Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಹಿಂದೊಂದು ಮುಂದೊಂದು ಹುಡುಗಿಯರನ್ನು ಕೂರಿಸಿ ಬೈಕ್​​​ ವೀಲಿಂಗ್ ಮಾಡಿದ ಯುವಕ, ಇಲ್ಲಿದೆ ನೋಡಿ ವಿಡಿಯೋ

ಇಲ್ಲೊಬ್ಬ ಒಂದಲ್ಲ, ಇಬ್ಬರು ಹುಡುಗಿಯರನ್ನು ತನ್ನ ಬೈಕ್​​ನಲ್ಲಿ ಕೂರಿಸಿಕೊಂಡು ವೀಲಿಂಗ್​​ ಮಾಡಿದ್ದಾನೆ. ಇದಲ್ಲದೇ ಈ ಹುಡುಗಿಯರೂ ಕೂಡ ಯಾವುದೇ ಭಯ ಇಲ್ಲದೇ ವಿಡಿಯೋಗೆ ಪೋಸ್​​ ಕೊಡುತ್ತಿರುವುದನ್ನು ಕಾಣಬಹುದು.

Viral Video: ಹಿಂದೊಂದು ಮುಂದೊಂದು ಹುಡುಗಿಯರನ್ನು ಕೂರಿಸಿ ಬೈಕ್​​​ ವೀಲಿಂಗ್ ಮಾಡಿದ ಯುವಕ, ಇಲ್ಲಿದೆ ನೋಡಿ ವಿಡಿಯೋ
ಹುಡುಗಿಯರನ್ನು ಕೂರಿಸಿ ಬೈಕ್​​​ ವೀಲಿಂಗ್Image Credit source: Twitter
Follow us
ಅಕ್ಷತಾ ವರ್ಕಾಡಿ
|

Updated on:Apr 01, 2023 | 3:59 PM

ಇತ್ತೀಚಿನ ದಿನಗಳಲ್ಲಿ ಬೈಕ್​​ ವೀಲಿಂಗ್  ಹೆಚ್ಚಾಗಿ ಕಂಡುಬರುತ್ತಿದ್ದು, ತಮ್ಮ ಜೀವದ ಆಸೆಯನ್ನು ತೊರೆದು ಇಂತಹ ಕೆಟ್ಟ ಸಾಹಸಕ್ಕೆ ಇಳಿದು ಪ್ರಾಣ ಕಳೆದುಕೊಂಡ ಅದೆಷ್ಟೋ ಪ್ರಕರಣಗಳಿವೆ. ಆದರೆ ಇಲ್ಲೊಬ್ಬ ಒಂದಲ್ಲ, ಇಬ್ಬರು ಹುಡುಗಿಯರನ್ನು ತನ್ನ ಬೈಕ್​​ನಲ್ಲಿ ಕೂರಿಸಿಕೊಂಡು ವೀಲಿಂಗ್​​ ಮಾಡಿದ್ದಾನೆ. ಇದಲ್ಲದೇ ಈ ಹುಡುಗಿಯರೂ ಕೂಡ ಯಾವುದೇ ಭಯ ಇಲ್ಲದೇ ವಿಡಿಯೋಗೆ ಪೋಸ್​​ ಕೊಡುತ್ತಿರುವುದನ್ನು ಕಾಣಬಹುದು. ಈ ವಿಡಿಯೋ ಇದೀಗಾ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ. ಆ ವಿಡಿಯೋ ಇಲ್ಲಿದೆ ನೋಡಿ.

ಈ ವಿಡಿಯೋವನ್ನು ಟ್ವಿಟರ್​​ ಖಾತೆಯಲ್ಲಿ @PotholeWarriors ಬಳಕೆದಾರರು ಹಂಚಿಕೊಂಡಿದ್ದು, ಈ ಟ್ವೀಟ್​​ಗೆ ಮುಂಬೈನ ಟ್ರಾಫಿಕ್​​​ ಪೊಲೀಸರ ಟ್ವಿಟರ್​​​ ಖಾತೆಯಿಂದ  ರೀಟ್ವೀಟ್​​ ಮಾಡಲಾಗಿದೆ. ಈ ವಿಡಿಯೋದಲ್ಲಿರುವ ಮೂರು ಜನರ ವಿರುದ್ಧ ಇದೀಗಾಗಲೇ ಕೇಸು ದಾಖಲಾಗಿದೆ. ಈ ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ. ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಪೊಲೀಸರು ಈ ಮೂವರ ವಿರುದ್ಧ ಐಪಿಸಿಯ ಸೆಕ್ಷನ್ 279, 336 ಮತ್ತು ಮೋಟಾರು ವಾಹನ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅದೇ ಎಫ್‌ಐಆರ್‌ನಲ್ಲಿ ಅವರ ವಿರುದ್ಧ ಐಪಿಸಿ ಸೆಕ್ಷನ್ 114 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ: ವಿಶ್ವ ದಾಖಲೆ ನಿರ್ಮಿಸಲು ಹಿಮದ ಮೇಲೆ ವಾಸ ಮಾಡುತ್ತಿರುವ ಮಹಿಳೆ

ಮುಂಬೈ ಪೊಲೀಸರು ಮತ್ತೊಂದು ಟ್ವೀಟ್‌ನಲ್ಲಿ, “ಕೇವಲ ದಂಡ ಮಾತ್ರವಲ್ಲ, ಈ ವೀಡಿಯೊದಲ್ಲಿ ಕಂಡುಬರುವ ಆರೋಪಿಗಳ ವಿರುದ್ಧ ಪ್ರಕರಣವನ್ನೂ ದಾಖಲಿಸಲಾಗಿದೆ ಮತ್ತು ಅವರು ಕಾನೂನು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ” ಎಂದು ಉಲ್ಲೇಖಿಸಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 3:57 pm, Sat, 1 April 23

ಸಣ್ಣ ವಯಸ್ಸಲ್ಲಿ ಮಾಡಿದ್ದ ಆಣೆ: ಕೊಟ್ಟ ಮಾತು ನಡೆಸಿಕೊಟ್ಟ ಧ್ರುವ ಸರ್ಜಾ
ಸಣ್ಣ ವಯಸ್ಸಲ್ಲಿ ಮಾಡಿದ್ದ ಆಣೆ: ಕೊಟ್ಟ ಮಾತು ನಡೆಸಿಕೊಟ್ಟ ಧ್ರುವ ಸರ್ಜಾ
ಹೋಳಿ ಹಬ್ಬದಂದೇ ಹರಿಯಾಣದ ಬಿಜೆಪಿ ನಾಯಕನ ಹತ್ಯೆ; ಸಿಸಿಟಿವಿ ವಿಡಿಯೋ ವೈರಲ್
ಹೋಳಿ ಹಬ್ಬದಂದೇ ಹರಿಯಾಣದ ಬಿಜೆಪಿ ನಾಯಕನ ಹತ್ಯೆ; ಸಿಸಿಟಿವಿ ವಿಡಿಯೋ ವೈರಲ್
ಅಮೃತಸರ ದೇವಾಲಯದ ಮೇಲಿನ ಗ್ರೆನೇಡ್ ದಾಳಿ ಸಿಸಿಟಿವಿಯಲ್ಲಿ ಸೆರೆ
ಅಮೃತಸರ ದೇವಾಲಯದ ಮೇಲಿನ ಗ್ರೆನೇಡ್ ದಾಳಿ ಸಿಸಿಟಿವಿಯಲ್ಲಿ ಸೆರೆ
ರಸ್ತೆಯಲ್ಲಿ ಮಹಿಳೆ, ಮಗುವಿನ ಮೇಲೆ ಬೀದಿ ಹಸು ಅಟ್ಯಾಕ್; ವಿಡಿಯೋ ಇಲ್ಲಿದೆ
ರಸ್ತೆಯಲ್ಲಿ ಮಹಿಳೆ, ಮಗುವಿನ ಮೇಲೆ ಬೀದಿ ಹಸು ಅಟ್ಯಾಕ್; ವಿಡಿಯೋ ಇಲ್ಲಿದೆ
ಯುವತಿಯರೊಂದಿಗೆ ಮಕ್ಕಳನ್ನು ಹೆಗಲ ಮೇಲೆ ಹೊತ್ತು ಕುಣಿದ ಗೃಹಿಣಿಯರು
ಯುವತಿಯರೊಂದಿಗೆ ಮಕ್ಕಳನ್ನು ಹೆಗಲ ಮೇಲೆ ಹೊತ್ತು ಕುಣಿದ ಗೃಹಿಣಿಯರು
ಕುಂಭಮೇಳ ಎಫೆಕ್ಟ್: ನಾಗಾಸಾಧು ವೇಷ ಹಾಕಿಕೊಂಡು ಹೋಳಿ ಆಚರಣೆ
ಕುಂಭಮೇಳ ಎಫೆಕ್ಟ್: ನಾಗಾಸಾಧು ವೇಷ ಹಾಕಿಕೊಂಡು ಹೋಳಿ ಆಚರಣೆ
ಸಾಯುವ ಮುನ್ನ ದಿವ್ಯಾ ಕುಮಾರ್ 4 ಬಾಲ್​ನಲ್ಲಿ 20 ರನ್ ಬಾರಿಸಿದ ವಿಡಿಯೋ
ಸಾಯುವ ಮುನ್ನ ದಿವ್ಯಾ ಕುಮಾರ್ 4 ಬಾಲ್​ನಲ್ಲಿ 20 ರನ್ ಬಾರಿಸಿದ ವಿಡಿಯೋ
ಮಾರ್ಚ್ 8ರಂದು ನಾನು ಮತ್ತು ಸಿಎಂ ಇಬ್ಬರೂ ಲಭ್ಯರಿರಲಿಲ್ಲ: ಶಿವಕುಮಾರ್
ಮಾರ್ಚ್ 8ರಂದು ನಾನು ಮತ್ತು ಸಿಎಂ ಇಬ್ಬರೂ ಲಭ್ಯರಿರಲಿಲ್ಲ: ಶಿವಕುಮಾರ್
ಬೆಂಗಳೂರಿನಲ್ಲಿ ಕಸ ವಿಲೇವಾರಿ ಸಮಸ್ಯೆ ಒಪ್ಪಿಕೊಂಡ ಬಿಬಿಎಂಪಿ ಕಮಿಷನರ್
ಬೆಂಗಳೂರಿನಲ್ಲಿ ಕಸ ವಿಲೇವಾರಿ ಸಮಸ್ಯೆ ಒಪ್ಪಿಕೊಂಡ ಬಿಬಿಎಂಪಿ ಕಮಿಷನರ್
ಹೋಳಿ ವೇಳೆ ಪೊಲೀಸ್ ಅಧಿಕಾರಿಗೆ ಡ್ಯಾನ್ಸ್ ಮಾಡಲು ತೇಜ್ ಪ್ರತಾಪ್ ಒತ್ತಾಯ
ಹೋಳಿ ವೇಳೆ ಪೊಲೀಸ್ ಅಧಿಕಾರಿಗೆ ಡ್ಯಾನ್ಸ್ ಮಾಡಲು ತೇಜ್ ಪ್ರತಾಪ್ ಒತ್ತಾಯ