AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು ದಸರಾದಲ್ಲಿ ಏರ್​ ಶೋ; ರಕ್ಷಣಾ ಸಚಿವ ರಾಜನಾಥ್​ ಸಿಂಗ್​ಗೆ ಸಿಎಂ ಸಿದ್ದರಾಮಯ್ಯ ಬರೆದ ಪತ್ರದಲ್ಲೇನಿದೆ?

Mysuru Dasara 2023; ಮೈಸೂರಿನಲ್ಲಿ ನಾಡಹಬ್ಬ ದಸರಾ ಸಂದರ್ಭದಲ್ಲಿ ಈ ಹಿಂದೆ ತಿಳಿಸಿದಂತೆ ‘ಏರ್‌ಶೋ' ಯೋಜಿಸಲು ಸಂಬಂಧಪಟ್ಟವರಿಗೆ ನಿರ್ದೇಶಿಸಲು ಈ ಮೂಲಕ ವಿನಂತಿಸಲಾಗಿದೆ ಎಂದು ಸಿಂಗ್ ಅವರಿಗೆ ಬರೆದ ಪತ್ರದಲ್ಲಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮೈಸೂರು ದಸರಾದಲ್ಲಿ ಏರ್​ ಶೋ; ರಕ್ಷಣಾ ಸಚಿವ ರಾಜನಾಥ್​ ಸಿಂಗ್​ಗೆ ಸಿಎಂ ಸಿದ್ದರಾಮಯ್ಯ ಬರೆದ ಪತ್ರದಲ್ಲೇನಿದೆ?
ಸಿಎಂ ಸಿದ್ದರಾಮಯ್ಯ & ರಾಜನಾಥ್​ ಸಿಂಗ್
Prajwal D'Souza
Prajwal D'Souza| Edited By: |

Updated on:Aug 04, 2023 | 10:45 AM

Share

ನವದೆಹಲಿ: ಮುಂಬರುವ ಮೈಸೂರು ದಸರಾ (Mysuru Dasara) ಮಹೋತ್ಸವದ ಸಂದರ್ಭದಲ್ಲಿ ಏರ್​ ಶೋ (Air Show) ಪ್ರದರ್ಶನವನ್ನು ಆಯೋಜಿಸುವಂತೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಅವರಿಗೆ ಗುರುವಾರ ಮನವಿ ಮಾಡಿದ್ದಾರೆ. ಸಿಂಗ್ ಅವರನ್ನು ದೆಹಲಿಯಲ್ಲಿ ಗುರುವಾರ ಭೇಟಿಯಾದ ಸಿದ್ದರಾಮಯ್ಯ ಮನವಿ ಪತ್ರ ಸಲ್ಲಿಸಿದ್ದಾರೆ. ಈ ವರ್ಷ ಅಕ್ಟೋಬರ್ 15 ರಿಂದ 24 ರವರೆಗೆ ಮೈಸೂರು ದಸರಾ ನಡೆಯಲಿದೆ.

ಮೈಸೂರಿನಲ್ಲಿ ನಾಡಹಬ್ಬ ದಸರಾ ಸಂದರ್ಭದಲ್ಲಿ ಈ ಹಿಂದೆ ತಿಳಿಸಿದಂತೆ ‘ಏರ್‌ಶೋ’ ಯೋಜಿಸಲು ಸಂಬಂಧಪಟ್ಟವರಿಗೆ ನಿರ್ದೇಶಿಸಲು ಈ ಮೂಲಕ ವಿನಂತಿಸಲಾಗಿದೆ ಎಂದು ಸಿಂಗ್ ಅವರಿಗೆ ಬರೆದ ಪತ್ರದಲ್ಲಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಮುಂದುವರಿದು, ನಿಮ್ಮ ಸಮಯೋಚಿತ ಮಧ್ಯಪ್ರವೇಶದಿಂದ ದಸರಾ ಹಬ್ಬಕ್ಕೆ ಇನ್ನಷ್ಟು ರಂಗು ಮೂಡಲಿದೆ ಎಂದು ಉಲ್ಲೇಖಿಸಿದ್ದಾರೆ.

ಕೇಂದ್ರ ಸಚಿವರ ಜತೆಗಿನ ಭೇಟಿಯ ಛಾಯಾಚಿತ್ರಗಳನ್ನೂ ಮುಖ್ಯಮಂತ್ರಿ ಟ್ವಿಟರ್​​ನಲ್ಲಿ ಹಂಚಿಕೊಂಡಿದ್ದಾರೆ.

ಮೈಸೂರು ದಸರಾ ಆಚರಣೆಯ ಉನ್ನತಾಧಿಕಾರ ಸಮಿತಿಯ ಸಭೆಯಲ್ಲಿ 2023ರ ದಸರಾ ಮಹೋತ್ಸವದಲ್ಲಿ ಏರ್ ಶೋ ನಡೆಸಬೇಕೆಂಬ ಜನರ ಆಶಯವನ್ನು ಸಮಿತಿಯ ಮುಂದೆ ಇಡಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

2017 ಮತ್ತು 2019 ರಲ್ಲಿ, ಮೈಸೂರಿನ ಟಾರ್ಚ್ ಲೈಟ್ ಪರೇಡ್ ಮೈದಾನದಲ್ಲಿ ಭಾರತೀಯ ವಾಯುಪಡೆಯು ಪ್ರದರ್ಶಿಸಿದ ವಿಶೇಷ ಏರ್ ಶೋ ಪ್ರವಾಸಿಗರು ಮತ್ತು ಕನ್ನಡಿಗರ ಗಮನವನ್ನು ಸೆಳೆದಿತ್ತು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಇದನ್ನೂ ಓದಿ: ಮೈಸೂರು ದಸರಾ ಮೆರವಣಿಗೆಯಲ್ಲಿ ಅನುರಣಿಸಲಿದೆ ಕಾಂಗ್ರೆಸ್ ಗ್ಯಾರಂಟಿ ಸ್ತಬ್ಧಚಿತ್ರ! ಏರ್​ ಶೋ ನಡೆಸಲು ಚಿಂತನೆ; ಸಿಎಂ ಸಿದ್ದರಾಮಯ್ಯ

ಈ ವರ್ಷ ಮೈಸೂರು ದಸರಾವನ್ನು ಅರ್ಥಪೂರ್ಣವಾಗಿ ಹಾಗೂ ಅದ್ಧೂರಿಯಾಗಿ ಆಯೋಜಿಸಲಾಗುವುದು ಎಂದು ಸಿದ್ದರಾಮಯ್ಯ ಸೋಮವಾರ ದಸರಾ ಸಮಿತಿಯ ಸಭೆಯ ನಂತರ ಹೇಳಿದ್ದರು. ದಸರಾ ಸಾಂಪ್ರದಾಯಿಕ ಹಬ್ಬವಾಗಿದ್ದು, ಅದು ಜನರ ಹಬ್ಬವಾಗಬೇಕು ಎಂದು ಸಿದ್ದರಾಮಯ್ಯ ಹೇಳಿದ್ದರು.

ಜಂಬೂ ಸವಾರಿ, ಆನೆಗಳ ಮೆರವಣಿಗೆ, ಟೇಬಲ್ಲುಗಳು, ಬೆಳಕಿನ ಅಲಂಕಾರಗಳು, ಟಾರ್ಚ್​​ಲೈಟ್ ಮೆರವಣಿಗೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಮೈಸೂರು ದಸರಾದ ಕೆಲವು ಪ್ರಮುಖ ಆಕರ್ಷಣೆಗಳಾಗಿವೆ. ಇದು ಪ್ರಪಂಚದ ವಿವಿಧ ಭಾಗಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:57 pm, Thu, 3 August 23

Follow Us
‘ಬುಲ್ಲಿ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಪುನೀತ್ ನೆನಪು ಮಾಡಿಕೊಂಡ ಊರ್ವಶಿ
‘ಬುಲ್ಲಿ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಪುನೀತ್ ನೆನಪು ಮಾಡಿಕೊಂಡ ಊರ್ವಶಿ
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಕನ್ನಡ ಚಿತ್ರರಂಗಕ್ಕೆ ಮರಳಿದ ನಟಿ ಊರ್ವಶಿ: ಶೀರ್ಷಿಕೆ, ಫಸ್ಟ್ ಲುಕ್ ಪೋಸ್ಟರ್
ಕನ್ನಡ ಚಿತ್ರರಂಗಕ್ಕೆ ಮರಳಿದ ನಟಿ ಊರ್ವಶಿ: ಶೀರ್ಷಿಕೆ, ಫಸ್ಟ್ ಲುಕ್ ಪೋಸ್ಟರ್
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ