ಸೂಲಿಬೆಲೆ- ರಾಡ್ ನಿಂದ ಹೊಡೆದು ವೃದ್ದ ದಂಪತಿಯ ಹತ್ಯೆ, ಕೋಟಿ ಕೋಟಿ ಆಸ್ತಿ ವಿಚಾರಕ್ಕೆ ನಡೆಯಿತಾ ಕಗ್ಗೊಲೆ?

ಇಳಿ ವಯಸ್ಸಿನಲ್ಲು ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಂಡು ಜೀವನ ನಡೆಸುತ್ತಿದ್ದ ವೃದ್ದ ದಂಪತಿ ಭೀಕರವಾಗಿ ಕೊಲೆಯಾಗಿರುವುದು ದುರಂತ. ಇನ್ನು, ಕೊಲೆ ಮಾಡಿದ್ದು ಯಾರು ಯಾವ ಕಾರಣಕ್ಕೆ ಅನ್ನೂ ಬಗ್ಗೆ ಸೂಲಿಬೆಲೆ ಪೊಲೀಸರು ಪ್ರಕರಣ ದಾಕಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಸೂಲಿಬೆಲೆ- ರಾಡ್ ನಿಂದ ಹೊಡೆದು ವೃದ್ದ ದಂಪತಿಯ ಹತ್ಯೆ, ಕೋಟಿ ಕೋಟಿ ಆಸ್ತಿ ವಿಚಾರಕ್ಕೆ ನಡೆಯಿತಾ ಕಗ್ಗೊಲೆ?
ಸೂಲಿಬೆಲೆ- ರಾಡ್ ನಿಂದ ಹೊಡೆದು ಮನೆಯಲ್ಲಿ ವೃದ್ದ ದಂಪತಿಯ ಹತ್ಯೆ
Follow us
ನವೀನ್ ಕುಮಾರ್ ಟಿ
| Updated By: ಸಾಧು ಶ್ರೀನಾಥ್​

Updated on:Dec 11, 2023 | 10:52 AM

ಸಿಲಿಕಾನ್ ಸಿಟಿ ಪಕ್ಕದಲ್ಲಿರುವ ಗ್ರಾಮ (Hoskote Sulibele Police) ಅದು. ಆ ಗ್ರಾಮದ ಸುತ್ತಾಮುತ್ತಲಿನ ಜಮೀನು ಕೋಟಿ ಕೋಟಿ ಬೆಲೆ ಬಾಳ್ತಿದ್ದು ವೃದ್ದ ದಂಪತಿ ತಮಗೆ ಇರೋ ಜಮೀನಿನಲ್ಲಿ (property) ವ್ಯವಸಾಯ ಮಾಡಿಕೊಂಡಿದ್ರು. ಆದ್ರೆ ಚೆನ್ನಾಗಿದ್ದ ವೃದ್ದ ದಂಪತಿ ಮೊನ್ನೆ ಸಂಜೆ ಹೆಣವಾಗಿ ತಮ್ಮದೆ ಮನೆಯಲ್ಲಿ ಪತ್ತೆಯಾಗಿದ್ದು ಸಹೋದರ ಸಹೋದರಿಯರ ನಡುವೆಯೆ ಹೈಡ್ರಾಮ ನಡೆದು ಹೋಗಿದೆ. ಕಗ್ಗತ್ತಲ ರಾತ್ರಿಯಲ್ಲಿ ಮನೆ ಮುಂದೆ ಆಕ್ರಂದನ ಮುಗಿಲು ಮುಟ್ಟಿದೆ. ಹೆಣ್ಣು ಮಕ್ಕಳು ಹೆತ್ತ ತಂದೆ ತಾಯಿಯನ್ನ ನೆನೆದು ಕಣ್ಣೀರು ಹಾಕುತ್ತಾ, ಶಾಪ ಹಾಕ್ತಿದ್ರೆ ಇತ್ತ ಕುಟುಂಬಸ್ಥರು ಮನೆಗೆ ನುಗ್ಗಿ ಎಲ್ಲರ ಮೇಲೂ ಆಕ್ರೋಶ, ಸಿಟ್ಟನ್ನು ಉಗುಳುತ್ತಿದ್ದಾರೆ. ಅಂದಹಾಗೆ ಈ ರೀತಿ ಕಗ್ಗತ್ತಲ ರಾತ್ರಿಯಲ್ಲಿ ಇವರೆಲ್ಲ ಆಕ್ರಂದನದ ಜೊತೆಗೆ ಆಕ್ರೋಶ ಹೊರ ಹಾಕಲು ಕಾರಣ ಇದೇ ರಾಮಕೃಷ್ಣಪ್ಪ ಮತ್ತು ಮುನಿರಾಮಕ್ಕ ಎಂಬುವವರ ಭೀಕರ ಕೊಲೆ (couple murder).

ಹೌದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಸೂಲಿಬೆಲೆ ನಿವಾಸಿಗಳಾದ ರಾಮಕೃಷ್ಣಪ್ಪ ಮತ್ತು ಮುನಿರಾಮಕ್ಕ ಅನ್ನೂ ಈ ದಂಪತಿಗೆ ಒರ್ವ ಗಂಡು ಮಗು ನಾಲ್ಕು ಜನ ಹೆಣ್ಣು ಮಕ್ಕಳಿದ್ದು ಎಲ್ಲರಿಗೂ ಮದುವೆ ಮಾಡಿ ಇಳಿ ವಯಸ್ಸಿನಲ್ಲಿ ಇಬ್ಬರೂ ಪ್ರತ್ಯೇಕವಾಗಿ ವಾಸವಾಗಿದ್ರು. ಜೊತೆಗೆ ಕೈಲಾದ ಕೆಲಸ ಮಾಡಿಕೊಂಡಿದ್ದ ದಂಪತಿಗೆ ನಿತ್ಯ ಹೆಣ್ಣು ಮಕ್ಕಳು ಕರೆ ಮಾಡಿ ಮಾತನಾಡ್ತಿದ್ದು ಎಂದಿನಂತೆ ಶನಿವಾರ ರಾತ್ರಿಯೂ ಕರೆ ಮಾಡಿದ್ದಾರೆ. ಆದ್ರೆ ಎಷ್ಟೇ ಕರೆ ಮಾಡಿದ್ರು ಯಾರೊಬ್ಬರೂ ಕರೆ ಸ್ವೀಕರಿಸದಿದ್ದು ಅನುಮಾನಗೊಂಡ ಮಗಳು ಇಂದು ಸಂಜೆ ಸೂಲಿಬೆಲೆಯ ಮನೆ ಬಳಿಗೆ ಬಂದು ನೋಡಿದ್ದಾಳೆ. ಈ ವೇಳೆ ಮನೆ ಮುಂದೆ ವೃದ್ದರಿಬ್ಬರ ಚಪ್ಪಲಿ ಬಿದ್ದಿದ್ದು ಮನೆ ಬಾಗಿಲು ಮಾತ್ರ ಬೀಗ ಹಾಕಿರುವುದು ಕಂಡು ಬಂದಿದೆ. ಹೀಗಾಗಿ ಅನುಮಾನಗೊಂಡ ಮಗಳು ಮನೆ ಕಿಟಕಿ ತೆಗೆದು ನೋಡಿದಾಗ ಮನೆಯ ಒಳಗೆ ವೃದ್ದ ದಂಪತಿ ಬರ್ಬರವಾಗಿ ಕೊಲೆಯಾಗಿರುವ ಭೀಕರ ದೃಶ್ಯ ಕಂಡು ಬಂದಿದೆ.

ಮನೆಯಲ್ಲಿ ವೃದ್ದರು ಕೊಲೆಯಾಗಿರುವ ವಿಚಾರ ತಿಳಿಯುತ್ತಿದ್ದಂತೆ ಹೆಣ್ಣು ಮಕ್ಕಳು ಕುಟುಂಬಸ್ಥರು ಹಾಗೂ ಸೂಲಿಬೆಲೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಬಂದಿದ್ದಾರೆ. ಜೊತೆಗೆ ವೃದ್ದ ದಂಪತಿಗೆ ನರಸಿಂಹ ಅನ್ನೂ ಮಗ ಇದ್ದು ಮದುವೆಯಾದಗಲಿಂದಲೂ ಮಗ ಪ್ರತ್ಯೇಕವಾಗಿ ಪತ್ನಿ ಜೊತೆ ವಾಸವಾಗಿದ್ದು ತಂದೆ ತಾಯಿ ಮಗ ಹಾಗೂ ಸಹೋದರಿಯರ ನಡುವೆ ಒಂದಷ್ಟು ಕಲಹ ನಡೆಯುತ್ತಾ ಬಂದಿತ್ತು ಎನ್ನಲಾಗಿದೆ.

ಇದನ್ನೂ ಓದಿ: ಮಂಡ್ಯ – ಆಸ್ತಿ ಆಸೆಗೆ ಪತ್ನಿಯನ್ನೇ ಕೊಂದ ಶಿಕ್ಷಕ, ಸಹಜ ಸಾವೆಂದು ಬಿಂಬಿಸಲು ಹೋಗಿ ಜೈಲು ಸೇರಿದ

ಜೊತೆಗೆ ದಂಪತಿಗೆ ಸೇರಿದ 2 ಎಕರೆ ಜಮೀನಿನಲ್ಲಿ ಹೆಣ್ಣು ಮಕ್ಕಳಿಗೂ ಪಾಲು ಕೊಡ್ತಿವಿ ಅಂತಿದ್ದು ಇದೇ ವಿಚಾರಕ್ಕೆ ಸಹೋದರ ಕಡೆಯವರೆ ಕೊ0ಲೆ ನಡೆಸಿರಬಹುದು ಅಂತ ಸಹೋದರಿಯರು ಆರೋಪಿಸಿದ್ದಾರೆ. ಅಲ್ಲದೆ ಸಹೋದರ ವಿರುದ್ದ ಮನೆ ಮುಂದೆ ನುಗ್ಗಿ ಆಕ್ರೋಶ ಹೊರ ಹಾಕಿದ್ದು ಎಲ್ಲರೂ ಗರಂ ಆಗ್ತಿದ್ದಂತೆ ದಂಪತಿಯ ಮಗ ನರಸಿಂಹನನ್ನ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಒಟ್ಟಾರೆ ಇಳಿ ವಯಸ್ಸಿನಲ್ಲು ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಂಡು ಜೀವನ ನಡೆಸುತ್ತಿದ್ದ ವೃದ್ದ ದಂಪತಿ ಭೀಕರವಾಗಿ ಕೊಲೆಯಾಗಿರುವುದು ನಿಜಕ್ಕೂ ದುರಂತ. ಇನ್ನು, ಕೊಲೆ ಮಾಡಿದ್ದು ಯಾರು ಯಾವ ಕಾರಣಕ್ಕೆ ಅನ್ನೂ ಬಗ್ಗೆ ಸೂಲಿಬೆಲೆ ಪೊಲೀಸರು ಪ್ರಕರಣ ದಾಕಲಿಸಿಕೊಂಡು ತನಿಖೆ ನಡೆಸುತ್ತಿದ್ದು ತನಿಖೆ ನಂತರ ಸಹೋದರಿಯರ ಆರೋಪ ನಿಜವಾ, ಸುಳ್ಳಾ ಅನ್ನೂದು ಬೆಳಕಿಗೆ ಬರಲಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:50 am, Mon, 11 December 23

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್