Viral Video: ನಾದಿನಿ ಜೊತೆ ಸೆಲ್ಫಿ ತೆಗೆದುಕೊಂಡಿದ್ದಕ್ಕೆ ಮಂಟಪದಲ್ಲಿಯೇ ವರನ ಕೆನ್ನೆಗೆ ಬಾರಿಸಿದ ವಧು; ವಿಡಿಯೋ ವೈರಲ್
ಈ ಸೋಷಿಯಲ್ ಮೀಡಿಯಾದಿಂದಾಗಿ ಇತ್ತೀಚಿನ ದಿನಗಳಲ್ಲಿ ಯಾವುದೇ ಘಟನೆ ಸಂಭವಿಸಿದರೂ ಅದು 2 ನಿಮಿಷದಲ್ಲಿ ವೈರಲ್ ಆಗುತ್ತವೆ. ಹೀಗೆ ವೈರಲ್ ಆಗುವ ಕೆಲವು ದೃಶ್ಯಗಳು ನಮ್ಮನ್ನು ಬೆಚ್ಚಿಬೀಳಿಸಿದರೆ, ಇನ್ನೂ ಕೆಲವು ವಿಡಿಯೋ ತುಣುಕುಗಳು ನಮ್ಮನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತವೆ. ಸದ್ಯ ಅದೇ ರೀತಿಯ ವಿಡಿಯೋ ಇದೀಗ ವೈರಲ್ ಆಗಿದ್ದು, ನಾದಿನಿಯ ಜೊತೆಗೆ ಸೆಲ್ಫಿ ತೆಗೆಸಿಕೊಂಡ ಎಂದು ಕೋಪಗೊಂಡ ವಧು ಮದುವೆ ಮಂಟಪದಲ್ಲಿಯೇ ವರನಿಗೆ ಕಪಾಳಮೋಕ್ಷ ಮಾಡಿದ್ದಾಳೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಮದುವೆ ಕಾರ್ಯಕ್ರಮಗಳಲ್ಲಿ ಸಂಬಂಧಿಕರು, ಸ್ನೇಹಿತರು ವಧುವರರ ಜೊತೆಗೆ ಸೆಲ್ಫಿ, ಪೋಟೋ ತೆಗೆಸಿಕೊಳ್ಳುತ್ತಾ ಸಂತಸದ ಕ್ಷಣವನ್ನು ಎಂಜಾಯ್ ಮಾಡ್ತಾರೆ. ಮದುವೆ ಮಂಟಪದಲ್ಲಿ ನಡೆಯುವ ಮೋಜು ಮಸ್ತಿ, ತರ್ಲೆ-ತಮಾಷೆಗಳ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತವೆ. ಇದೀಗ ಅಂತಹದ್ದೇ ವಿಡಿಯೋವೊಂದು ಹರಿದಾಡುತ್ತಿದ್ದು, ನಾದಿನಿ ಜೊತೆ ಸೆಲ್ಫಿ ತೆಗೆದುಕೊಂಡ ಎಂಬ ಕಾರಣಕ್ಕೆ ಕೋಪಗೊಂಡ ವಧು, ಲೋ ನಿನ್ಗೇನ್ ಬಂದಿರೋದು ನನ್ ತಂಗಿ ಜೊತೆಗೆನೇ ಹಲ್ಲು ಕಿರಿದು ಸೆಲ್ಫಿ ತೆಗೋತಿಯಾ ಮಾಡ್ತೀನಿ ಇರು ಎನ್ನುತ್ತಾ ಮದುವೆ ಮಂಟಪದಲ್ಲಿಯೇ ವರನ ಕೆನ್ನೆಗೆ ಬಾರಿಸಿದ್ದಾಳೆ. ಈ ವಿಡಿಯೋ ದೃಶ್ಯಾವಳಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಈ ವೈರಲ್ ವಿಡಿಯೋವನ್ನು ದೀಪಕ್ (@rd_love_status_01) ಎಂಬವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
View this post on Instagram
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ವಧು ವರನಿಗೆ ಕಪಾಳಮೋಕ್ಷ ಮಾಡುವಂತಹ ದೃಶ್ಯವನ್ನು ಕಾಣಬಹುದು. ಮದುವೆ ಕಾರ್ಯಕ್ರಮವೊಂದರಲ್ಲಿ ಫೋಟೋ ಸೇಶನ್ ವೇಳೆ ಮದುಮಕ್ಕಳ ಪಕ್ಕದಲ್ಲಿ ಕುಳಿತ ವಧುನಿನ ತಂಗಿ ತನ್ನ ಭಾವನೊಂದಿಗೆ ಸೆಲ್ಫಿ ತೆಗೆಸಿಕೊಳ್ಳುತ್ತಾಳೆ. ವರ ಕೂಡಾ ನಗುತ್ತಾ ಸೆಲ್ಫಿಗೆ ಪೋಸ್ ನೀಡುತ್ತಾನೆ. ಇದರಿಂದ ಕೋಪಗೊಂಡ ವಧು, ಲೋ ನಿನ್ಗೇನ್ ಬಂದಿರೋದು, ನನ್ ತಂಗಿ ಜೊತೆಗೆನೇ ಹಲ್ಲು ಕಿರಿದು ಸೆಲ್ಫಿ ತೆಗೋತಿಯಾ.. ಮಾಡ್ತೀನಿ ಇರು ಎನ್ನುತ್ತಾ ಮದುವೆ ಮಂಟಪದಲ್ಲಿಯೇ ವರನ ಕೆನ್ನೆಗೆ ಬಾರಿಸಿದ್ದಾಳೆ.
ಇದನ್ನೂ ಓದಿ: ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾಗಿದ್ದ ವ್ಯಕ್ತಿಯೊಂದಿಗೆ ಪರಾರಿಯಾಗಿದ್ದ ಯುವತಿಯ ಶವ ಪತ್ತೆ
ಮೂರು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 6.4 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಈ ದೃಶ್ಯವಂತೂ ತುಂಬಾನೇ ಫನ್ನಿಯಾಗಿದೆ ಎನ್ನುತ್ತಾ ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ