Bengaluru-Mysore Expressway: ರಾಂಗ್ ಸೈಡ್ನಲ್ಲಿ ಬರುವ ಕೆಎಸ್‌ಆರ್‌ಟಿಸಿ ಬಸ್ಗಳಿಂದ ಪ್ರಾಯಾಣಿಕರ ಜೀವಕ್ಕೆ ಕುತ್ತು, ಸುತ್ತೋಲೆ ಹೊರಡಿಸಿದ ನಿಗಮ
ಕೆಎಸ್‌ಆರ್‌ಟಿಸಿ ಚಾಲಕರು ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಒಂದು ವೇಳೆ ಚಾಲಕರು ನಿಯಮ ಉಲ್ಲಂಘಿಸಿದರೇ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನಿಗಮವು ಎಚ್ಚರಿಕೆ ನೀಡಿದೆ.
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ದೇಶದಲ್ಲೇ ಅತ್ಯುತ್ತಮ ಸಂಪರ್ಕ ಸಾರಿಗೆಯಾಗಿದೆ. ಹೊಸ ತಂತ್ರಜ್ಞಾನಗಳನ್ನು ಮತ್ತು ಬಸ್‌ಗಳು ಅಳವಡಿಸಿಕೊಳ್ಳುವ ಮುಖಾಂತರ ಸಾಕಷ್ಟು ಹೆಸರು ಮಾಡಿದೆ. ಜೊತೆಗೆ ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸುತ್ತಿರುತ್ತದೆ. ಈ ಹಿನ್ನೆಲೆ ನಿಗಮ ಸುತ್ತೋಲೆ ಹೊರಡಿಸಿದ್ದು, ಚಾಲಕರು ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಒಂದ ವೇಳೆ ಚಾಲಕರು ನಿಯಮ ಉಲ್ಲಂಘಿಸಿದರೇ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಹೌದು ಕೆಎಸ್‌ಆರ್‌ಟಿಸಿ ಬಸ್‌ಗಳು ಇತ್ತೀಚಿಗೆ ಉದ್ಘಾಟನೆಗೊಂಡ ಬೆಂಗಳೂರು-ಮೈಸೂರು ಚತುಷ್ಪತ ಹೆದ್ದಾರಿಯಲ್ಲಿ ತಪ್ಪಾದ ಲೈನ್ನಲ್ಲಿ ಸಂಚರಿಸುತ್ತಿವೆ. ಅಲ್ಲದೇ ಚಾಲಕರು ಪ್ರಯಾಣಿಕರನ್ನು ತಪ್ಪಾದ ಲೈನ್ನಲ್ಲಿ ಇಳಿಸುತ್ತಿದ್ದಾರೆ ಎಂದು ಸಾರ್ವಜನಿಕರು ಕೆಎಸ್ಆರ್ಟಿಸಿಗೆ ದೂರು ನೀಡಿದ ಹಿನ್ನೆಲೆ ನಿಗಮ ಸುತ್ತೋಲೆ ಹೊರಡಿಸಿದೆ.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿನ ಟೋಲ್ ಶುಲ್ಕವನ್ನು ತಪ್ಪಿಸಲು ಕೆಎಸ್‌ಆರ್‌ಟಿಸಿ ಬಸ್‌ಗಳು ಯು-ಟರ್ನ್ ತೆಗೆದುಕೊಂಡು ತಪ್ಪು ದಿಕ್ಕಿನಲ್ಲಿ ಬರುತ್ತಿವೆ ಎಂದು ಖಾಸಗಿ ವಾಹನ ಸವಾರರು ನಿಗಮಕ್ಕೆ ದೂರು ನೀಡಿದ್ದಾರೆ.
ಎಕ್ಸ್‌ಪ್ರೆಸ್‌ವೇನಲ್ಲಿರುವ ಕಣಿಮಿಣಿಕೆ ಟೋಲ್ ಪ್ಲಾಜಾ ಬಳಿ ಕೆಎಸ್‌ಆರ್‌ಟಿಸಿ ಬಸ್‌ಗಳು ವಿರುದ್ಧ ದಿಕ್ಕಿನಲ್ಲಿ ಬರುವುದನ್ನು ನಾವು ನೋಡಿದ್ದೇವೆ. ಎದರಿಗೆ ಖಾಸಗಿ ವಾಹನಗಳು ಬರುವುದನ್ನು ಕಂಡರೂ ಕೂಡ ಬಸ್ ಚಾಲಕರು ತಲೆಕೆಡಿಸಿಕೊಳ್ಳದೆ, ವಿರುದ್ಧ ದಿಕ್ಕಿನಿಂದ ಬರುತ್ತಾರೆ. ಇದರಿಂದ ಭೀಕರ ಅಪಘಾತಗಳು ಸಂಭವಿಸುವ ಸಾಧ್ಯತೆ ಇರುತ್ತದೆ ಎಂದು ಓರ್ವ ಪ್ರಯಾಣಿಕರು ಹೇಳಿದ್ದಾರೆ.
ನಮ್ಮ ಚಾಲಕರು ನಿಯಮಿತವಾಗಿ ಸಂವೇದನಾಶೀಲರಾಗಿರುತ್ತಾರೆ ಮತ್ತು ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣಗಳ ಸಂಖ್ಯೆಯು ಕಡಿಮೆಯಾಗಿದೆ, ಇದಕ್ಕಾಗಿ ನಿಗಮವು ಸಂಚಾರಿ ಪೊಲೀಸರಿಗೆ ಅಭಿನಂದಿಸುತ್ತೇವೆ. ತಪ್ಪು ದಾರಿಯಲ್ಲಿ ಬರುವ ಚಾಲಕರಿಗೆ ಸಂಚಾರ ನಿಯಮ ಪಾಲಿಸುವಂತೆ ಸುತ್ತೋಲೆ ಹೊರಡಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ ಅನ್ಬುಕುಮಾರ್ ತಿಳಿಸಿದ್ದಾರೆ.
ಕಳೆದ ತಿಂಗಳೂರು ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ರಾಂಗ್ ಸೈಡ್ನಿಂದ ಬಸ್ನಿಂದ ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದರು. ಈ ತಿಂಗಳ ಆರಂಭದಲ್ಲಿ ದೇವನಹಳ್ಳಿ ಹೆದ್ದಾರಿಯಲ್ಲಿ ಮತ್ತೊಂದು ಸಾವು ಸಂಭವಿಸಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:27 pm, Sun, 23 April 23