ವಿರೇನ್ ಖನ್ನಾನ ವಿಚಾರಣೆ ಶುರು ಮಾಡಿದ ಸಿಸಿಬಿ ಅಧಿಕಾರಿಗಳು

  • Publish Date - 9:15 pm, Sat, 5 September 20
ವಿರೇನ್ ಖನ್ನಾನ ವಿಚಾರಣೆ ಶುರು ಮಾಡಿದ ಸಿಸಿಬಿ ಅಧಿಕಾರಿಗಳು

ಸ್ಯಾಂಡಲ್​ವುಡ್​ಗೆ ಡ್ರಗ್ಸ್ ಜಾಲದ ನಂಟು ಪ್ರಕರಣದಲ್ಲಿ ಪ್ರಮುಖ ಆರೋಪಿಗಳಲ್ಲೊಬ್ಬನೆಂದು ಪರಿಗಣಿಸಲಾಗಿರುವ ವಿರೇನ್ ಖನ್ನಾನ ನಾಲ್ಕು ದಿನಗಳ ಕಸ್ಟಡಿಗ ಪಡೆದಿರುವ ಸಿಸಿಬಿ ಅಧಿಕಾರಿಗಳು ಅವನನ್ನು ಇಂದು ಕಚೇರಿಗೆ ಕರೆತಂದು ವಿಚಾರಣೆ ಆರಂಭಿಸಿದರು.

ದೆಹಲಿ ಮೂಲದ ಖನ್ನಾ ಡ್ರಗ್ಸ್‌ ಪಾರ್ಟಿಗಳನ್ನ ಆಯೋಜನೆ ಮಾಡುತ್ತಿದ್ದನೆಂದು ಆರೋಪಿಸಲಾಗಿದೆ. ಶುಕ್ರವಾರವಾರದಂದು ಸಿಸಿಬಿಯ ಇಬ್ಬರು ಇನ್ಸ್​ಪೆಕ್ಟರ್​ಗಳು ಆತನನ್ನು ದೆಹಲಿಯಲ್ಲಿ ಬಂಧಿಸಿ ಬೆಂಗಳೂರಿಗೆ ಕರೆತಂದರು.

ಖನ್ನಾನನ್ನು ಸಿಸಿಬಿ ಕಚೇರಿಗೆ ಕರೆತಂದಾಗ ಅವನ ಮುಖದಲ್ಲಿ ಆತಂಕವಾಗಲೀ, ಭಯವಾಗಲೀ ಕಾಣಿಸಲಿಲ್ಲ. ಪೊಲೀಸರ ವಶದಲ್ಲಿದ್ರೂ ಖನ್ನಾ ದರ್ಪದಿಂದ ವರ್ತಿಸುತ್ತಿದ್ದ ಮತ್ತು ಮಾಧ್ಯಮದವರ ಮೇಲೆ ಕೂಗಾಡಿದ. ವಿಚಾರಣೆ ಸಂದರ್ಭದಲ್ಲೂ ಅವನು ಬಾಯಿ ಬಿಚ್ಚುತ್ತಿಲ್ಲವೆಂದು ಮೂಲಗಳಿಂದ ಗೊತ್ತಾಗಿದೆ.

Click on your DTH Provider to Add TV9 Kannada