ಮೈಸೂರು: ಪಡ್ಡೆ ಹುಡುಗರಿಂದ ಅಪಾಯಕಾರಿ ಬೈಕ್ ವೀಲಿಂಗ್, ವಿಡಿಯೋ ವೈರಲ್

ಮೈಸೂರು ಊಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಐದಾರು ಬೈಕ್​ನಲ್ಲಿ ಯುವಕರು ಡೆಡ್ಲಿ ವಿಲೀಂಗ್ ಮಾಡಿ ಹುಚ್ಚಾಟ ಮೆರೆದಿದ್ದು, ಈ ಪುಂಡರ ಹುಚ್ಚಾಟವನ್ನ ಸಾರ್ವಜನಿಕರೊಬ್ಬರು ಮೊಬೈಲ್ ನಲ್ಲಿ ಸೆರೆ ಹಿಡಿದು, ವಿಲೀಂಗ್ ಹುಚ್ಚಾಟದ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಮೈಸೂರು:  ಪಡ್ಡೆ ಹುಡುಗರಿಂದ ಅಪಾಯಕಾರಿ ಬೈಕ್ ವೀಲಿಂಗ್, ವಿಡಿಯೋ ವೈರಲ್
ಬೈಕ್​ ವೀಲಿಂಗ್​ ವಿಡಿಯೋ ವೈರಲ್​
Follow us
|

Updated on: Apr 23, 2023 | 10:14 AM

ಮೈಸೂರು: ಎಷ್ಟೇ ಕಠಿಣ ಕ್ರಮ ಕೈಗೊಂಡರು ಪುಂಡರ ವೀಲಿಂಗ್ ಹಾವಳಿ ಮಾತ್ರ ತಡೆಯಲಾಗುತ್ತಿಲ್ಲ. ಹೌದು ರಾಜ್ಯದಲ್ಲಿ ವ್ಹೀಲಿಂಗ್ ಪುಂಡರ ಹಾವಳಿ ಮೀತಿಮೀರಿದೆ. ಇವರಿಂದ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ನಿನ್ನೆ(ಏ.22) ಮೈಸೂರು ಊಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಐದಾರು ಬೈಕ್​ನಲ್ಲಿ ಯುವಕರು ಬಂದು ಡೆಡ್ಲಿ ವಿಲೀಂಗ್ ಮಾಡಿ ಹುಚ್ಚಾಟ ಮೆರೆದಿದ್ದಾರೆ. ಈ ವೇಳೆ ಬೇರೆ ವಾಹನ ಸವಾರರಿಗೆ ಕಿರಿಕಿರಿ ನೀಡಿ ಜೊತೆಗೆ ಬೇರೆ ಸವಾರರ ಪ್ರಾಣದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ. ಈ ಪುಂಡರ ಹುಚ್ಚಾಟವನ್ನ ಸಾರ್ವಜನಿಕರೊಬ್ಬರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ವಿಲೀಂಗ್ ಹುಚ್ಚಾಟದ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ಇತ್ತೀಚೆಗಷ್ಟೇ ವ್ಹೀಲಿಂಗ್​​ಗೆ ಕಡಿವಾಣ ಹಾಕಲು ಹೊಸ ಟಾಸ್ಕ್ ಫೋರ್ಸ್​ ರಚನೆ

ಬೆಂಗಳೂರು: ಇತ್ತೀಚೆಗಷ್ಟೇ ನಗರದಲ್ಲಿ ಹೆಚ್ಚಾಗುತ್ತಿರುವ ವ್ಹೀಲಿಂಗ್​​ಗೆ ಕಡಿವಾಣ ಹಾಕಲು ಹೊಸ ಟಾಸ್ಕ್ ಫೋರ್ಸ್​ ರಚನೆ ಮಾಡಲಾಗಿದೆ ಎಂದಿದ್ದರು. ಜಂಟಿ ಪೊಲೀಸ್ ಆಯುಕ್ತ ಅನುಚೇತ್ ನೇತೃತ್ವದಲ್ಲಿ ಓರ್ವ ಎಸಿಪಿ, ಇನ್ಸ್​​ಪೆಕ್ಟರ್​​ ಸೇರಿ 10 ಜನರ ಟಾಸ್ಕ್​​​ಫೋರ್ಸ್ ರಚಿಸಲಾಗಿದ್ದು ಈ ತಂಡ ರಚನೆಯಾದ ನಾಲ್ಕೇ ದಿನದಲ್ಲಿ 6 ಜನರನ್ನ ಬಂಧಿಸಲಾಗಿತ್ತು.

ಹೌದು ಬೆಂಗಳೂರಿನ ಪ್ರಮುಖ ರಸ್ತೆ, ಹೈವೆಗಳಲ್ಲಿ ಬೈಕ್​​ ವ್ಹೀಲಿಂಗ್ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು. ಸಾಮಾಜಿಕ ಜಾಲತಾಣಗಳಲ್ಲಿ ವ್ಹೀಲಿಂಗ್ ವಿಡಿಯೋಗಳು ವೈರಲ್ ಆಗುತ್ತಿವೆ. ಹೀಗಾಗಿ ಇದಕ್ಕೆ ಕಡಿವಾಣ ಹಾಕಲು ಪೊಲೀಸರು ಮುಂದಾಗಿದ್ದು, 10 ಜನರಿರುವ ತಂಡವನ್ನು ರಚಿಸಿ ಬೇಟೆಗೆ ಇಳಿದಿದ್ದರು.

ಇದನ್ನೂ ಓದಿ:ಇದು ಬೈಕ್​ ವೀಲಿಂಗ್​ ಅಲ್ಲ ಸೈಕಲ್ ವೀಲಿಂಗ್! ನಡುರಸ್ತೆಯಲ್ಲಿ ಯುವಕರ ಸೈಕಲ್ ವೀಲಿಂಗ್ ಕಂಡು ವಾಹನ ಸವಾರರು ಕಕ್ಕಾಬಿಕ್ಕಿ

ಹೊಸ ಟಾಸ್ಕ್ ಪೋರ್ಸ್ ಕಾರ್ಯ ವೈಖರಿ ಹೇಗಿರಲಿದೆ?

ವೀಲ್ಹಿಂಗ್ ಮಾಡೋರ ಮೇಲೆ ನಿಗಾ ಇಡಲು ಟಾಸ್ಕ್ ಪೋರ್ಸ್ ಟೀಂ ಕೆಲಸ ಮಾಡಲಿದೆ. ಇನ್ಸ್ಟ್ರಾಗ್ರಾಂ, ಫೇಸ್ ಬುಕ್ ಸೇರಿ ಹಲವು ಸೋಷಿಯಲ್ ಮೀಡಿಯಾ ಅಪ್ಲಿಕೇಶನ್​ಗಳ ಮೇಲೆ ಸದಾ ಕಣ್ಣಿಡಲಿದೆ ಈ ಟೀಂ. ವೀಲ್ಹಿಂಗ್ ಮಾಡಿ ಅಪ್ಲೋಡ್ ಮಾಡಿದ್ದೇ ತಡ ಟೀಂ ತನಿಖೆ ಚುರುಕು ಮಾಡಿ ಐಪಿ ಅಡ್ರಸ್ ಮೂಲಕ ವೀಲ್ಹಿಂಗ್ ಮಾಡುವವರನ್ನು ಕಂಡುಹಿಡಿಯಲಿದ್ದಾರೆ. ಬಳಿಕ ನೇರವಾಗಿ ಮನೆ ಬಾಗಿಲಿಗೆ ಬಂದು ಬೈಕ್ ಸಮೇತ ಅರೆಸ್ಟ್ ಮಾಡ್ತಾರೆ. ಟಾಸ್ಕ್ ಪೋರ್ಸ್ ಟೀಂ ರಚನೆ ಆದ ನಾಲ್ಕೇ ದಿನದಲ್ಲಿ ಪೊಲೀಸರು ಆರು ಜನರನ್ನು ಬಂಧಿಸಿದ್ದಾರೆ. ರಾತ್ರಿ ವೇಳೆಯೂ ಈ ಟೀಮ್ ಹೆಚ್ಚಿನ ನಿಗಾ ಇಡಲಿದೆ. ರಾತ್ರಿ ವೇಳೆ ನೈಸ್​ ರಸ್ತೆ ಹಾಗೂ ಫ್ಲೈ ಓವರ್​ಗಳ ಬಳಿ ಈ ಟೀಮ್ ಹದ್ದಿನ ಕಣ್ಣಿಡಲಿದೆ. ಇದರಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇಂತಹ  ಟಾಸ್ಕ್​ ಪೋರ್ಸ್​ ಕೆಲಸ ಮಾಡಿದರೆ ಇದಕ್ಕೆ ಕಡಿವಾಣ ಹಾಕಬಹುದು.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ಬೆಳಗಾವಿಯಲ್ಲಿ ಪ್ರತಿಷ್ಠಾಪಿಸಲಾಗಿದೆ ಹುಣಸೆ ಬೀಜದಿಂದ ತಯಾರಿಸಿದ ಗಣೇಶ
ಬೆಳಗಾವಿಯಲ್ಲಿ ಪ್ರತಿಷ್ಠಾಪಿಸಲಾಗಿದೆ ಹುಣಸೆ ಬೀಜದಿಂದ ತಯಾರಿಸಿದ ಗಣೇಶ
ಸುಬ್ರಹ್ಮಣ್ಯದಲ್ಲಿ ಬ್ಯಾಂಕ್ ಮ್ಯಾನೇಜರ್ ಕರಕೌಶಲದಲ್ಲಿ ಮೂಡಿದ ಗಣಪ!
ಸುಬ್ರಹ್ಮಣ್ಯದಲ್ಲಿ ಬ್ಯಾಂಕ್ ಮ್ಯಾನೇಜರ್ ಕರಕೌಶಲದಲ್ಲಿ ಮೂಡಿದ ಗಣಪ!