Mysuru Dasara 2023: ಇದೇ ಮೊದಲ ಬಾರಿಗೆ ಪಟಾಕಿ ಸಿಡಿಸಿ ದಸರಾ ಆನೆಗಳಿಗೆ ಅಭ್ಯಾಸ, ಗಜಪಡೆಗಳ ಪ್ರೆಗ್ನೆನ್ಸಿ ಟೆಸ್ಟ್ ವರದಿಗಾಗಿ ಕಾದು ಕುಳಿತ ಅಧಿಕಾರಿಗಳು

ಇದೇ ಮೊದಲ ಬಾರಿಗೆ ಆನೆಗಳ ಕ್ಯಾಂಪ್‌ನಲ್ಲೇ ದಸರಾ ಗಜಪಡೆಗೆ ಪಟಾಕಿ ಸಿಡಿಸಿ ಅಭ್ಯಾಸ ಮಾಡಿಸಲಾಗುತ್ತಿದೆ. ದಸರಾಗಾಗಿ ಕಾಡಿನಿಂದ ನಾಡಿಗೆ ಬರುವ ಗಜಪಡೆ ನಾಡಿನ ಶಬ್ದಕ್ಕೆ ಹೊಂದಿಕೊಳ್ಳಲು ಈ ರೀತಿ ಪಟಾಕಿ ಸಿಡಿಸಿ ಅಭ್ಯಾಸ ಮಾಡಿಸಲಾಗುತ್ತಿದೆ.

Mysuru Dasara 2023: ಇದೇ ಮೊದಲ ಬಾರಿಗೆ ಪಟಾಕಿ ಸಿಡಿಸಿ ದಸರಾ ಆನೆಗಳಿಗೆ ಅಭ್ಯಾಸ, ಗಜಪಡೆಗಳ ಪ್ರೆಗ್ನೆನ್ಸಿ ಟೆಸ್ಟ್ ವರದಿಗಾಗಿ ಕಾದು ಕುಳಿತ ಅಧಿಕಾರಿಗಳು
ದಸರಾ ಆನೆಗಳು
Follow us
| Updated By: ಆಯೇಷಾ ಬಾನು

Updated on:Aug 04, 2023 | 10:40 AM

ಮೈಸೂರು, ಆ.04: ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara 2023)ಮಹೋತ್ಸವಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಅಕ್ಟೋಬರ್ 15 ರಂದು ಸಿಎಂ ಸಿದ್ದರಾಮಯ್ಯ(Siddaramaiah) ದಸರಾಗೆ ಅದ್ದೂರಿಯಾಗಿ ಚಾಲನೆ ನೀಡಲಿದ್ದಾರೆ. ಹೀಗಾಗಿ ದಸರಾ ಸಿದ್ಧತೆಗಳು ಶುರುವಾಗಿವೆ. ಮೈಸೂರು ದಸರಾ ಗಜಪಡೆಗಳಿಗೆ(Dasara Elephants) ಪಟಾಕಿ ಸಿಡಿಸಿ ತರಬೇತಿ ನೀಡಲಾಗುತ್ತಿದೆ. ಇದೇ ಮೊದಲ ಬಾರಿಗೆ ಆನೆಗಳ ಕ್ಯಾಂಪ್‌ನಲ್ಲೇ ದಸರಾ ಗಜಪಡೆಗೆ ಪಟಾಕಿ ಸಿಡಿಸಿ ಅಭ್ಯಾಸ ಮಾಡಿಸಲಾಗುತ್ತಿದೆ.

ಸಿದ್ದರಾಮಯ್ಯ ಸರ್ಕಾರ ದಸರಾವನ್ನು ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಘೋಷಿಸಿದೆ. ಪ್ರತಿ ವರ್ಷದಂತೆ ಈ ವರ್ಷ ಕೂಡ ನಾಡ ಹಬ್ಬ ದೇಶ-ವಿದೇಶಿಗರ ಮನ ಸೆಳೆಯಲಿದೆ. ಅ.15ರಿಂದ ಆರಂಭವಾಗುವ ನಾಡ ಹಬ್ಬ ದಸರಾಗೆ ಅರಮನೆ ನಗರಿ ಮೈಸೂರಿನಲ್ಲಿ ಭರ್ಜರಿ ಸಿದ್ಧತೆಗಳು ಶುರುವಾಗಿವೆ. ಇದೇ ಮೊದಲ ಬಾರಿಗೆ ಆನೆಗಳ ಕ್ಯಾಂಪ್‌ನಲ್ಲೇ ದಸರಾ ಗಜಪಡೆಗೆ ಪಟಾಕಿ ಸಿಡಿಸಿ ಅಭ್ಯಾಸ ಮಾಡಿಸಲಾಗುತ್ತಿದೆ. ದಸರಾಗಾಗಿ ಕಾಡಿನಿಂದ ನಾಡಿಗೆ ಬರುವ ಗಜಪಡೆ ನಾಡಿನ ಶಬ್ದಕ್ಕೆ ಹೊಂದಿಕೊಳ್ಳಲು ಈ ರೀತಿ ಪಟಾಕಿ ಸಿಡಿಸಿ ಅಭ್ಯಾಸ ಮಾಡಿಸಲಾಗುತ್ತಿದೆ.

ಇದನ್ನೂ ಓದಿ: ಮೈಸೂರು ದಸರಾದಲ್ಲಿ ಏರ್​ ಶೋ; ರಕ್ಷಣಾ ಸಚಿವ ರಾಜನಾಥ್​ ಸಿಂಗ್​ಗೆ ಸಿಎಂ ಸಿದ್ದರಾಮಯ್ಯ ಬರೆದ ಪತ್ರದಲ್ಲೇನಿದೆ?

ಇನ್ನು ಈ ಬಾರಿಯ ದಸರೆಗೆ ಹೊಸ ಆನೆಗಳನ್ನು ಕರೆತರಲು ಚಿಂತನೆ ನಡೆದಿದೆ. ಹೀಗಾಗಿ ಅರಣ್ಯ ಅಧಿಕಾರಿಗಳು ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. ಹೀಗಾಗಿ ದಸರಾ ಗಜಪಡೆಯ ಹೆಣ್ಣು ಆನೆಗಳಿಗೆ ಪ್ರೆಗ್ನೆನ್ಸಿ ಟೆಸ್ಟ್ ಮಾಡಿಸಲಾಗಿದ್ದು ಅಧಿಕಾರಿಗಳು ವರದಿ ನಿರೀಕ್ಷೆಯಲ್ಲಿದ್ದಾರೆ. ಒಟ್ಟು 6 ಹೆಣ್ಣಾನೆಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಪರೀಕ್ಷೆಗಾಗಿ ರಕ್ತ, ಮೂತ್ರದ ಮಾದರಿ ದೆಹಲಿ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಇನ್ನು 2-3 ದಿನಗಳಲ್ಲಿ ಪ್ರೆಗ್ನೆನ್ಸಿ ವರದಿ ಬರುವ ನಿರೀಕ್ಷೆ ಇದೆ. ವರದಿ ಬಂದ ನಂತರ ದಸರಾ ಗಜಪಡೆಯ ಆಯ್ಕೆ ಅಂತಿಮಗೊಳ್ಳಲಿದೆ.

ಮೈಸೂರು ದಸರಾ ಹಬ್ಬವನ್ನು ಅಕ್ಟೋಬರ್​ 15ರ ಬೆಳಿಗ್ಗೆ 10.15 ರಿಂದ 10.30 ಕ್ಕೆ ಸಲ್ಲುವ ಮಹೂರ್ತದಲ್ಲಿ ಸಿಎಂ ಸಿದ್ದರಾಮಯ್ಯ ಉದ್ಘಾಟನೆ ನೆರವೇರಿಸಲಿದ್ದು, ಪಂಜಿನ ಕವಾಯತು ವಿಜಯದಶಮಿ ದಿನದಂದು ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು, ಚಲನಚಿತ್ರೋತ್ಸವ, ರೈತರ ದಸರಾ, ಯುವ ದಸರಾ ಎಲ್ಲವನ್ನು ವ್ಯವಸ್ಥಿತವಾಗಿ ಆಚರಿಸಲು ತಯಾರಿ ನಡೆದಿದೆ.

ಮೈಸೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:24 am, Fri, 4 August 23