Video Viral: ಕಿಕ್ಕಿರಿದು ತುಂಬಿದ ರೈಲಿನಲ್ಲಿ ನೇತಾಡುತ್ತಾ ಪ್ರಯಾಣ; ಎದೆ ನಡುಕ ಹುಟ್ಟಿಸುವ ವಿಡಿಯೋ ಇಲ್ಲಿದೆ ನೋಡಿ
ವೈರಲ್ ವಿಡಿಯೋದಲ್ಲಿ ಪುರುಷ ಮತ್ತು ಮಹಿಳೆಯರು ಕಿಕ್ಕಿರಿದು ತುಂಬಿದ ಚಲಿಸುವ ರೈಲನ್ನು ಹತ್ತಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ವ್ಯಕ್ತಿಯೊಬ್ಬ ಮೊದಲು ಮಹಿಳೆಗೆ ರೈಲು ಹತ್ತಲು ಸಹಾಯ ಮಾಡುತ್ತಾನೆ, ಮತ್ತು ಆಕೆಯನ್ನು ರೈಲಿನ ಒಳಗೆ ತಳ್ಳುತ್ತಾನೆ. ನಂತರ, ಭಾರವಾದ ಲ್ಯಾಗೇಜ್ ಬ್ಯಾಗ್ ಜೊತೆಗೆ ಆತ ರೈಲಿನ ಕೊನೆಯ ಮೆಟ್ಟಿಲಿನಲ್ಲಿ ನೇತಾಡುತ್ತಾ ಪ್ರಯಾಣಿಸುತ್ತಿರುವುದನ್ನು ಕಾಣಬಹುದು.
ರೈಲ್ವೇ ನಿಲ್ದಾಣದಿಂದ ಹೊರಡುತ್ತಿರುವ ರೈಲಿನಲ್ಲಿ ಬಾಗಿಲಿನ ಹೊರಗೂ ಜನರು ನೇತಾಡುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಒಂದು ಕ್ಷಣ ಎದೆಯಲ್ಲಿ ನಡುಕ ಹುಟ್ಟಿಸುವ ವಿಡಿಯೋ ಕಂಡು ನೆಟ್ಟಿಗರು ‘ದಯವಿಟ್ಟು ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಿ’ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ವೈರಲ್ ವಿಡಿಯೋದಲ್ಲಿ ಪುರುಷ ಮತ್ತು ಮಹಿಳೆಯರು ಕಿಕ್ಕಿರಿದು ತುಂಬಿದ ಚಲಿಸುವ ರೈಲನ್ನು ಹತ್ತಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ವ್ಯಕ್ತಿಯೊಬ್ಬ ಮೊದಲು ಮಹಿಳೆಗೆ ರೈಲು ಹತ್ತಲು ಸಹಾಯ ಮಾಡುತ್ತಾನೆ, ಮತ್ತು ಆಕೆಯನ್ನು ರೈಲಿನ ಒಳಗೆ ತಳ್ಳುತ್ತಾನೆ. ನಂತರ, ಭಾರವಾದ ಲ್ಯಾಗೇಜ್ ಬ್ಯಾಗ್ ಜೊತೆಗೆ ಆತ ರೈಲಿನ ಕೊನೆಯ ಮೆಟ್ಟಿಲಿನಲ್ಲಿ ನೇತಾಡುತ್ತಾ ಪ್ರಯಾಣಿಸುತ್ತಿರುವುದನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
We need more tracks and affordable trains on a priority basis, along with the Vande Bharat and Bullet trains. pic.twitter.com/KRINjbhdSl
— Indian Tech & Infra (@IndianTechGuide) May 20, 2024
@IndianTechGuide ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮೇ 20ರಂದು ವಿಡಿಯೋ ಹಂಚಿಕೊಳ್ಳಲಾಗಿದೆ. ಇಲ್ಲಿಯವರೆಗೆ ವಿಡಿಯೋ 2.5 ಮಿಲಿಯನ್ ಅಂದರೆ 20 ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ಸದ್ಯ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ‘ದಯವಿಟ್ಟು ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಿ’ ಎಂದು ಸಾಕಷ್ಟು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ