೆ ವರ್ಗಾಯಿಸಲಾಗಿದ್ದು, ಮುಂದಿನ ಕ್ರಮವನ್ನು ಮಕ್ಕಳ ಕಲ್ಯಾಣ ಆಯೋಗ ನಿರ್ಧರಿಸಲಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:10 pm, Tue, 21 May 24