ಶಾದಿ ಮಹಲ್ ನಲ್ಲಿ ಯುವಕನ‌ ಮೇಲೆ ನೈತಿಕ ಪೊಲೀಸ್ ಗಿರಿ ನಡೆಸಿದ ದುಷ್ಕರ್ಮಿಗಳನ್ನು ಬಂಧಿಸಿ -ಹಿಂದೂ ಕಾರ್ಯಕರ್ತರ ಆಗ್ರಹ

Moral Policing in Davangere: ಅವನು ತಪ್ಪು ಮಾಡಿದ್ದರೆ ಪೊಲೀಸರಿಗೆ ಒಪ್ಪಿಸಬೇಕಾಗಿತ್ತು. ಅದ್ರೆ ಖಾಸಗಿ ಶಾದಿ ಮಹಲ್ ನಲ್ಲಿ ಮನಸೋ ಇಚ್ಛೆ ಥಳಿಸಿ ಆ ನಂತರ ಮಧ್ಯರಾತ್ರಿ ಕಂಪ್ಲೆಂಟ್ ಕೊಟ್ಟು ಕೇಸ್ ದಾಖಲಿಸಿದ್ದಾರೆ. ಯುವಕನನ್ನು ಖಾಸಗಿ ಶಾದಿ ಮಹಲ್ ನಲ್ಲಿ ಕರೆದುಕೊಂಡು ಹೋಗಿ ಹಲ್ಲೆ ಮಾಡುವ ಅವಶ್ಯಕತೆ ಇತ್ತಾ? ಯುವಕನಿಗೆ ಈಗಾಗಲೆ ಎಂಗೇಜ್ಮೆಂಟ್ ಆಗಿದ್ದು ಮದುವೆ ಫಿಕ್ಸ್ ಆಗಿದೆ.

ಶಾದಿ ಮಹಲ್ ನಲ್ಲಿ ಯುವಕನ‌ ಮೇಲೆ ನೈತಿಕ ಪೊಲೀಸ್ ಗಿರಿ ನಡೆಸಿದ ದುಷ್ಕರ್ಮಿಗಳನ್ನು ಬಂಧಿಸಿ -ಹಿಂದೂ ಕಾರ್ಯಕರ್ತರ ಆಗ್ರಹ
ಶಾದಿ ಮಹಲ್ ನಲ್ಲಿ ಯುವಕನ‌ ಮೇಲೆ ನೈತಿಕ ಪೊಲೀಸ್ ಗಿರಿ ನಡೆಸಿದ ದುಷ್ಕರ್ಮಿಗಳನ್ನು ಬಂಧಿಸಿ
Follow us
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Updated By: ಸಾಧು ಶ್ರೀನಾಥ್​

Updated on: Dec 12, 2023 | 9:47 AM

ಅದೊಂದು ರಾತ್ರಿ ಅನ್ಯ ಧರ್ಮಿಯ ಯುವತಿಯ ಜೊತೆ ಕೆಟ್ಟಾಗಿ ವರ್ತಿಸಿದ ಆರೋಪ ಕೇಳಿ ಬಂದಿತ್ತು. ಇದೇ ಕಾರಣಕ್ಕೆ ರಾತ್ರಿ ವೇಳೆ ಯುವನೊಬ್ಬನನ್ನ ಥಳಿಸಲಾಗಿತ್ತು. ಅರೆ ಪ್ರಜ್ಞಾಹೀನ ಸ್ಥಿತಿ ಬಂದ ಬಳಿಕ ಮರದ ಅಡಿ ಹಾಕಿ ಹೋಗಿದ್ದರು. ಘಟನೆ ನಡೆದು ಮೂರು ದಿನಗಳಾಗಿವೆ ಇನ್ನೂ ಆರೋಪಿಗಳ ಬಂಧನ ಆಗಿಲ್ಲ. ಇದೇ ಕಾರಣಕ್ಕೆ ಹಿಂದೂ ಸಂಘಟನೆಗಳು (Hindu, Muslim) ಹೋರಾಟಕ್ಕೆ ಸಜ್ಜಾಗಿವೆ. ಇಲ್ಲಿದೆ ನೋಡಿ, ಸಂಘರ್ಷದ ಸಮೀಪ ಇರುವ ಯುವ ಗುಂಪುಗಳು ಸ್ಟೋರಿ. ಇದ್ದಕ್ಕಿದ್ದಂತೆ ಅಂದು ಸಂಜೆ ದಾವಣಗೆರೆ (Davangere) ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಜನ ಸಾಗವೇ ಸೇರಿತ್ತು. ವಿಶೇಷವಾಗಿ ಇಲ್ಲಿನ ತುರ್ತು ಚಿಕಿತ್ಸಾ ಘಟಕದಲ್ಲಿ ಇಂತಹದೊಂದು ಘಟನೆ ನೋಡಲು ಸಿಕ್ಕಿತ್ತು. ಇಲ್ಲೊಬ್ಬ ಯುವಕ ತೀವ್ರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ. ಕಾರಣ ಆತ ಅನ್ಯಕೋಮಿನ ಯುವತಿಯ ಜೊತೆಗೆ ಅನುಚಿತವಾಗಿ ವರ್ತಿಸಿದ್ದಾನೆ ಎಂಬ ಆರೋಪ. ಇದೇ ಕಾರಣ ಅದೇ ಕೋಮಿನ ಯುವಕರ ಗುಂಪು ಈತನ ಮೇಲೆ ದಾಳಿ ಮಾಡಿದ್ದಾರೆ (Moral Policing).

ಇದೊಂದು ರೀತಿಯಲ್ಲಿ ನೈತಿಕ ಪೊಲೀಸಗಿರಿ ಅಂದ್ರೆ ತಪ್ಪಾಗಲಿಕ್ಕಿಲ್ಲ. ಯುವಕನನ್ನು ಹಿಗ್ಗಾಮುಗ್ಗಾ ಥಳಿಸಿ ನಿರ್ಜನ ಪ್ರದೇಶಕ್ಕೆ ಬೀಸಾಕಿದ್ದರು ದುಷ್ಕರ್ಮಿಗಳು. ಇದು ಮೊನ್ನೆ ಭಾನುವಾರ ಆಗಿತ್ತು. ದಾವಣಗೆರೆ ನಗರದ ಜಾಲಿನಗರದ ಯುವಕ ಶ್ರೀನಿವಾಸ ಎಂಬಾತನ ಮೇಲೆ ದುಷ್ಕರ್ಮಿಗಳು ಮರಣಾಂತಿಕ ಹಲ್ಲೆ ಮಾಡಿದ್ದರು. ಯುವಕನಿಗೆ ಪ್ರಜ್ಞೆ ಬಂದು ತನ್ನ ಪೋಷಕರಿಗೆ ಫೋನ್ ಮಾಡಿದ‌ ನಂತರ ಯುವಕನನ್ನು ಪೋಷಕರು ಆಸ್ಪತ್ರೆಗೆ ಸೇರಿಸಿದ್ದರು. ಈ ಪ್ರಕರಣದ ಬಗ್ಗೆ ಪೊಲೀಸರು ಸೂಕ್ತ ಕ್ರಮ ಕೈಗೊಂಡಿಲ್ಲ. ಹೀಗಾಗಿ ಕುಟುಂಬ ಸದಸ್ಯರು ಹಾಗೂ ಹಿಂದೂ ಸಂಘಟನೆಯ ಪ್ರಮುಖರು ಈಗ ಹೋರಾಟಕ್ಕೆ ಸಜ್ಜಾಗಿದ್ದಾರೆ.

ದಾವಣಗೆರೆ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಮರಣಾಂತಿಕ ಹಲ್ಲೆಗೊಳಗಾದ ಯುವಕ ಚಿಕಿತ್ಸೆ ಪಡೆಯುತ್ತಿದ್ದಾನೆ. ಯುವಕನ‌ ಮೇಲೆ ನೈತಿಕ ಪೊಲೀಸ್ ಗಿರಿ ನಡೆಸಿದ ದುಷ್ಕರ್ಮಿಗಳನ್ನು ಬಂಧಿಸುವಂತೆ ಹಿಂದೂ ಸಂಘಟನೆಗಳು ಆಗ್ರಹಿಸಿವೆ. ಹಲ್ಲೆ ಮಾಡಿದವರೇ ಮೊನ್ನೆ ಮಧ್ಯ ರಾತ್ರಿ ಗಾಯಾಳು ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಿದ್ದಾರೆ.

ಇದನ್ನೂ ಓದಿ: ಉಡುಪಿ: ಅನ್ಯಮತೀಯ ಯುವಕ-ಯುವತಿ ವಿಡಿಯೋ ವೈರಲ್​, 10 ಹಿಂದೂ ಕಾರ್ಯಕರ್ತರ ವಿರುದ್ಧ ದೂರು ದಾಖಲು

ಯುವತಿಯ ಜೊತೆಗೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ದೂರು ದಾಖಲಿಸಿದ್ದಾರೆ. ಹೀಗೆ ದೂರು ದಾಖಲಿಸಿದವರು ಹಲ್ಲೆ ಯಾಕೆ ಮಾಡಿದ್ರು. ಇದರ ಹಿಂದೆ ಷಡ್ಯಂತ್ರವಿದ್ದು ಹಿಂದೂ ಯುವಕನ ಮೇಲೆ ಹಲ್ಲೆ ಮಾಡಿದ್ದು ಏಕೆ ಎಂಬುದು ಸಂಘಟನೆಗಳ ಪ್ರತಿನಿಧಿಗಳ ವಾದವಾಗಿದೆ. ನೈತಿಕ ಪೊಲೀಸ್ ಗಿರಿ ಮಾಡಿದವರನ್ನು ಬಂಧಿಸುವಂತೆ ಹಿಂದೂ ಸಂಘಟನೆ ಮುಖಂಡರಿಂದ ಆಕ್ರೋಶ ವ್ಯಕ್ತವಾಗಿದೆ.

ಅವನು ತಪ್ಪು ಮಾಡಿದ್ದರೆ ಪೊಲೀಸರಿಗೆ ಒಪ್ಪಿಸಬೇಕಾಗಿತ್ತು. ಅದ್ರೆ ಖಾಸಗಿ ಶಾದಿ ಮಹಲ್ ನಲ್ಲಿ ಮನಸೋ ಇಚ್ಛೆ ಥಳಿಸಿ ಆ ನಂತರ ಮಧ್ಯರಾತ್ರಿ ಕಂಪ್ಲೆಂಟ್ ಕೊಟ್ಟು ಕೇಸ್ ದಾಖಲಿಸಿದ್ದಾರೆ. ಯುವಕನ ಮೇಲೆ ಮರಣಾಂತಿಕ ಹಲ್ಲೆ ನಡೆಸಿದ್ದು ಏಕೆ ..?? ಯುವಕನನ್ನು ಖಾಸಗಿ ಶಾದಿ ಮಹಲ್ ನಲ್ಲಿ ಕರೆದುಕೊಂಡು ಹೋಗಿ ಹಲ್ಲೆ ಮಾಡುವ ಅವಶ್ಯಕತೆ ಇತ್ತಾ? ಯುವಕನ ಮೇಲೆ ಅತ್ಯಾಚಾರ ಪ್ರಕರಣ ಕೊಡುವುದಕ್ಕೂ ಮುನ್ನ ನೈತಿಕ ಪೊಲೀಸ್ ಗಿರಿ ನಡೆಸಿದ್ದು ಏಕೆ? ಯುವಕನಿಗೆ ಈಗಾಗಲೆ ಎಂಗೇಜ್ಮೆಂಟ್ ಆಗಿದ್ದು ಮದುವೆ ಫಿಕ್ಸ್ ಆಗಿದೆ. ಯುವಕ ತಪ್ಪು ಮಾಡಿದ್ದರೆ ಶಿಕ್ಷೆ ಕೊಡುವುದಕ್ಕೆ ಕಾನೂನು ಇದೆ. ಇವರು ಯಾರು ಎಂದು ಹೋರಾಟ ನಡೆಸಿದ್ದಾರೆ. ವಿಚಾರ ಈಗ ಗಂಭೀರ ಸ್ವರೂಪ ಪಡೆದುಕೊಂಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್