AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆ ಬಳಿ ಮೇಯಲು ಬಂದ ಹಸುಗಳ ಮೇಲೆ ಆಸಿಡ್‌ ಎರಚಿ ವಿಕೃತಿ ಮೆರೆದ ವೃದ್ದೆ! 18 ಹಸುಗಳಿಗೆ ಸುಟ್ಟ ಗಾಯ

ಸುಟ್ಟ ಗಾಯಳಿಂದಾಗಿ ಹಸುಗಳು ಹಾಲು ಕೊಡುತ್ತಿಲ್ಲ, ನೋವಿನಿಂದಾಗಿ ನಮ್ಮ ಹಸುಗಳು ಮೂಕವಾಗಿ ರೋಧಿಸುತ್ತಿವೆ. ನ್ಯಾಯ ಕೊಡಿಸಿ ಅಂತಾ ಹಸುಗಳು ಮಾಲೀಕರು ಗೋಳಾಡಿದ್ದಾರೆ. ಹಸುಗಳ ಮಾಲಿಕರು ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

ಮನೆ ಬಳಿ ಮೇಯಲು ಬಂದ ಹಸುಗಳ ಮೇಲೆ ಆಸಿಡ್‌ ಎರಚಿ ವಿಕೃತಿ ಮೆರೆದ ವೃದ್ದೆ! 18 ಹಸುಗಳಿಗೆ ಸುಟ್ಟ ಗಾಯ
ಹಸುಗಳ ಮೇಲೆ ಆಸಿಡ್‌ ಎರಚಿ ವಿಕೃತಿ ಮೆರೆದ ವೃದ್ದೆ!
ಬಿ ಮೂರ್ತಿ, ನೆಲಮಂಗಲ
| Edited By: |

Updated on: Dec 11, 2023 | 3:08 PM

Share

ನೆಲಮಂಗಲ, ಡಿಸೆಂಬರ್​​11: ಮನೆಯ ಬಳಿ ಮೇಯಲು ಬಂದ ಹಸುಗಳ (cow) ಮೇಲೆ ವೃದ್ಧೆಯೊಬ್ಬರು (old woman) ಆಸಿಡ್‌ ಎರಚಿ ವಿಕೃತಿ ಮೆರೆದಿದ್ದಾನೆ. ಬೆಂಗಳೂರು ಉತ್ತರ ತಾಲೂಕಿನ (Bangalore north taluk) ಗುಣಿ ಅಗ್ರಹಾರ ಗ್ರಾಮದಲ್ಲಿ ಈ ದುರ್ದೈವದ ಘಟನೆ ನಡೆದಿದ್ದು, ವೃದ್ಧೆ ಆಸಿಡ್‌ ಎರಚಿದ್ದರಿಂದ 18 ಹಸುಗಳಿಗೆ ಸುಟ್ಟ ಗಾಯಗಳಾಗಿವೆ (injury).

76 ವರ್ಷದ ವೃದ್ದೆ ಜೋಸೆಫ್ ಗ್ರೇಸ್ ಆಸಿಡ್ ಎರಚಿದವರು. ರಾಜಣ್ಣ ಅವರಿಗೆ ಸೇರಿದ 2 ಹಸು, ನಾಗಣ್ಣ 4, ಪ್ರಕಾಶ್ 3, ಗಂಗಮ್ಮ 2, ಕೃಷ್ಣ 3, ಶ್ರೀರಾಮ3, ಮದನ್ 1 ಎಂಬವರಿಗೆ ಸೇರಿದ ಹಸುಗಳಿಗೆ ಗಾಯಗಳಾಗಿವೆ. ಕಳೆದ ಮೂರು ದಿನಗಳಿಂದ ಮನೆ ಬಳಿ ಬರುವ ಹಸುಗಳ ಮೇಲೆ ನಿರಂತರವಾಗಿ ಆ ವೃದ್ಧೆ ದಾಳಿ ನಡೆಸಿದ್ದಾರೆ. ಬಾತ್ ರೂಂ ಗೆ ಬಳಸುವ ಆಸಿಡ್ ಎರಚಿದ್ದೇನೆ, ಇದು ನಮ್ಮ ಖಾಸಗಿ ಜಾಗ. ಇಲ್ಲಿ ಹಸುಗಳನ್ನ ಬಿಡುವುದು ಹಸುವಿನ ಮಾಲಿಕರ ತಪ್ಪು. ಹಸುಗಳು ಮನೆ ಬಳಿ ಬರಬಾರದು ಅಂತ ಮಾಡಿದ್ದು ಅಷ್ಟೇ. ಬೇರೆ ಉದ್ದೇಶ ನನಗಿಲ್ಲ ಎಂದು ವೃದ್ದೆ ಸಮಜಾಯಿಷಿ ನೀಡಿದ್ದಾರೆ.

ಇದನ್ನೂ ಓದಿ: ಪಶ್ಚಿಮ ಗೋದಾವರಿಯಲ್ಲಿ ಹಸುವಿಗೆ ಸೀಮಂತ, ಕರುವಿಗೆ ತೊಟ್ಟಿಲು ಶಾಸ್ತ್ರ ಅದ್ದೂರಿಯಾಗಿ ನಡೆಯಿತು!

ಆದರೆ ಈಗ ಸುಟ್ಟ ಗಾಯಳಿಂದ ಹಾಲು ಕೊಡುತ್ತಿಲ್ಲ, ನೋವಿನಿಂದಾಗಿ ನಮ್ಮ ಹಸುಗಳು ಮೂಕವಾಗಿ ರೋಧಿಸುತ್ತಿವೆ. ನ್ಯಾಯ ಕೊಡಿಸಿ ಅಂತಾ ಹಸುಗಳು ಮಾಲೀಕರು ಗೋಳಾಡಿದ್ದಾರೆ. ಹಸುಗಳ ಮಾಲಿಕರು ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

ನನಗೆ ನೀನು ಬೇಕು ಅಷ್ಟೇ.. ವಿವಾಹಿತ ಯುವತಿಗೆ ಭಗ್ನ ಪ್ರೇಮಿಯಿಂದ ನಿರಂತರ ಕಾಟ

ನೆಲಮಂಗಲ, ಡಿಸೆಂಬರ್​ 11: ನೀನು ನನಗೆ ಬೇಕು, ನಿನ್ನ ಜೊತೆಯಲ್ಲಿ ನಾನು ಮಲಗಬೇಕು ಅಷ್ಟೇ.. ಹೀಗಂತ 25 ವರ್ಷದ ವಿವಾಹಿತ ಮಹಿಳೆಗೆ ಭಗ್ನ ಪ್ರೇಮಿಯೊಬ್ಬನಿಂದ ನಿರಂತರ ಕಾಟ ಎದುರಾಗಿದೆ (Torcher). ಈ ಸಂಬಂಧ ಪೀಣ್ಯ (Peenya) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಗಳೂರು ಉತ್ತರ ತಾಲೂಕಿನ ನೆಲಗದರನಹಳ್ಳಿಯಲ್ಲಿರುವ ಮಣಪ್ಪುರಂ ಫೈನಾನ್ಸ್ ನಲ್ಲಿ ಬಾಧಿತ ಮಹಿಳೆ (Woman) ಕೆಲಸ ಮಾಡುತ್ತಿದ್ದ ವೇಳೆ ಅರೋಪಿ ಮನು ಪರಿಚಯವಾಗಿತ್ತು. ಒಡವೆಗಳನ್ನು ಗಿರವಿ ಇಡಲು ಮತ್ತು ಬಿಡಿಸಿಕೊಳ್ಳಲು ಮನು ಬರುತ್ತಿದ್ದ. ಈ ವೇಳೆ ಸ್ವಲ್ಪಮಟ್ಟಿಗೆ ಸಲುಗೆಯಾಗಿದ್ದು, ಬಳಿಕ ಅವರಿಬ್ಬರದು ಸ್ನೇಹಕ್ಕೆ ತಿರುಗಿತ್ತು.

ಮುಂದೆ ಮಹಿಳೆಯ ಮೊಬೈಲ್​ ನಂಬರ್‌ ಪಡೆದು ಪದೇ ಪದೆ ಕರೆ ಮಾಡಿ ಮನು ಆ ಮಹಿಳೆಯನ್ನು ಮಾತನಾಡುತ್ತಿದ್ದ. ತನಗೆ ಮದುವೆ ಆಗಿದೆ ಅಂದ್ರೂ ಪತಿಯನ್ನ ಬಿಟ್ಟು ಬರಲು ಒತ್ತಾಯ ಮಾಡುತ್ತಿದ್ದನಂತೆ ಮನು! ಒಪ್ಪದೆ ಇದ್ದಾಗ ಮಹಿಳೆ ಬರುತ್ತಿದ್ದ ಅಟೋ ಅಡ್ಡ ಗಟ್ಟಿ ಅಟೋದಲ್ಲಿ ಆತನೂ ಕುಳಿತು ಅಸಭ್ಯ ವರ್ತನೆ ತೋರಿದ್ದಾನೆ.

ಮಹಿಳೆಯ ಜೊತೆ ಪೋಟೋ ತಗೆದು ಬ್ಲಾಕ್ ಮೇಲ್ ಮಾಡಿದ್ದಾನೆ ಮನು. ಈ ವೇಳೆ ಅಟೋ ಚಾಲಕನಿಗೂ ಧಮ್ಕಿ ಹಾಕಿದ್ದಾನೆ. ಅದಾದಮೇಲೆ ಮನು ಅಟೋ ಇಳಿದು ಹೊರಟು ಹೋಗಿದ್ದ. ನಡೆದ ವಿಷಯ ಪತಿಯೊಂದಿಗೆ ಹೇಳಿಕೊಂಡಿದ್ದಾರೆ ಆ ಮಹಿಳೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್