ಬೆಂಗಳೂರು: ವೀಲಿಂಗ್ ಮಾಡಲು ಮನೆ ಮುಂದೆ ನಿಲ್ಲಿಸಿದ್ದ ಬೈಕ್ಗಳ ಕಳ್ಳತನ: ಡಿಯೋ ಬೈಕ್ ಟಾರ್ಗೆಟ್
ಇತ್ತೀಚೆಗೆ ಬೈಕ್ ವೀಲಿಂಗ್ ಮಾಡುವವರು ಹೆಚ್ಚಾಗಿ ಕಂಡುಬರುತ್ತಿದ್ದು, ಪ್ರಾಣದ ಹಂಗು ತೊರೆದು ಈ ಸ್ಟಂಟ್ ಮಾಡುತ್ತಾರೆ. ಅದರಂತೆ ಇಲ್ಲೊಬ್ಬ ಆಸಾಮಿ ಶೋಕಿಗಾಗಿ ಬೈಕ್ ವೀಲಿಂಗ್ ಕಲಿತು, ಬಳಿಕ ಬೈಕಿಲ್ಲವೆಂದು ಬಾಲಕರ ಜೊತೆ ಸೇರಿ ಮನೆಗಳ ಮುಂದೆ ನಿಲ್ಲಿಸಿದ್ದ ಬೈಕ್ಗಳ ಕಳ್ಳತನ ಮಾಡಲು ಶುರುಮಾಡಿದ್ದ. ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಬೆಂಗಳೂರು: ಇತ್ತೀಚೆಗೆ ಬೈಕ್ ವೀಲಿಂಗ್(Bike wheeling) ಮಾಡುವವರು ಹೆಚ್ಚಾಗಿ ಕಂಡುಬರುತ್ತಿದ್ದು, ಪ್ರಾಣದ ಹಂಗು ತೊರೆದು ಈ ಸ್ಟಂಟ್ ಮಾಡುತ್ತಾರೆ. ಇದನ್ನ ತಡೆಯಲು ಪೊಲೀಸರು ಎಷ್ಟೇ ಹರಸಾಹಸ ಪಟ್ಟರು ಅಲ್ಲೊಂದು ಇಲ್ಲೊಂದು ಇಂತಹ ಪ್ರಕರಣಗಳು ಕಂಡು ಬರುತ್ತದೆ. ಅದರಂತೆ ಇಲ್ಲೊಬ್ಬ ಆಸಾಮಿ ಶೋಕಿಗಾಗಿ ಬೈಕ್ ವೀಲಿಂಗ್ ಕಲಿತು, ಬಳಿಕ ಬೈಕಿಲ್ಲವೆಂದು ಬಾಲಕರ ಜೊತೆ ಸೇರಿ ಮನೆಗಳ ಮುಂದೆ ನಿಲ್ಲಿಸಿದ್ದ ಬೈಕ್ಗಳ ಕಳ್ಳತನ ಮಾಡಲು ಶುರುಮಾಡಿದ್ದ. ಇದೀಗ ಆತನನ್ನ ಕೊಡಿಗೆಹಳ್ಳಿ ಪೊಲೀಸರು ಬಂಧಿಸಿದ್ದು, ಬಂಧಿತ ಆರೋಪಿಯಿಂದ ಬರೊಬ್ಬರಿ 17 ಬೈಕ್ಗಳನ್ನ ವಶಕ್ಕೆ ಪಡೆಯಲಾಗಿದೆ. ಶರತ್ (22) ಬಂಧಿತ ಆರೋಪಿ.
ಇನ್ನು ಈ ಗ್ಯಾಂಗ್ ಹೆಚ್ಚಾಗಿ ಡಿಯೋ ಬೈಕ್ಗಳನ್ನೇ ಟಾರ್ಗೆಟ್ ಮಾಡುತಿದ್ದರು, ಐವರು ಬಾಲಕರ ಜೊತೆ ವಿಲೀಂಗ್ ಚಟಕ್ಕೆ ಬಿದಿದ್ದ ಆರೋಪಿ ಶರತ್ , ತನ್ನ ಬಳಿ ಬೈಕ್ ಇಲ್ಲವೆಂದು ಕಂಡ ಕಂಡವರ ಬೈಕ್ ಕಳ್ಳತನ ಮಾಡುತ್ತಿದ್ದ. ಹೌದು ಕೊಡಿಗೇಹಳ್ಳಿ, ಮಾಗಡಿರೋಡ್, ಬಸವೇಶ್ವರನಗರ ಸೇರಿದಂತೆ ಹಲವು ಕಡೆ ಇತ ಈ ಕೃತ್ಯ ಎಸಗಿದ್ದಾನೆ. ಇತ್ತೀಚೆಗೆ ತಡರಾತ್ರಿ ನಾಕಬಂದಿಯಾಕಿ ಪೊಲೀಸರು ತಪಾಸಣೆ ನಡೆಸುವ ವೇಳೆ ಶರತ್ ಪ್ರತ್ಯಕ್ಷನಾಗಿದ್ದ. ಈ ವೇಳೆ ಪೊಲೀಸರು ಆತನನ್ನ ನೋಡುವ ಮುನ್ನವೇ ಪರಾರಿಗೆ ಯತ್ನಿಸಿದ್ದಾನೆ. ಅನುಮಾನಗೊಂಡು ಆತನನ್ನ ಹಿಡಿದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕೃತ್ಯಗಳು ಬಯಲಿಗೆ ಬಂದಿವೆ. ಬಳಿಕ ಈತನ ಮಾಹಿತಿ ಆದರಿಸಿ ಐವರು ಬಾಲಕರ ಅಭಿರಕ್ಷೆಗೆ ಪಡೆದು ವಿಚಾರಣೆ ಮಾಡಿದ್ದು, ಸದ್ಯ ಆರೋಪಿ ಬಂಧನದಿಂದ 8ಲಕ್ಷ ಮೌಲ್ಯದ ವಿವಿಧ ಬೈಕ್ ಪತ್ತೆಯಾಗಿದೆ.
ಇದನ್ನೂ ಓದಿ:Viral Video: ಹಿಂದೊಂದು ಮುಂದೊಂದು ಹುಡುಗಿಯರನ್ನು ಕೂರಿಸಿ ಬೈಕ್ ವೀಲಿಂಗ್ ಮಾಡಿದ ಯುವಕ, ಇಲ್ಲಿದೆ ನೋಡಿ ವಿಡಿಯೋ
ಪಡ್ಡೆ ಹುಡುಗರಿಂದ ಅಪಾಯಕಾರಿ ಬೈಕ್ ವೀಲಿಂಗ್, ವಿಡಿಯೋ ವೈರಲ್
ಮೈಸೂರು: ಎಷ್ಟೇ ಕಠಿಣ ಕ್ರಮ ಕೈಗೊಂಡರು ಪುಂಡರ ವೀಲಿಂಗ್ ಹಾವಳಿ ಮಾತ್ರ ತಡೆಯಲಾಗುತ್ತಿಲ್ಲ. ಹೌದು ರಾಜ್ಯದಲ್ಲಿ ವ್ಹೀಲಿಂಗ್ ಪುಂಡರ ಹಾವಳಿ ಮೀತಿಮೀರಿದೆ. ಇವರಿಂದ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಏಪ್ರಿಲ್ 22 ರಂದು ಮೈಸೂರು ಊಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಐದಾರು ಬೈಕ್ನಲ್ಲಿ ಯುವಕರು ಬಂದು ಡೆಡ್ಲಿ ವಿಲೀಂಗ್ ಮಾಡಿ ಹುಚ್ಚಾಟ ಮೆರೆದಿದ್ದಾರೆ. ಈ ವೇಳೆ ಬೇರೆ ವಾಹನ ಸವಾರರಿಗೆ ಕಿರಿಕಿರಿ ನೀಡಿ ಜೊತೆಗೆ ಬೇರೆ ಸವಾರರ ಪ್ರಾಣದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ. ಈ ಪುಂಡರ ಹುಚ್ಚಾಟವನ್ನ ಸಾರ್ವಜನಿಕರೊಬ್ಬರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ವಿಲೀಂಗ್ ಹುಚ್ಚಾಟದ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ