ನನಗೆ ನೀನು ಬೇಕು ಅಷ್ಟೇ.. ಹೀಗಂತ ವಿವಾಹಿತ ಯುವತಿಗೆ ಪೀಣ್ಯದಲ್ಲಿ ಭಗ್ನ ಪ್ರೇಮಿಯಿಂದ ನಿರಂತರ ಕಾಟ

ಮೊಬೈಲ್​ ನಂಬರ್‌ ಪಡೆದು ಪದೇ ಪದೆ ಕರೆ ಮಾಡಿ ಮನು ಆ ಮಹಿಳೆಯನ್ನು ಮಾತನಾಡುತ್ತಿದ್ದ. ತನಗೆ ಮದುವೆ ಆಗಿದೆ ಅಂದ್ರೂ ಪತಿಯನ್ನ ಬಿಟ್ಟು ಬರಲು ಒತ್ತಾಯ ಮಾಡುತ್ತಿದ್ದನಂತೆ! ಒಪ್ಪದೆ ಇದ್ದಾಗ ಬೆಂಗಳೂರು ಉತ್ತರ ತಾಲೂಕಿನಲ್ಲಿ ಮಹಿಳೆ ಬರುತ್ತಿದ್ದ ಅಟೋ ಅಡ್ಡ ಗಟ್ಟಿ ಅಟೋದಲ್ಲಿ ಆತನೂ ಕುಳಿತು ಅಸಭ್ಯ ವರ್ತನೆ ತೋರಿದ್ದಾನೆ.

ನನಗೆ ನೀನು ಬೇಕು ಅಷ್ಟೇ.. ಹೀಗಂತ ವಿವಾಹಿತ ಯುವತಿಗೆ ಪೀಣ್ಯದಲ್ಲಿ ಭಗ್ನ ಪ್ರೇಮಿಯಿಂದ ನಿರಂತರ ಕಾಟ
ವಿವಾಹಿತ ಯುವತಿಗೆ ಭಗ್ನ ಪ್ರೇಮಿಯಿಂದ ನಿರಂತರ ಕಾಟ
Follow us
ಬಿ ಮೂರ್ತಿ, ನೆಲಮಂಗಲ
| Updated By: ಸಾಧು ಶ್ರೀನಾಥ್​

Updated on: Dec 11, 2023 | 11:17 AM

ನೆಲಮಂಗಲ, ಡಿಸೆಂಬರ್​ 11: ನೀನು ನನಗೆ ಬೇಕು, ನಿನ್ನ ಜೊತೆಯಲ್ಲಿ ನಾನು ಮಲಗಬೇಕು ಅಷ್ಟೇ.. ಹೀಗಂತ 25 ವರ್ಷದ ವಿವಾಹಿತ ಮಹಿಳೆಗೆ ಭಗ್ನ ಪ್ರೇಮಿಯೊಬ್ಬನಿಂದ ನಿರಂತರ ಕಾಟ ಎದುರಾಗಿದೆ (Torcher). ಈ ಸಂಬಂಧ ಪೀಣ್ಯ (Peenya) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಗಳೂರು ಉತ್ತರ ತಾಲೂಕಿನ ನೆಲಗದರನಹಳ್ಳಿಯಲ್ಲಿರುವ ಮಣಪ್ಪುರಂ ಫೈನಾನ್ಸ್ ನಲ್ಲಿ ಬಾಧಿತ ಮಹಿಳೆ (Woman) ಕೆಲಸ ಮಾಡುತ್ತಿದ್ದ ವೇಳೆ ಅರೋಪಿ ಮನು ಪರಿಚಯವಾಗಿತ್ತು. ಒಡವೆಗಳನ್ನು ಗಿರವಿ ಇಡಲು ಮತ್ತು ಬಿಡಿಸಿಕೊಳ್ಳಲು ಮನು ಬರುತ್ತಿದ್ದ. ಈ ವೇಳೆ ಸ್ವಲ್ಪಮಟ್ಟಿಗೆ ಸಲುಗೆಯಾಗಿದ್ದು, ಬಳಿಕ ಅವರಿಬ್ಬರದು ಸ್ನೇಹಕ್ಕೆ ತಿರುಗಿತ್ತು.

ಮುಂದೆ ಮಹಿಳೆಯ ಮೊಬೈಲ್​ ನಂಬರ್‌ ಪಡೆದು ಪದೇ ಪದೆ ಕರೆ ಮಾಡಿ ಮನು ಆ ಮಹಿಳೆಯನ್ನು ಮಾತನಾಡುತ್ತಿದ್ದ. ತನಗೆ ಮದುವೆ ಆಗಿದೆ ಅಂದ್ರೂ ಪತಿಯನ್ನ ಬಿಟ್ಟು ಬರಲು ಒತ್ತಾಯ ಮಾಡುತ್ತಿದ್ದನಂತೆ ಮನು! ಒಪ್ಪದೆ ಇದ್ದಾಗ ಮಹಿಳೆ ಬರುತ್ತಿದ್ದ ಅಟೋ ಅಡ್ಡ ಗಟ್ಟಿ ಅಟೋದಲ್ಲಿ ಆತನೂ ಕುಳಿತು ಅಸಭ್ಯ ವರ್ತನೆ ತೋರಿದ್ದಾನೆ.

ಮಹಿಳೆಯ ಜೊತೆ ಪೋಟೋ ತಗೆದು ಬ್ಲಾಕ್ ಮೇಲ್ ಮಾಡಿದ್ದಾನೆ ಮನು. ಈ ವೇಳೆ ಅಟೋ ಚಾಲಕನಿಗೂ ಧಮ್ಕಿ ಹಾಕಿದ್ದಾನೆ. ಅದಾದಮೇಲೆ ಮನು ಅಟೋ ಇಳಿದು ಹೊರಟು ಹೋಗಿದ್ದ. ನಡೆದ ವಿಷಯ ಪತಿಯೊಂದಿಗೆ ಹೇಳಿಕೊಂಡಿದ್ದಾರೆ ಆ ಮಹಿಳೆ.

Also Read: ಸೂಲಿಬೆಲೆ- ರಾಡ್ ನಿಂದ ಹೊಡೆದು ವೃದ್ದ ದಂಪತಿಯ ಹತ್ಯೆ, ಕೋಟಿ ಕೋಟಿ ಆಸ್ತಿ ವಿಚಾರಕ್ಕೆ ನಡೆಯಿತಾ ಕಗ್ಗೊಲೆ?

ತನ್ನ ಪತ್ನಿಯ ತಂಟೆಗೆ ಬಾರದಂತೆ ಮನುಗೆ ಪತಿ ವಾರ್ನ್ ಮಾಡಿದ್ದಾರೆ. ಈ ವೇಳೆ ಮಹಿಳೆಯ ಪತಿಗೂ ಜೀವಬೆದರಿಕೆ ಹಾಕಿದ್ದಾನೆ ಭೂಪ. ಮಹಿಳೆಯ ಜೊತೆಗಿನ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹಾಕುವ ಬೆದರಿಕೆಯೊಡ್ಡಿದ್ದಾನೆ. ಇದೀಗ ಭಗ್ನ ಪ್ರೇಮಿ ವಿರುದ್ಧ ಪೀಣ್ಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಮುಂದೇನೋ ಕಾದುನೋಡಬೇಕಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್