ಸಿಬ್ಬಂದಿಗೆ ವೇತನ ಕೊಡಲು ಸಾಧ್ಯವಾಗದ ಸ್ಥಿತಿ ತಲುಪಿತಾ ಸರ್ಕಾರ? ಸಂಚಲನ ಮೂಡಿಸಿದ ಯಾದಗಿರಿ ಎಸ್​ಪಿ ಇ-ಮೇಲ್​

ಪೊಲೀಸ್ ಇಲಾಖೆಯ ಸಿಬ್ಬಂದಿಗೆ ಅನುದಾನದ ಕೊರತೆ ಎದುರಾಗಿದ್ಯಾ? ಸಿಬ್ಬಂದಿಗೆ ವೇತನ ಕೊಡಲು ಸಾಧ್ಯವಾಗದ ಸ್ಥಿತಿ ತಲುಪಿತಾ ಸರ್ಕಾರ? ಇದಕ್ಕೆ ಯಾದಗಿರಿ ಎಸ್​ಪಿ ಇ-ಮೇಲ್ ಸಂದೇಶ ಪುಷ್ಠಿ ನೀಡುವಂತಿದೆ .

ಸಿಬ್ಬಂದಿಗೆ ವೇತನ ಕೊಡಲು ಸಾಧ್ಯವಾಗದ ಸ್ಥಿತಿ ತಲುಪಿತಾ ಸರ್ಕಾರ? ಸಂಚಲನ ಮೂಡಿಸಿದ ಯಾದಗಿರಿ ಎಸ್​ಪಿ ಇ-ಮೇಲ್​
ಯಾದಗಿರಿ ಎಸ್​ಪಿ ಇ-ಮೇಲ್ ಸಂದೇ
Follow us
| Updated By: ರಮೇಶ್ ಬಿ. ಜವಳಗೇರಾ

Updated on:Aug 03, 2023 | 2:46 PM

ಯಾದಗಿರಿ, (ಆಗಸ್ಟ್ 02): ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಘೋಷಣೆ ಮಾಡಿದ್ದ ಗ್ಯಾರಂಟಿ ಯೋಜನೆಗಳನ್ನು ಇದೀಗ ಜಾರಿಗೆ ತಂದಿದ್ದು, ಇದಕ್ಕೆ ಅನುದಾನ ನೀಡಲು ಬೇರೆ-ಬೇರೆ ಮೂಲಗಳಿಂದ ಹಣ ಸಂಗ್ರಹಕ್ಕೆ ಮುಂದಾಗಿದೆ. ಅಲ್ಲದೇ ಈ ಗ್ಯಾರಂಟಿ ಯೋಜನೆಗಳಿಂದ ವಿವಿಧ ಅಭಿವೃದ್ಧಿ ಕಾರ್ಯಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ. ಅಲ್ಲದೇ ಸರ್ಕಾರಿ ನೌಕರರಿಗೂ ವೇತನ ನೀಡದ ಸ್ಥಿತಿ ಬಂದೊದಗಿದೆ ಎಂದು ಟೀಕಿಸಿದೆ. ಇದೀಗ ಇದಕ್ಕೆ ಇ-ಮೇಲ್ ಸಂದೇಶ ಪುಷ್ಠಿ ನೀಡುವಂತಿದೆ.

ಇದನ್ನೂ ಓದಿ: ಗ್ಯಾರಂಟಿ ಯೋಜನೆಯಿಂದ ರಾಜ್ಯದ ಖಜಾನೆ ಖಾಲಿ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ಸಿಎಂ ಸಿದ್ಧರಾಮಯ್ಯ ಹೇಳಿದ್ದಿಷ್ಟು

ಅನುದಾನ ಕೊರತೆ ಕಾರಣ ಜುಲೈ ತಿಂಗಳ ವೇತನ ವಿಳಂಬವಾಗಲಿದೆ ಎಂದು ಜಿಲ್ಲೆಯ ಪೊಲೀಸ್​ ಸಿಬ್ಬಂದಿಗೆ ಯಾದಗಿರಿ ಎಸ್​ಪಿ ಡಾ.ಸಿ.ಬಿ.ವೇದಮೂರ್ತಿ ಇ-ಮೇಲೆ ಮಾಡಿದ್ದು, ಇದೀಗ ಅದು ವೈರಲ್ ಆಗಿದೆ. ಇದರೊಂದಿಗೆ ಪೊಲೀಸ್ ಇಲಾಖೆಯ ಸಿಬ್ಬಂದಿಗೆ ಅನುದಾನದ ಕೊರತೆ ಎದುರಾಗಿದ್ಯಾ? ಸಿಬ್ಬಂದಿಗೆ ವೇತನ ಕೊಡಲು ಸಾಧ್ಯವಾಗದ ಸ್ಥಿತಿ ತಲುಪಿತಾ ಸರ್ಕಾರ? ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.

ಇನ್ನು ಈ ಇ-ಮೇಲ್ ಪ್ರತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರತಿಪಕ್ಷಗಳನ್ನು ಇದನ್ನು ಇಟ್ಟುಕೊಂಡು ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದಾರೆ. ಅಲ್ಲದೇ ಕಾಂಗ್ರೆಸ್​ನ ಗ್ಯಾರಂಟಿ ಜಾರಿಗೆಯಿಂದಾಗಿ ಸರ್ಕಾರಿ ನೌಕರರಿಗೆ ವೇತನ ಕೊಡದ ಸ್ಥಿತಿ ನಿರ್ಮಾಣವಾಗಿದೆ ಎಂದು ಟೀಕೆಗಳು ವ್ಯಕ್ತವಾಗುತ್ತಿವೆ.

ಮೊದಲು ಅನುದಾನ ಕೊರತೆಯಿಂದ ವೇತನ ವಿಳಂಬವಾಗಲಿದೆ ಎಂದು ಸಿಬ್ಬಂದಿಗೆ ಇ-ಮೇಲ್​ ಮೂಲಕ ಸಂದೇಶ ರವಾನಿಸಿದ್ದರು. ಆದ್ರೆ, ಇದೀಗ ಅನುದಾನ ಕೊರತೆ ಇಲ್ಲ, ತಾಂತ್ರಿಕ ದೋಷವಾಗಿದೆ. ಹೆಚ್‌ಆರ್‌ಎಂಎಸ್ ತಾಂತ್ರಿಕ ದೋಷದಿಂದ ವಿಳಂಬವಾಗಲಿದೆ ಎಂದು ಮತ್ತೊಂದು ಸಂದೇಶ ಕಳುಹಿಸಿದ್ದಾರೆ. ಇದರೊಂದಿಗೆ ಸಿಬ್ಬಂದಿಗೆ ವೇತನದ ಬಗ್ಗೆ ಸಮಜಾಯಿಷಿ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 2:22 pm, Thu, 3 August 23