Mysore News: ವೀಲಿಂಗ್ ಶೋಕಿಗಾಗಿ ಬೈಕ್​ ಕಳ್ಳತನ; ಇಬ್ಬರ ಬಂಧನ

ವೀಲಿಂಗ್ ಶೋಕಿಗಾಗಿ ಬೈಕ್​ಗಳ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕುವೆಂಪು ನಗರ ಪೊಲೀಸರ ಬಂಧಿಸಿದ್ದಾರೆ. ಧನುಷ್(19), ನಿತಿನ್(19)ಬಂಧಿತ ಆರೋಪಿಗಳು.

Mysore News: ವೀಲಿಂಗ್ ಶೋಕಿಗಾಗಿ ಬೈಕ್​ ಕಳ್ಳತನ; ಇಬ್ಬರ ಬಂಧನ
ಮೈಸೂರಿನಲ್ಲಿ ಬೈಕ್​ ಕಳ್ಳತನ ಮಾಡುತ್ತಿದ್ದವರ ಬಂಧನ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on:Aug 04, 2023 | 7:42 AM

ಮೈಸೂರು, ಆ.4: ವೀಲಿಂಗ್(Wheeling) ಶೋಕಿಗಾಗಿ ಬೈಕ್​ಗಳ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕುವೆಂಪು ನಗರ ಪೊಲೀಸರ ಬಂಧಿಸಿದ್ದಾರೆ. ಧನುಷ್(19), ನಿತಿನ್(19)ಬಂಧಿತ ಆರೋಪಿಗಳು. ಇವರಿಂದ 2.5ಲಕ್ಷ ಮೌಲ್ಯದ 4 ಬೈಕ್​ಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ಇವರು ಮೈಸೂರಿನ ಶ್ರೀರಾಂಪುರದಲ್ಲಿ ಬೈಕ್ ಕಳ್ಳತನ ಮಾಡುವ ವೇಳೆ ಸಿಕ್ಕಿ ಬಿದ್ದಿದ್ದಾರೆ. ಒಂದು ಬೈಕ್ ಕದ್ದು ಅದೇ ಬೈಕ್​ನಲ್ಲಿ ಮತ್ತೊಂದು ಬೈಕ್ ಕದಿಯಲು ಸಂಚು ಹಾಕುತ್ತಿದ್ದರು. ಅರೆಸ್ಟ್​ ಮಾಡಿ ವಿಚಾರಣೆ ವೇಳೆ ಬೈಕ್ ವೀಲಿಂಗ್ ಮಾಡುವ ಸಲುವಾಗಿ ಕಳ್ಳತನ ಮಾಡುತ್ತಿದ್ದ ಬಗ್ಗೆ ಮಾಹಿತಿ ನೀಡಿದ್ದಾರೆ.

ನಿಧಿಗಾಗಿ ಜಮೀನೊಂದರಲ್ಲಿ ಭೂಮಿ ಅಗೆದು ಶೋಧ; ಸ್ಥಳದಲ್ಲಿ ಮಂತ್ರದ ದಾರ ಕಟ್ಟಿ, ಅರಿಶಿನ ಕುಂಕುಮದಿಂದ ಪೂಜೆ

ಮೈಸೂರು, ಆ.4: ನಿಧಿಗಾಗಿ ಜಮೀನೊಂದರ ದೇವರ ಕಲ್ಲಿನ‌ ಬಳಿ ಭೂಮಿ ತೋಡಿ ಶೋಧ ನಡೆಸಿದ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಅಗ್ರಹಾರ ಗ್ರಾಮದಲ್ಲಿ ನಡೆದಿದೆ. ಹೌದು ಗ್ರಾಮದ ಲೋಕೇಶ್ ಎಂಬುವರ ಜಮೀನಲ್ಲಿ ನಿಧಿಗಳ್ಳರು ಮಂತ್ರದ ದಾರ ಕಟ್ಟಿ, ನಿಂಬೆಹಣ್ಣು ಇಟ್ಟು ಅರಿಶಿನ ಕುಂಕುಮದಿಂದ ಪೂಜೆ ಮಾಡಿ‌ ನಿಧಿಗಾಗಿ ಶೋಧ ನಡೆಸಿದ್ದಾರೆ. ಇನ್ನು ಲೊಕೇಶ್​ ಕುಟುಂಬದವರು ಹಾಗೂ ಗ್ರಾಮಸ್ಥರು ಆ ಸ್ಥಳದಲ್ಲಿ ಒಂದು ಹಂಡೆಯಷ್ಟು ಚಿನ್ನದ ನಿಧಿಯಿದೆಯೆಂದು ಹಲವು ವರ್ಷಗಳಿಂದ ನಂಬಿಕೊಂಡಿದ್ದರು.

ನಿಧಿ ಬಗ್ಗೆ ಲೋಕೇಶ್ ಬಳಿ ಮಾತನಾಡಿದ್ದ ಇಬ್ಬರು ಮುಸ್ಲಿಂ ವ್ಯಕ್ತಿಗಳು

ನಿಧಿ ಬಗ್ಗೆ ಒಂದು‌ ತಿಂಗಳ ಹಿಂದೆ ಲೋಕೇಶ್ ಬಳಿ ಇಬ್ಬರು ಮುಸ್ಲಿಂ ವ್ಯಕ್ತಿಗಳು ಮಾತನಾಡಿದ್ದರು. ಜೊತೆಗೆ ನಿಧಿ ಶೋಧಿಸಿ ಕೊಡುತ್ತೇವೆ ಎಂದು ಭರವಸೆ ಕೂಡ ಕೊಟ್ಟಿದ್ದರು. ಆದರೆ, ಲೋಕೇಶ್ ಕುಟುಂಬದವರಿಗೆ ದೇವರ ಬಗ್ಗೆಯಿದ್ದ ಭಯದಿಂದ ನಿರಾಕರಿಸಿದ್ದರು. ಆದರೂ, ದುಷ್ಕರ್ಮಿಗಳು ಹುಣ್ಣಿಮೆಯ ದಿನ ಬಂದು ಜಾಗ ಶೋಧಿಸಿದ್ದಾರೆ. ಇದೀಗ ಘಟನೆ ಸಂಬಂಧ ಲೋಕೇಶ್ ಕುಟುಂಬ ಬಿಳಿಕೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಇದನ್ನೂ ಓದಿ:Mysore: ಮೈಸೂರಿನಲ್ಲಿ ಹೆಚ್ಚಿದ ಐಶಾರಾಮಿ ಕಾರು ಕಳ್ಳತನ; ಉದ್ಯಮಿಗಳು, ರಾಜಕಾರಣಿಗಳು, ನಿವೃತ್ತ ಅಧಿಕಾರಿಗಳ ಕಾರುಗಳೇ ಟಾರ್ಗೆಟ್

ಮೈಸೂರಿನಲ್ಲಿ ಸರಕಳ್ಳತನಕ್ಕೆ ವಿಫಲ ಯತ್ನ; ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

ಮೈಸೂರು: ಮಹಿಳೆಯರು ವಾಕಿಂಗ್ ಮಾಡುವಾಗ ಸರಕಳ್ಳತನಕ್ಕೆ ಯತ್ನಿಸಿದ ಘಟನೆ ಮೈಸೂರಿನ ಕೆ.ಆರ್ ಮೊಹಲ್ಲಾದಲ್ಲಿ ನಡೆದಿದೆ. ಕಳ್ಳನ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಬ್ಬರು ಮಹಿಳೆಯರು ನಡೆದುಕೊಂಡು ಹೋಗುವಾಗ ಅವರನ್ನು ಫಾಲೋ ಮಾಡಿದ ಅಪರಿಚಿತ ಯುವಕ, ಸಮಯ ನೋಡಿ ಸರ ಕಸಿಯಲು ಯುವಕನಿಂದ ಯತ್ನಿಸಿದ್ದಾನೆ. ಈ ವೇಳೆ ಮಹಿಳೆ ಕೂಗಿಕೊಂಡಿದ್ದು, ತಕ್ಷಣ ಆರೋಪಿ ಅಲ್ಲಿಂದ ಓಡಿ ಹೋಗಿದ್ದಾನೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:41 am, Fri, 4 August 23

ಬಿಜೆಪಿಯ ನಿಷ್ಠಾವಂತ ನಾಯಕರಿಂದ ಸರ್ಕಾರದ ವಿರುದ್ಧ ಪುನಃ ಹೋರಾಟ: ಯತ್ನಾಳ್
ಬಿಜೆಪಿಯ ನಿಷ್ಠಾವಂತ ನಾಯಕರಿಂದ ಸರ್ಕಾರದ ವಿರುದ್ಧ ಪುನಃ ಹೋರಾಟ: ಯತ್ನಾಳ್
ಮೂರು ಬಾರಿ ಸಂಸದರಾಗಿದ್ದ ಸುರೇಶ್ ಚನ್ನಪಟ್ಟಣಕ್ಕೆ ನೀಡಿದ್ದೇನು? ನಿಖಿಲ್
ಮೂರು ಬಾರಿ ಸಂಸದರಾಗಿದ್ದ ಸುರೇಶ್ ಚನ್ನಪಟ್ಟಣಕ್ಕೆ ನೀಡಿದ್ದೇನು? ನಿಖಿಲ್
ಆರಂಭಿಕ ಹಂತದಲ್ಲಿ ಕಾಂಗ್ರೆಸ್ ಪಕ್ಷದ ಕುತಂತ್ರ ಅಡ್ಡಿಯಾಗಿತ್ತು:ಕುಮಾರಸ್ವಾಮಿ
ಆರಂಭಿಕ ಹಂತದಲ್ಲಿ ಕಾಂಗ್ರೆಸ್ ಪಕ್ಷದ ಕುತಂತ್ರ ಅಡ್ಡಿಯಾಗಿತ್ತು:ಕುಮಾರಸ್ವಾಮಿ
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್‌ಗೆ ಬಸ್ ಡಿಕ್ಕಿ;18 ಮಂದಿಗೆ ಗಾಯ
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್‌ಗೆ ಬಸ್ ಡಿಕ್ಕಿ;18 ಮಂದಿಗೆ ಗಾಯ
ವಾರದ ಪಂಚಾಯಿತಿ ನಡೆಸಲು ಬಂದ ಸುದೀಪ್, ಮಂಜುಗೆ ಕಾದಿದೆ ಮಾತಿನ ಚಾಟಿ?
ವಾರದ ಪಂಚಾಯಿತಿ ನಡೆಸಲು ಬಂದ ಸುದೀಪ್, ಮಂಜುಗೆ ಕಾದಿದೆ ಮಾತಿನ ಚಾಟಿ?
ಇಬ್ಬಗೆ ನೀತಿ ತೋರುತ್ತಿರುವ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ: ಅಶೋಕ
ಇಬ್ಬಗೆ ನೀತಿ ತೋರುತ್ತಿರುವ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ: ಅಶೋಕ
ತಮಿಳುನಾಡುನಿಂದ ಕರ್ನಾಟಕಕ್ಕೆ ನೀರು ಸಿಗೋವರೆಗೆ ಹೋರಾಡುತ್ತೇನೆ: ದೇವೇಗೌಡ
ತಮಿಳುನಾಡುನಿಂದ ಕರ್ನಾಟಕಕ್ಕೆ ನೀರು ಸಿಗೋವರೆಗೆ ಹೋರಾಡುತ್ತೇನೆ: ದೇವೇಗೌಡ
ಮಹಿಳಾ ಅಭಿಮಾನಿಯ ನಡೆಯಿಂದ ದಿಗ್ಭ್ರಮೆಗೊಂಡ ವಿರಾಟ್ ಕೊಹ್ಲಿ
ಮಹಿಳಾ ಅಭಿಮಾನಿಯ ನಡೆಯಿಂದ ದಿಗ್ಭ್ರಮೆಗೊಂಡ ವಿರಾಟ್ ಕೊಹ್ಲಿ
ಉಪ ಚುನಾವಣೆಯ ನಂತರ ಕೆಲ ಬಿಜೆಪಿ ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ: ಸವದಿ
ಉಪ ಚುನಾವಣೆಯ ನಂತರ ಕೆಲ ಬಿಜೆಪಿ ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ: ಸವದಿ
ಭೀಕರ ಸ್ಫೋಟಕ್ಕೆ ಪಾಕಿಸ್ತಾನ ಕ್ವೆಟ್ಟಾ ರೈಲು ನಿಲ್ದಾಣ ಛಿದ್ರ: ವಿಡಿಯೋ ನೋಡಿ
ಭೀಕರ ಸ್ಫೋಟಕ್ಕೆ ಪಾಕಿಸ್ತಾನ ಕ್ವೆಟ್ಟಾ ರೈಲು ನಿಲ್ದಾಣ ಛಿದ್ರ: ವಿಡಿಯೋ ನೋಡಿ