Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇವನಹಳ್ಳಿ: ಆಸ್ತಿಗಾಗಿ ಹೆತ್ತ ತಂದೆ-ತಾಯಿಯನ್ನೇ ಕೊಲೆಗೈದಿದ್ದ ಮಗ ಅರೆಸ್ಟ್​​

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸೂಲಿಬೆಲೆ ಗ್ರಾಮದಲ್ಲಿ ವೃದ್ಧ ದಂಪತಿಯನ್ನು ಕೊಲೆಗೈದಿದ್ದ ಮಗನನ್ನು ಪೊಲೀಸರು ಬಂಧಿಸಿದ್ದಾರೆ. ಆಸ್ತಿಗಾಗಿ ಹೆತ್ತ ತಂದೆ-ತಾಯಿಯನ್ನೇ ಕೊಲೆಗೈದಿರುವುದಾಗಿ ಪೊಲೀಸರ ವಿಚಾರಣೆ ವೇಳೆ ಮಗ ನರಸಿಂಹಮೂರ್ತಿ ತಪ್ಪೊಪ್ಪಿಕೊಂಡಿದ್ದಾನೆ.

ದೇವನಹಳ್ಳಿ: ಆಸ್ತಿಗಾಗಿ ಹೆತ್ತ ತಂದೆ-ತಾಯಿಯನ್ನೇ ಕೊಲೆಗೈದಿದ್ದ ಮಗ ಅರೆಸ್ಟ್​​
ಮೃತ ದಂಪತಿ, ಬಂಧಿತ ಮಗ
Follow us
ನವೀನ್ ಕುಮಾರ್ ಟಿ
| Updated By: ಗಂಗಾಧರ​ ಬ. ಸಾಬೋಜಿ

Updated on: Dec 11, 2023 | 7:06 PM

ದೇವನಹಳ್ಳಿ, ಡಿಸೆಂಬರ್​​ 11: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸೂಲಿಬೆಲೆ ಗ್ರಾಮದಲ್ಲಿ ವೃದ್ಧ ದಂಪತಿ ಯನ್ನು ಕೊಲೆಗೈದಿದ್ದ ಮಗನನ್ನು ಪೊಲೀಸರು ಬಂಧಿಸಿದ್ದಾರೆ. ಆಸ್ತಿಗಾಗಿ ಹೆತ್ತ ತಂದೆ-ತಾಯಿ (parents) ಯನ್ನೇ ಕೊಲೆಗೈದಿರುವುದಾಗಿ ಪೊಲೀಸರ ವಿಚಾರಣೆ ವೇಳೆ ಮಗ ನರಸಿಂಹಮೂರ್ತಿ ತಪ್ಪೊಪ್ಪಿಕೊಂಡಿದ್ದಾನೆ. ಡಿಸೆಂಬರ್ 9ರಂದು ಸಂಜೆ ರಾಡ್​ನಿಂದ ಹೊಡೆದು ಬರ್ಬರವಾಗಿ ಕೊಂದಿದ್ದ. ತಂದೆ ರಾಮಕೃಷ್ಣಪ್ಪ(70), ತಾಯಿ ಮುನಿರಾಮಕ್ಕ(65)ಳನ್ನು ಹತ್ಯೆಗೈದಿದ್ದ.

ಹೆಣ್ಣುಮಕ್ಕಳಿಗೆ ಆಸ್ತಿ ಕೊಡುವುದಾಗಿ ಹೇಳಿದ್ದಕ್ಕೆ ಕೊಲೆ ಮಾಡಿದ್ದಾನೆ. ಕೊಲೆ ಬಳಿಕ ಅನುಮಾನ ಬಾರದಂತೆ ಮನೆಗೆ ಬೀಗ ಹಾಕಿಕೊಂಡು ಹೋಗಿದ್ದ. ಬಳಿಕ ಏನು ನಡೆದಿಲ್ಲ ಎಂಬಂತೆ ವರ್ತಿಸಿದ್ದ. ಪೊಲೀಸರ ಮುಂದೆಯೂ ಕೊಲೆ ಮಾಡಿಲ್ಲವೆಂದು ನಾಟಕವಾಡಿದ್ದ ಆರೋಪಿ, ನಿರಂತರ ವಿಚಾರಣೆಯಿಂದ ಕೊಲೆ ರಹಸ್ಯ ಬಯಲಾಗಿದೆ.

ಇದನ್ನೂ ಓದಿ: ಸೂಲಿಬೆಲೆ- ರಾಡ್ ನಿಂದ ಹೊಡೆದು ವೃದ್ದ ದಂಪತಿಯ ಹತ್ಯೆ, ಕೋಟಿ ಕೋಟಿ ಆಸ್ತಿ ವಿಚಾರಕ್ಕೆ ನಡೆಯಿತಾ ಕಗ್ಗೊಲೆ?

ಮೃತ ದಂಪತಿಗೆ ಓರ್ವ ಗಂಡು ಮಗು, ನಾಲ್ಕು ಹೆಣ್ಣು ಮಕ್ಕಳಿದ್ದು ಎಲ್ಲರಿಗೂ ಮದುವೆ ಮಾಡಿ ಇಳಿ ವಯಸ್ಸಿನಲ್ಲಿ ಇಬ್ಬರೇ ಪ್ರತ್ಯೇಕವಾಗಿ ವಾಸವಾಗಿದ್ದರು. ಜೊತೆಗೆ ಕೈಲಾದ ಕೆಲಸ ಮಾಡಿಕೊಂಡಿದ್ದ ದಂಪತಿಗೆ ನಿತ್ಯ ಹೆಣ್ಣು ಮಕ್ಕಳು ಕರೆ ಮಾಡಿ ಮಾತನಾಡ್ತಿದ್ದು ಎಂದಿನಂತೆ ನಿನ್ನೆ ರಾತ್ರಿಯು ಕರೆ ಮಾಡಿದ್ದರು. ಆದರೆ ಎಷ್ಟೇ ಕರೆ ಮಾಡಿದರು ಯಾರೊಬ್ಬರು ಕರೆ ಸ್ವೀಕರಿಸದಿದ್ದು ಅನುಮಾನಗೊಂಡ ಮಗಳು ಇಂದು ಸಂಜೆ ಸೂಲಿಬೆಲೆಯ ಮನೆ ಬಳಿಗೆ ಬಂದು ನೋಡಿದ್ದಾಳೆ.

ಈ ವೇಳೆ ಮನೆ ಮುಂದೆ ವೃದ್ದರಿಬ್ಬರ ಚಪ್ಪಲಿ ಹಾಗೆ ಇದ್ದು ಮನೆ ಬಾಗಿಲು ಮಾತ್ರ ಬೀಗ ಹಾಕಿರುವುದು ಕಂಡು ಬಂದಿದೆ. ಹೀಗಾಗಿ ಅನುಮಾನಗೊಂಡ ಮಗಳು ಮನೆ ಕಿಟಕಿ ತೆಗೆದು ನೋಡಿದಾಗ ಮನೆಯ ಒಳಗೆ ವೃದ್ದ ದಂಪತಿ ಬರ್ಬರವಾಗಿ ಕೊಲೆಯಾಗಿರುವ ಭೀಕರ ದೃಶ್ಯ ಕಂಡು ಬಂದಿತ್ತು.

ಇದನ್ನೂ ಓದಿ: ರಿಕವರಿ ಹಣ ದುರುಪಯೋಗ ಆರೋಪ: ಸಿಸಿಬಿ ಇನ್ಸ್​ಪೆಕ್ಟರ್ ಶಂಕರ ನಾಯಕ್ ವಿರುದ್ಧ ಮತ್ತೆರಡು ದೂರು

ದಂಪತಿ ಇದ್ದ 2 ಎಕರೆ ಜಮೀನಿನಲ್ಲಿ ಹೆಣ್ಣು ಮಕ್ಕಳಿಗೂ ಪಾಲು ಕೊಡುತ್ತೇವೆ ಅಂತಿದ್ದು ಇದೇ ವಿಚಾರಕ್ಕೆ ಸಹೋದರ ಕಡೆಯವರೆ ಕೊಲೆ ನಡೆಸಿರಬಹುದು ಅಂತ ಸಹೋದರಿಯರು ಆರೋಪಿಸಿದ್ದರು. ಅಲ್ಲದೇ ಸಹೋದರ ವಿರುದ್ದ ಮನೆ ಮುಂದೆ ನುಗ್ಗಿ ಆಕ್ರೋಶ ಹೊರ ಹಾಕಿದ್ದು, ಎಲ್ಲರೂ ಗರಂ ಆಗ್ತಿದ್ದಂತೆ ದಂಪತಿಯ ಮಗ ನರಸಿಂಹನನ್ನ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದರು. ಪೊಲೀಸರ ನಿರಂತರ ವಿಚಾರಣೆಯಿಂದ ಕೊಲೆ ಮಾಡಿರುವುದಾಗಿ ನರಸಿಂಹಮೂರ್ತಿ ಒಪ್ಪಿಕೊಂಡಿದ್ದಾನೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.