ಇದು ಬೈಕ್ ವೀಲಿಂಗ್ ಅಲ್ಲ ಸೈಕಲ್ ವೀಲಿಂಗ್! ನಡುರಸ್ತೆಯಲ್ಲಿ ಯುವಕರ ಸೈಕಲ್ ವೀಲಿಂಗ್ ಕಂಡು ವಾಹನ ಸವಾರರು ಕಕ್ಕಾಬಿಕ್ಕಿ
ಯುವಕರು ಸೈಕಲ್ನಲ್ಲಿ ವೀಲಿಂಗ್ ಮಾಡಿ ಸಾರ್ವಜನಿಕರ ಆತಂಕಕ್ಕೆ ಕಾರಣರಾಗಿದ್ದಾರೆ. ಸದ್ಯ ಈ ವೀಲಿಂಗ್ ವಿಡಿಯೋಗಳು ವೈರಲ್ ಆಗಿದೆ.
ಕೊಪ್ಪಳ: ಜಿಲ್ಲೆಯ ಗಂಗಾವತಿ ನಗರದ ಬುದ್ದ ಸರ್ಕಲ್ನ ಮುಖ್ಯರಸ್ತೆಯಲ್ಲಿ ಸೈಕಲ್ಗಳ ಮೂಲಕ ಯುವಕರು ವೀಲಿಂಗ್ ಮಾಡುತ್ತಿದ್ದು, ವಾಹನ ಸವಾರರಿಗೆ ಕಿರಿ ಕಿರಿ ಉಂಟುಮಾಡಿದೆ. ಇತ್ತೀಚೆಗೆ ನಡು ರಸ್ತೆಯಲ್ಲಿ ಯುವಕರು ಬೈಕ್ನಲ್ಲಿ ವೀಲಿಂಗ್(wheeling) ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದಾರೆ ಎಂಬ ಬಗ್ಗೆ ನಾವು ಕೇಳಿದ್ದೇವು. ಆದರೆ ಇಲ್ಲಿ ಯುವಕರು ಸೈಕಲ್ನಲ್ಲಿ ವೀಲಿಂಗ್ ಮಾಡಿ ಸಾರ್ವಜನಿಕರ ಆತಂಕಕ್ಕೆ ಕಾರಣರಾಗಿದ್ದಾರೆ. ಸದ್ಯ ಈ ವೀಲಿಂಗ್ ವಿಡಿಯೋಗಳು ವೈರಲ್ ಆಗಿದೆ.
ನಗರದಲ್ಲಿ ಸೈಕಲ್ ವೀಲಿಂಗ್ ಮಾಡುತ್ತಿರುವುದು ಗಮನಕ್ಕೆ ಬಂದಿದೆ.ಯಾರೋ ಒಂದಿದಬ್ಬರು ಮಾಡಿರಬಹುದು, ನಮ್ಮ ಪೊಲೀಸರು ಟ್ರಾಫಿಕ್ನಲ್ಲಿ ಸರಿಯಾದ ಕೆಲಸ ಮಾಡುತ್ತಿದ್ದಾರೆ. ಕೆಲವೊಂದು ಕಡೆ ಕ್ರೇಜ್ಗಾಗಿ ಹುಡಗರು ಈ ರೀತಿ ಮಾಡುತ್ತಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಗಂಗಾವತಿ ಸಂಚಾರಿ ಠಾಣೆ ಸಬ್ಇ ನ್ಸ್‌ಪೆಕ್ಟರ್ ಪುಂಡಪ್ಪ ಟಿವಿ9 ಡಿಜಿಟಲ್ಗೆ ತಿಳಿಸಿದ್ದಾರೆ.
ನಗರದಲ್ಲಿ ವೀಲಿಂಗ್ ಹಾವಳಿ ಹೆಚ್ಚಾಗಿದೆ. ಕೆಲ ಕಡೆ ಬೈಕ್ ವೀಲಿಂಗ್ ಮಾಡಿದರೆ, ಕೆಲ ಕಡೆ ಸೈಕಲ್ ಮೂಲಕ ನಡು ರಸ್ತೆಯಲ್ಲಿ ವೀಲಿಂಗ್ ಮಾಡುತ್ತಿದ್ದಾರೆ. ಇದರಿಂದ ಕೆಲವೊಂದು ಸಲ ಅಪಘಾತ ಸಂಭಿವಿಸುತ್ತಿವೆ. ಪೊಲೀಸರು ಇದಕ್ಕೆ ಕಡಿವಾಣ ಹಾಕಬೇಕು ಎಂದು ಕರವೇ ಹೋರಾಟಗಾರರಾದ ಪಂಪಣ್ಣ ನಾಯಕ್ ಹೇಳಿದ್ದಾರೆ.
ಬೆಂಗಳೂರಲ್ಲಿ ಮುಂಜಾನೆಯೇ ವೀಲಿಂಗ್ ಹಾವಳಿ ಬೆಳ್ಳಂ ಬೆಳಗ್ಗೆ ಬೆಂಗಳೂರಲ್ಲಿ ವೀಲಿಂಗ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ನಾಗರ ಬಾವಿ ರಿಂಗ್ ರೋಡ್ನಲ್ಲಿ ನೂರಾರು ಬೈಕ್ ಸವಾರರ ಮಧ್ಯೆ ಕೆಲವು ಯುವಕರು ಗುಂಪು ಕಟ್ಟಿಕೊಂಡು ವೀಲಿಂಗ್ ಮಾಡುತ್ತಿದ್ದು, ರಸ್ತೆಯಲ್ಲಿ ಓಡಾಡುವುದಕ್ಕೆ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕೆಟಿಎಂ ಹಾಗೂ ಡಿಯೋ ಬೈಕ್ನಲ್ಲಿ ಯುವಕರು ವೀಲಿಂಗ್ ಮಾಡುತಿದ್ದು, ಇದರಿಂದ ಬೇಸತ್ತ ಜನರು ಮೊಬೈಲ್ನಲ್ಲಿ ವೀಲಿಂಗ್ ದೃಶ್ಯ ಸೆರೆ ಹಿಡಿದು, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೆ ವೀಲಿಂಗ್ ಹಾವಳಿಗೆ ಕಡಿವಾಣ ಹಾಕುವಂತೆ ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಅಷ್ಟೇ ಅಲ್ಲ ಅನೇಕ ಕಡೆಗಳಲ್ಲಿ ಈ ರೀತಿ ಬೈಕ್ಗಳಲ್ಲಿ ವೀಲಿಂಗ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಅಷ್ಟೇ ಅಲ್ಲ ಇದರಿಂದ ಅನೇಕ ಅನಾಹುತಗಳು ಕೂಡ ಸಂಭವಿಸಿದೆ.
ಇದನ್ನೂ ಓದಿ:
ಬೆಂಗಳೂರಲ್ಲಿ ಮುಂಜಾನೆಯೇ ವೀಲಿಂಗ್ ಹಾವಳಿ; ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್
ವೀಕೆಂಡ್ ಮಸ್ತಿ ಅಂತಾ ರಸ್ತೆಯಲ್ಲಿ ವೀಲಿಂಗ್: ಮೂರು ಪುಂಡರು ಅರೆಸ್ಟ್
Published On - 1:31 pm, Wed, 8 September 21