ವೀಕೆಂಡ್ ಮಸ್ತಿ ಅಂತಾ ರಸ್ತೆಯಲ್ಲಿ ವೀಲಿಂಗ್​: ಮೂರು ಪುಂಡರು ಅರೆಸ್ಟ್​

ವೀಕೆಂಡ್ ಮಸ್ತಿ ಅಂತಾ ರಸ್ತೆಯಲ್ಲಿ ವೀಲಿಂಗ್​: ಮೂರು ಪುಂಡರು ಅರೆಸ್ಟ್​

ಬೆಂಗಳೂರು: ಏರ್​ಪೋರ್ಟ್​ ರಸ್ತೆಯಲ್ಲಿ‌ ವೀಲಿಂಗ್ ಮಾಡ್ತಿದ್ದ ಪುಂಡರನ್ನು ಚಿಕ್ಕಜಾಲ‌ ಪೊಲೀಸರು ಬಂಧಿಸಿದ್ದಾರೆ. ವಸೀಂ ಬೇಗ್, ಸೈಪ್ ಉಲ್ಲಾಖಾನ್, ಮತ್ತು ಶ್ರೀನಾಥ್ ರೆಡ್ಡಿ‌ ಬಂಧಿತ ಆರೋಪಿಗಳು.

ಇಂದು ವೀಕೆಂಡ್ ಅಂತಾ ಏರ್​ಪೋರ್ಟ್ ರಸ್ತೆಯಲ್ಲಿ ತಮ್ಮ ಬೈಕ್​ಗಳಲ್ಲಿ ಮೂವರು ಮಹಾಶಯರು ವೀಲಿಂಗ್ ಮಾಡಿಕೊಂಡು ಬರುತ್ತಿದ್ದರು. ಇದನ್ನು ಗಮನಿಸಿದ ಚಿಕ್ಕಜಾಲ‌ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಜೊತೆಗೆ, ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

Published On - 4:39 pm, Sun, 6 September 20

Click on your DTH Provider to Add TV9 Kannada