ಗೆಳತಿಯನ್ನ ತೊಡೆ ಮೇಲೆ ಕೂಡಿಸಿಕೊಂಡು ಹೆಲ್ಮೆಟ್ ಹಾಕದೆ ಬೈಕ್ ಓಡಿಸಿದ ಗೆಳೆಯ: ವಿಡಿಯೋ ವೈರಲ್
ಇಲ್ಲೊಬ್ಬ ಭೂಪ ಕೈಯಲ್ಲಿ ಒಳ್ಳೆ ಬೈಕ್, ಜೊತೆಯಲ್ಲಿ ಹುಡುಗಿ ಇದ್ದಾಳೆ ಅಂತ ಹುಚ್ಚನ ರೀತಿ ಬೈಕ್ ಚಲಾಯಿಸಿದ್ದಾನೆ. ಏರ್ಪೋರ್ಟ್ ರಸ್ತೆಯ ಯಲಹಂಕ ಫ್ಲೈ ಓವರ್ ಮೇಲೆ ಓರ್ವ ಯುವಕ ಯುವತಿಯನ್ನು ತೊಡೆಯ ಮೇಲೆ ಕೂರಿಸಿಕೊಂಡು ಬೈಕ್ ಚಲಾಯಿಸಿದ್ದಾನೆ.
ಬೆಂಗಳೂರು, ಮೇ 19: ನಗರದಲ್ಲಿ ಇತ್ತೀಚಿಗೆ ಬೈಕ್ ವೀಲಿಂಗ್ ಮಾಡುವುದು ಮತ್ತು ಅಡ್ಡಾದಿಡ್ಡಿ ಬೈಕ್ ಚಲಾಯಿಸುವವರು ಅಧಿಕವಾಗಿದ್ದಾರೆ. ಇಂತಹವರ ವಿರುದ್ಧ ಬೆಂಗಳೂರು ಸಂಚಾರಿ ಪೊಲೀಸರು (Bengaluru Traffic Police) ಕ್ರಮ ಕೈಗೊಂಡ್ಡಿದ್ದಾರೆ, ಮತ್ತು ಕೈಗೊಳ್ಳುತ್ತಿದ್ದಾರೆ. ಆದರೂ ಕೂಡ ಇವರ ಸಂಖ್ಯೆ ಕಡಿಮೆಯಾಗಿಲ್ಲ. ಇಲ್ಲೊಬ್ಬ ಭೂಪ ಕೈಯಲ್ಲಿ ಒಳ್ಳೆ ಬೈಕ್, ಜೊತೆಯಲ್ಲಿ ಹುಡುಗಿ ಇದ್ದಾಳೆ ಅಂತ ಹುಚ್ಚನ ರೀತಿ ಬೈಕ್ ಚಲಾಯಿಸಿದ್ದಾನೆ. ಏರ್ಪೋರ್ಟ್ ರಸ್ತೆಯ ಯಲಹಂಕ ಫ್ಲೈ ಓವರ್ (Yelahanka Flyover) ಮೇಲೆ ಓರ್ವ ಯುವಕ ಯುವತಿಯನ್ನು ತೊಡೆಯ ಮೇಲೆ ಕೂರಿಸಿಕೊಂಡು ಬೈಕ್ ಚಲಾಯಿಸಿದ್ದಾನೆ. ಮೇ 17ರ ರಾತ್ರಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಹೆಲ್ಮೆಟ್ ಧರಿಸದೆ, ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿ ಅಜಾಗರೂಕತೆಯಿಂದ ಬೈಕ್ ಚಾಲನೆ ಮಾಡಿದ್ದಾನೆ. ಈತ ಬೈಕ್ ಚಾಲನೆ ಮಾಡುತ್ತಿರುವುದನ್ನು, ಇವರ ಹಿಂದೆ ಹೋಗುತ್ತಿದ್ದ ವಾಹನ ಸವಾರರು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಸದ್ಯ ಈ ವಿಡಿಯೋ ಭಾರಿ ವೈರಲ್ ಆಗಿದೆ. ಯಲಹಂಕ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಬೆಂಗಳೂರು ಸಂಚಾರಿ ಪೊಲೀಸರ ಕಾರ್ಯಾಚರಣೆ; ಅಪಾಯಕಾರಿ ವೀಲಿಂಗ್ ಮಾಡ್ತಿದ್ದ 20 ಆರೋಪಿಗಳ ಬಂಧನ
ಬೈಕ್ ವೀಲಿಂಗ್ ಮಾಡುತ್ತಿದ್ದ ಪುಂಡರ ಬಂಧನ
ಕೋಲಾರ: ಬೈಕ್ ವೀಲಿಂಗ್ ಮಾಡುತ್ತಿದ್ದ ಇಬ್ಬರು ಪುಂಡರನ್ನು ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕೋಲಾರ ತಾಲೂಕು ಬಸವನತ್ತ ಗ್ರಾಮದ ಗಣೇಶ್ ಹಾಗೂ ಅಕ್ಷಯ್ ಬಂಧಿತರು.ಈ ಇಬ್ಬರು ಯುವಕರು ಕೋಲಾರದ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ವೀಲಿಂಗ್ ಮಾಡುತ್ತಿದ್ದರು.
ಇವರು ವೀಲಿಂಗ್ ಮಾಡುತ್ತಿರುವುದನ್ನು ಅಕ್ಕ-ಪಕ್ಕದ ವಾಹನ ಸವಾರರು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದು, ಪೊಲೀಸರಿಗೆ ಟ್ಯಾಗ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದ್ದ ವಿಡಿಯೋ ಆಧರಿಸಿ ಪೊಲೀಸರು ಯುವಕರನ್ನು ಬಂಧಿಸಿದ್ದಾರೆ. ಬಂಧಿತರಿಂದ ಪೊಲೀಸರು ಬೈಕ್ ವಶಕ್ಕೆ ಪಡೆದುಕೊಂಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ