Viral Video: ಅಬ್ಬಬ್ಬಾ… ಜಗತ್ತಿನ ಅತೀ ಉದ್ದವಾದ ಬೈಕ್ ನೋಡಿದ್ದೀರಾ?
ಸಾಮಾಜಿಕ ಜಾಲತಾಣದಲ್ಲಿ ಒಂದಲ್ಲ ಒಂದು ಬಗೆಯ ಜುಗಾಡ್ ಐಡಿಯಾಗಳ ವಿಡಿಯೋಗಳು ಹರಿದಾಡುತ್ತಿರುತ್ತವೆ. ಸದ್ಯ ಅಂತಹದ್ದೇ ವಿಡಿಯೋವೊಂದು ಇದೀಗ ಹರಿದಾಡುತ್ತಿದ್ದು, ಯುವಕನೊಬ್ಬ 7 ರಿಂದ 8 ಜನರು ಕೂರುವಂತಹ ಜಗತ್ತಿನ ಅತೀ ಉದ್ದದ ಬೈಕ್ ಒಂದನ್ನು ತಯಾರಿಸಿದ್ದಾನೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ನೀವು ಐಷಾರಾಮಿ ಬೈಕ್‌ಗಳಿಂದ ಹಿಡಿದು ಎಲ್ಲಾ ರೀತಿಯ ಬೈಕ್‌ಗಳನ್ನು ನೋಡಿರಬಹುದು. ಈ ಬೈಕ್‌ಗಳಲ್ಲಿ ಕೇವಲ ಇಬ್ಬರು ಪ್ರಯಾಣಿಕರು ಮಾತ್ರ ಪ್ರಯಾಣಿಸಲು ಸಾಧ್ಯ. ಹೆಚ್ಚೆಂದರೆ ಮೂವರು ಕುಳಿತು ಪ್ರಯಾಣಿಸಬಹುದು. ಆದ್ರೆ ಇಲ್ಲೊಬ್ಬ ಯುವಕ ಬರೋಬ್ಬರಿ ಏಳರಿಂದ ಎಂಟು ಮಂದಿ ಕುಳಿತು ಪ್ರಯಾಣಿಸಬಹುದಾದ ಜಗತ್ತಿನ ಅತೀ ಉದ್ದದ ಬೈಕ್ ಒಂದನ್ನು ತಯಾರಿಸಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಅತೀ ಉದ್ದದ ಬೈಕ್ ಕಂಡು ನೋಡುಗರು ದಂಗಾಗಿದ್ದಾರೆ.
ಈ ಕುರಿತ ವಿಡಿಯೋವನ್ನು @worldridertrend ಎಂಬ ಹೆಸರಿನ ಇನ್‌ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಹಂಚಿಕೊಳ್ಳಲಾಗಿದ್ದು, “ಈ ಮೋಟಾರ್ ಸೈಕಲ್‌ನಲ್ಲಿ ಗರಿಷ್ಠ ಎಷ್ಟು ಮಂದಿ ಪ್ರಯಾಣ ಮಾಡಬಹುದು, ಕಾಮೆಂಟ್ ಮಾಡಿ” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ. ವೈರಲ್ ವಿಡಿಯೋದಲ್ಲಿ ಬರೋಬ್ಬರಿ 7 ರಿಂದ 8 ಮಂದಿ ಕುಳಿತು ಪ್ರಯಾಣಿಸಬಹುದಾದ ಜಗತ್ತಿನ ಅತೀ ಉದ್ದದ ಬೈಕ್ ಅನ್ನು ಕಾಣಬಹುದು. ಯುವಕನೊಬ್ಬ ಅತೀ ಉದ್ದದ ಬೈಕ್ ಒಂದನ್ನು ತಯಾರಿಸಿ, ಅದರಲ್ಲಿ ಆತನ ಆರು ಮಂದಿ ಸ್ನೇಹಿತರನ್ನು ಕೂರಿಸಿ ಜಾಲಿ ರೈಡ್ ಹೋಗಿದ್ದಾನೆ.
View this post on Instagram
ಇದನ್ನೂ ಓದಿ: ಪತ್ನಿಯನ್ನು ಕೊಂದು, ಮೃತದೇಹದೊಂದಿಗೆ ಸೆಲ್ಫಿ ತೆಗೆದು ಸಂಬಂಧಿಕರಿಗೆ ಕಳುಹಿಸಿ, ಆತ್ಮಹತ್ಯೆ ಮಾಡಿಕೊಂಡ ಪತಿ
5 ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 3.6 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಅಬ್ಬಬ್ಬಾ…. ಇದ್ಯಾವ ತರಹದ ಬೈಕ್ ಗುರು ಎಂದು ಅತೀ ಉದ್ದದ ಬೈಕ್ ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:15 pm, Sun, 19 May 24