AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಸಂಚಾರಿ ಪೊಲೀಸರ ಕಾರ್ಯಾಚರಣೆ; ಅಪಾಯಕಾರಿ ವೀಲಿಂಗ್ ಮಾಡ್ತಿದ್ದ 20 ಆರೋಪಿಗಳ ಬಂಧನ

ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ವೀಲಿಂಗ್​ ಪುಂಡರ ಹಾವಳಿ ಹೆಚ್ಚಾಗಿದೆ. ಅದರಂತೆ ಪೊಲೀಸರು ಕೂಡ ಅಗತ್ಯ ಕ್ರಮಕೈಗೊಂಡಿದ್ದಾರೆ. ಆದರೂ ಕೂಡ ಇದಕ್ಕೆ ಬ್ರೇಕ್​ ಹಾಕಲಾಗುತ್ತಿಲ್ಲ. ಇದೀಗ ಬೆಂಗಳೂರು ಸಂಚಾರಿ ಪೊಲೀಸರು ಅಪಾಯಕಾರಿ ವೀಲಿಂಗ್ ಮಾಡುತ್ತಿದ್ದ 20 ಆರೋಪಿಗಳನ್ನು ಬಂಧಿಸಿದ್ದಾರೆ.

ಬೆಂಗಳೂರು ಸಂಚಾರಿ ಪೊಲೀಸರ ಕಾರ್ಯಾಚರಣೆ; ಅಪಾಯಕಾರಿ ವೀಲಿಂಗ್ ಮಾಡ್ತಿದ್ದ 20 ಆರೋಪಿಗಳ ಬಂಧನ
ಬೈಕ್​ ವೀಲಿಂಗ್​ ಮಾಡ್ತಿದ್ದ ಪುಂಡರನ್ನ ಬಂಧಿಸಿದ ಬೆಂಗಳೂರು ಸಂಚಾರಿ ಪೊಲೀಸರು
Shivaprasad B
| Updated By: ಕಿರಣ್ ಹನುಮಂತ್​ ಮಾದಾರ್|

Updated on:Mar 05, 2024 | 10:02 PM

Share

ಬೆಂಗಳೂರು, ಮಾ.05: ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ಬೈಕ್​ ವೀಲಿಂಗ್ (Bike wheeling)​ ಪುಂಡರ ಹಾವಳಿ ಮೀತಿಮಿರಿದ್ದು, ಈ ಕುರಿತು ವಾಹನ ಸವಾರರು ‘ನಮಗೆ ಇವರಿಂದ ತೊಂದರೆ ಆಗುತ್ತಿದೆ. ಈ ಕುರಿತು ಕ್ರಮಕೈಗೊಳ್ಳಿ ಎಂದು ಅನೇಕ ಬಾರಿ ಮನವಿ ಮಾಡಿದ್ದರು. ಆದರೆ, ಪೊಲೀಸರು ಎಷ್ಟೇ ಅಗತ್ಯ ಕ್ರಮಕೈಗೊಂಡರು ಇದಕ್ಕೆ ಬ್ರೇಕ್​ ಹಾಕಲಾಗಿಲ್ಲ. ಈ ಹಿನ್ನಲೆ ಇಂದು(ಮಾ.05) ಬೆಂಗಳೂರು​ ಸಂಚಾರಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಅಪಾಯಕಾರಿ ವೀಲಿಂಗ್ ಮಾಡುತ್ತಿದ್ದ 20 ಆರೋಪಿಗಳನ್ನು ಬಂಧಿಸಿದ್ದಾರೆ.

ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ 26 ಪ್ರಕರಣ

ಇನ್ನು ಪೀಣ್ಯ , ರಾಜಾಜಿನಗರ , ಯಶವಂತಪುರ, ಆರ್​ಟಿ ನಗರ ಸೇರಿ ಹಲವು ಠಾಣೆಯಲ್ಲಿ ಈ ಕುರಿತು 26 ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ವೀಲಿಂಗ್​ಗೆ ಬಳಸಿದ್ದ ಬೈಕ್​ಗಳು ಕೂಡ ಜಪ್ತಿ ಮಾಡಲಾಗಿದೆ. ಜೊತೆಗೆ 6 ಪ್ರಕರಣಗಳಲ್ಲಿ ಬೈಕ್ ಕೊಟ್ಟ ಪೋಷಕರ ಮೇಲೂ ಕೇಸ್ ದಾಖಲಿಸಲಾಗಿದ್ದು, 5 ಕೇಸ್​ನಲ್ಲಿ ಡಿಎಲ್ ಕ್ಯಾನ್ಸಲ್​​ಗೆ ಪೊಲೀಸರು, ಆರ್​ಟಿಓ ಗೆ ಪತ್ರ ಬರೆದಿದ್ದಾರೆ. ಜೊತೆಗೆ ಸೊಷಿಯಲ್ ಮೀಡಿಯಾದಲ್ಲಿ ಬೈಕ್ ವೀಲಿಂಗ್ ಮಾಡಿ ವಿಡಿಯೋ ಅಪ್ಲೋಡ್ ಮಾಡುತ್ತಿದ್ದ ಬೈಕ್ ಸವಾರರ ಮೇಲೂ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ:ಬೈಕ್​ನ ಹಿಂಬದಿಯಲ್ಲಿ ಯುವಕ-ಯುವತಿಯರನ್ನ ಕೂರಿಸಿಕೊಂಡು ವೀಲಿಂಗ್; ಪುಂಡರ ಡೆಡ್ಲಿ ವೀಲಿಂಗ್ ದೃಶ್ಯ ಮೊಬೈಲ್​ನಲ್ಲಿ ಸೆರೆ

ಅಪರಿಚಿತ ವಾಹನ ಡಿಕ್ಕಿ; ಬೈಕ್ ಸವಾರ ಸಾವು

ಬೆಂಗಳೂರು: ಅಪರಿಚಿತ ಗೂಡ್ಸ್ ಗಾಡಿ ಡಿಕ್ಕಿಯಾಗಿ ಬೈಕ್​ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಂಗಳೂರು ವಿಶ್ವವಿದ್ಯಾಲಯದ ರಸ್ತೆಯಲ್ಲಿ ನಡೆದಿದೆ. ಗೋಪಿನಾಥ್ ಸಾವಂತ್ (54) ಮೃತ ರ್ದುದೈವಿ. ಇಂದು ಸಂಜೆ 5 ಗಂಟೆಯ ಸುಮಾರಿಗೆ  ಗೋಪಿನಾಥ್ ಸಾವಂತ್ ಬೈಕ್​ನಲ್ಲಿ ತೆರಳುತ್ತಿದ್ದರು. ಆಗ ಹಿಂಬದಿಯಿಂದ ಬಂದಂತಹ ಗೂಡ್ಸ್ ವಾಹನ ಡಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ ರಕ್ತಸ್ತ್ರಾವವಾಗಿದ್ದು, ಕೂಡಲೇ ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೂ ಸಹ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಇನ್ನು ಗೂಡ್ಸ್ ಗಾಡಿ ಚಾಲಕ ಅಲ್ಲಿಂದ ಪರಾರಿಯಾಗಿದ್ದು, ಜ್ಞಾನಭಾರತಿ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:35 pm, Tue, 5 March 24