AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೈಕ್​ನ ಹಿಂಬದಿಯಲ್ಲಿ ಯುವಕ-ಯುವತಿಯರನ್ನ ಕೂರಿಸಿಕೊಂಡು ವೀಲಿಂಗ್; ಪುಂಡರ ಡೆಡ್ಲಿ ವೀಲಿಂಗ್ ದೃಶ್ಯ ಮೊಬೈಲ್​ನಲ್ಲಿ ಸೆರೆ

ಹೊಸಕೋಟೆಯಿಂದ ದೇವನಹಳ್ಳಿ ಮೂಲಕ ದೊಡ್ಡಬಳ್ಳಾಪುರ ವರೆಗೂ ನೂತನ ರಾಷ್ಟ್ರಿಯಾ ಹೆದ್ದಾರಿ 648 ಸುಸಜ್ಜಿತವಾಗಿ ನಿರ್ಮಾಣವಾಗಿದೆ. ಈ ಹಿನ್ನಲೆ ಬೈಕ್​​ನ ಹಿಂಬದಿಯಲ್ಲಿ ಒಬ್ಬರನ್ನ ಕೂರಿಸಿಕೊಂಡು ಹೆದ್ದಾರಿಯಲ್ಲಿ ಮುಂದಿನ ವೀಲ್ ಮೇಲಕ್ಕೆತ್ತಿ ಕೆಲವುರ ವೀಲಿಂಗ್ ಮಾಡುತ್ತಿದ್ದರೆ, ಜೊತೆಗಾರರು ವೀಡಿಯೋ ಮಾಡುತ್ತಾ ಹುಚ್ಚಾಟ ಮಾಡ್ತಿದ್ದಾರೆ.

ನವೀನ್ ಕುಮಾರ್ ಟಿ
| Edited By: |

Updated on:Dec 10, 2023 | 7:33 PM

Share

ಬೆಂಗಳೂರು ಗ್ರಾಮಾಂತರ, ಡಿ.10: ಅದು ಸಿಲಿಕಾನ್ ಸಿಟಿ ಹೊರ ವಲಯದಲ್ಲಿ ಜಸ್ಟ್ ಎರಡು ತಿಂಗಳಿಂದಷ್ಟೆ ಉದ್ಘಾಟನೆಯಾಗಿದ್ದ ನೂತನ ಚತುಷ್ಪಥ ರಸ್ತೆಯ ರಾಷ್ಟ್ರಿಯ ಹೆದ್ದಾರಿ(National Highway) 648 ಹೊಸ ಹೈವೇ ಜೊತೆಗೆ ಹೈಟೆಕ್ ಕ್ಯಾಮರಾಗಳನ್ನು ಸಹ ಅಳವಡಿಸಿದ್ದಾರೆ. ಆದ್ರೆ, ಕ್ಯಾಮರಾಗಳಿದ್ದಾವೆ ಎನ್ನುವ ಭಯವು ಇಲ್ಲದೆ, ವೀಕೆಂಡ್ ಬಂದರೆ ಸಾಕು ವೀಲಿಂಗ್(Bike wheeling)ಪುಂಡರ ಹಾವಳಿ ಹೆಚ್ಚಾಗುತ್ತಿದ್ದು, ಡೆಡ್ಲಿ ವೀಲಿಂಗ್ ದೃಶ್ಯ ಸ್ಥಳೀಯರ ಮೊಬೈಲ್​ನಲ್ಲಿ ಸೆರೆಯಾಗಿದೆ.

ಕಣ್ಣು ಹಾಯಿಸಿದಷ್ಟು ದೂರ ಹೆದ್ದಾರಿ ಸ್ವಚ್ಚಂಧವಾಗಿ ಕಾಣುತ್ತಿದೆ. ನೂತನ ಹೈವೇ ಎಂದು ವಾಹನ ಸವಾರರು ಸಹ ಅತಿ ವೇಗದಲ್ಲಿ ಬರ್ತಿದ್ರೆ, ಇಲ್ಲೊಂದು ಗ್ಯಾಂಗ್ ಮಾತ್ರ ಜೀವ ಭಯ ಎನ್ನುವುದು ಇಲ್ಲದೆ ಅಕ್ಷರಶಃ ಅಟ್ಟಹಾಸ ಮೆರೆಯುತ್ತಿದ್ದಾರೆ. ಒಂದೆಡೆ ವಾಹನ ಸವಾರರ ವೇಗವಾಗಿ ಬರುತ್ತಿದ್ದರೆ, ಅವರ ನಡುವೆಯೇ ಹಿಂಬದಿಯಲ್ಲಿ ಯುವಕ-ಯುವತಿಯರನ್ನ ಕೂರಿಸಿಕೊಂಡ ಪುಂಡರು ನಡು ರಸ್ತೆಯಲ್ಲಿ ವೀಲಿಂಗ್ ಮಾಡುತ್ತಾ ಹುಚ್ಚಾಟವಾಡುತ್ತಿದ್ದಾರೆ.

ಇದನ್ನೂ ಓದಿ:Mysore News: ವೀಲಿಂಗ್ ಶೋಕಿಗಾಗಿ ಬೈಕ್​ ಕಳ್ಳತನ; ಇಬ್ಬರ ಬಂಧನ

ಹೊಸಕೋಟೆ ದೊಡ್ಡಬಳ್ಳಾಪುರ ನಡುವೆ ಹೆಚ್ಚಾಯ್ತು ಹುಚ್ಚಾಟ

ಜಿಲ್ಲೆಯ ಹೊಸಕೋಟೆಯಿಂದ ದೇವನಹಳ್ಳಿ ಮೂಲಕ ದೊಡ್ಡಬಳ್ಳಾಪುರ ವರೆಗೂ ನೂತನ ರಾಷ್ಟ್ರಿಯಾ ಹೆದ್ದಾರಿ 648 ಸುಸಜ್ಜಿತವಾಗಿ ನಿರ್ಮಾಣವಾಗಿದೆ. ಚತುಷ್ಪಥ ರಸ್ತೆಯಾಗಿ ಹೆದ್ದಾರಿ ನಿರ್ಮಾಣವಾಗಿರುವ ಕಾರಣ, ಚಿಕ್ಕಬಳ್ಳಾಫುರದ ನಂದಿಬೆಟ್ಟ ಈಶಾ ಪೌಂಡೇಶನ್ ಮತ್ತು ಘಾಟಿ ಸುಬ್ರಮಣ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಬರುತ್ತಾರೆ. ಆದ್ರೆ, ಈ ನಡುವೆ ಇದೇ ಹೆಸರಿನಲ್ಲಿ ಲಾಂಗ್ ಡ್ರೈವ್ ಬರ್ತಿರುವ ಕೆಲ ಯುವಕ ಯುವತಿಯರು ಹೆದ್ದಾರಿಯಲ್ಲಿ ಡೆಡ್ಲಿ ವೀಲಿಂಗ್ ಮಾಡುತ್ತಾ ಅಟ್ಟಹಾಸ ಮೆರೆಯುತ್ತಿದ್ದಾರೆ.

ಹಿಂಬದಿಯಲ್ಲಿ ಯುವಕ-ಯುವತಿಯನ್ನ ಕೂರಿಸಿಕೊಂಡು ವೀಲಿಂಗ್​

ಬೈಕ್​​ನ ಹಿಂಬದಿಯಲ್ಲಿ ಒಬ್ಬರನ್ನ ಕೂರಿಸಿಕೊಂಡು ಹೆದ್ದಾರಿಯಲ್ಲಿ ಮುಂದಿನ ವೀಲ್ ಮೇಲಕ್ಕೆತ್ತಿ ಕೆಲವುರ ವೀಲಿಂಗ್ ಮಾಡುತ್ತಿದ್ದರೆ, ಜೊತೆಗಾರರು ವೀಡಿಯೋ ಮಾಡುತ್ತಾ ಹುಚ್ಚಾಟ ಮಾಡ್ತಿದ್ದಾರೆ. ಇನ್ನು ಯುವಕ ಯುವತಿಯರು ಈ ರೀತಿ ಹುಚ್ಚಾಟ ಮಾಡುತ್ತಾ ಹೋಗ್ತಿದ್ರೆ ಹಿಂಬದಿ ಬರುವ ವಾಹನ ಸವಾರರು ಜೀವ ಕೈಲಿಡಿದು ಸಂಚರಿಸುವ ಸ್ಥಿತಿ ಎದುರಾಗಿದೆ.

ಇದನ್ನೂ ಓದಿ:ತುಮಕೂರು ರಿಂಗ್ ರಸ್ತೆಯಲ್ಲಿ ವೀಲಿಂಗ್ ಪುಂಡರ ಹಾವಳಿ; ವಾಹನ ಸವಾರರಿಂದ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ

ಇನ್ನು ಈ ವೀಲಿಂಗ್ ಪುಂಡರು, ಹಿಂಬದಿ ನಂಬರ್ ಪ್ಲೇಟ್​ಗಳನ್ನ ಸಹ ಹಾಕಿಕೊಳ್ಳದೆ ಬಂದು ರಾಜಾ ರೋಷವಾಗಿ ವೀಲಿಂಗ್​ ಮಾಡುತ್ತಿದ್ದಾರೆ. ವೀಲಿಂಗ್ ಮಾಡಿ ಅವರು ಬೀಳೋದು ಅಲ್ಲದೆ, ಇತರೆ ವಾಹನ ಸವಾರರ ಜೀವಕ್ಕೂ ಸಂಚಾಕಾರವನ್ನ ಪುಂಡರು ತರ್ತಿದ್ದು, ಹೆದ್ದಾರಿಯಲ್ಲಿ ಹೈವೇ ಗಸ್ತು ಪೊಲೀಸರಿದ್ರು, ಯಾವುದೇ ಪ್ರಯೋಜನವಾಗುತ್ತಿಲ್ಲ. ಇನ್ನು ಹೆದ್ದಾರಿಯಲ್ಲಿ ಹೈಟೆಕ್ ಕ್ಯಾಮರಾಗಳನ್ನ ಸಹ ಈಗಾಗಲೇ ಅಳವಡಿಕೆ ಮಾಡಿದ್ದು, ವೀಕೆಂಡ್​ನಲ್ಲಿ ವೀಲಿಂಗ್ ಪುಂಡರ ವಿರುದ್ದ ಸ್ಪೇಷಲ್ ಡ್ರೈವ್ ಮಾಡಿ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಒಟ್ಟಾರೆ ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ ಎಂಬಂತೆ ಪುಂಡರು ಹೆದ್ದಾರಿಯಲ್ಲಿ ವೀಲಿಂಗ್ ಮಾಡಿ ಅಟ್ಟಹಾಸ ಮೆರೆಯುತ್ತಿದ್ರೆ, ವಾಹನ ಸವಾರರು ಜೀವ ಕೈಲಿಡಿದು ಸಂಚರಿಸುತ್ತಿದ್ದಾರೆ. ಇನ್ನಾದರೂ ಪೊಲೀಸರು ವೀಲಿಂಗ್ ಪುಂಡರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಮೂಲಕ ವೀಲಿಂಗ್ ಪುಂಡರಿಗೆ ತಕ್ಕ ಶಾಸ್ತ್ರಿ ಮಾಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:32 pm, Sun, 10 December 23

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್