ಕೊಪ್ಪಳ: ಶವಸಂಸ್ಕಾರಕ್ಕೆ ರುದ್ರಭೂಮಿ ಇಲ್ಲದೆ ದಲಿತರ ಪರದಾಟ

Koppal News: ಶವಸಂಸ್ಕಾರಕ್ಕೆ ರುದ್ರಭೂಮಿ ಇಲ್ಲದೆ ದಲಿತರು ಪರದಾಟ ನಡೆಸುತ್ತಿದ್ದಾರೆ. ಹಳ್ಳದಲ್ಲಿ ಶವಸಂಸ್ಕಾರ ಮಾಡುತ್ತಿದ್ದಾರೆ. ಹಲವಾರು ಸಲ ಅಧಿಕಾರಿ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ಈ ವಿಚಾರ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದಲಿತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಪ್ಪಳ: ಶವಸಂಸ್ಕಾರಕ್ಕೆ ರುದ್ರಭೂಮಿ ಇಲ್ಲದೆ ದಲಿತರ ಪರದಾಟ
ಶವಸಂಸ್ಕಾರಕ್ಕೆ ರುದ್ರಭೂಮಿ ಇಲ್ಲದೆ ದಲಿತರ ಪರದಾಟ

ಕೊಪ್ಪಳ: ಶವ ಸಂಸ್ಕಾರಕ್ಕೆ ರುದ್ರಭೂಮಿ ಇಲ್ಲದೆ ದಲಿತರ ಪರದಾಡಿದ ಘಟನೆ ಕೊಪ್ಪಳ ತಾಲೂಕಿನ ಅಳವಂಡಿಯ ಅಂಬೇಡ್ಕರ್ ಕಾಲೋನಿಯಲ್ಲಿ ನಡೆದಿದೆ. ದಲಿತರಿಗೆ ರುದ್ರಭೂಮಿ ಇಲ್ಲದ್ದಕ್ಕೆ ಹಳ್ಳದಲ್ಲಿ ಶವಸಂಸ್ಕಾರ ಮಾಡಲಾಗಿದೆ. ಅಷ್ಟೇ ಅಲ್ಲದೆ, ಶವಸಂಸ್ಕಾರಕ್ಕೆ ತೆರಳುವ ರಸ್ತೆ ಸಂಪೂರ್ಣ ಹಾಳಾದ ಹಿನ್ನೆಲೆ ರಸ್ತೆ ಗುಂಡಿಯಲ್ಲಿ ಟ್ರ್ಯಾಕ್ಟರ್​​ ಸಿಲುಕಿ ಜನರು ಪರದಾಡಿದ್ದಾರೆ. ಸಮಸ್ಯೆ ಬಗೆಹರಿಸದ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶವಸಂಸ್ಕಾರಕ್ಕೆ ರುದ್ರಭೂಮಿ ಇಲ್ಲದೆ ದಲಿತರು ಪರದಾಟ ನಡೆಸುತ್ತಿದ್ದಾರೆ. ಹಳ್ಳದಲ್ಲಿ ಶವಸಂಸ್ಕಾರ ಮಾಡುತ್ತಿದ್ದಾರೆ. ಹಲವಾರು ಸಲ ಅಧಿಕಾರಿ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ಈ ವಿಚಾರ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದಲಿತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗದಗ: ಅನ್ನದಾತರ ಆಕ್ರೋಶ
ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿದ ಘಟನೆ ಗದಗ ಜಿಲ್ಲಾಧಿಕಾರಿ ಕಚೇರಿ ಬಳಿ ನಡೆದಿದೆ. ಬೆಂಬಲ ಬೆಲೆ, ಬೆಳೆವಿಮೆ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿದ್ದಾರೆ. ಗದಗದಲ್ಲಿ ಜಿಲ್ಲಾಧಿಕಾರಿಗಳ ವಿರುದ್ಧ ಅನ್ನದಾತರು ಆಕ್ರೋಶ ಹೊರಹಾಕಿದ್ದಾರೆ. ಡಿಸಿ ಕಚೇರಿ ಬಳಿ ಭಾರತೀಯ ಕಿಸಾನ್ ಸಂಘದಿಂದ ಧರಣಿ ನಡೆಸಲಾಗಿದೆ. 2 ಗಂಟೆಗಳ ಕಾಲ ಪ್ರತಿಭಟನೆ ಮಾಡಿದರೂ ಜಿಲ್ಲಾಧಿಕಾರಿ ಸ್ಪಂದಿಸಿಲ್ಲ. ಡಿಸಿ ವರ್ತನೆ ಖಂಡಿಸಿ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ಮಾಡಲಾಗಿದೆ. ಗದಗ-ಹುಬ್ಬಳ್ಳಿ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆದಿದೆ. ಇದೇ ವೇಳೆ ಪೊಲೀಸರು, ರೈತರ ನಡುವೆ ಮಾತಿನಚಕಮಕಿ ಏರ್ಪಟ್ಟಿದೆ. ಗದಗ ಜಿಲ್ಲಾಧಿಕಾರಿ ಎಂ ಸುಂದರೇಶ ಬಾಬು ವಿರುದ್ಧ ರೈತರ ಆಕ್ರೋಶ ಹೊರಹಾಕಿದ್ದಾರೆ. ರೈತರು ರೊಚ್ಚಿಗೆದ್ದ ಕೂಡಲೇ ಎಸಿ ಕಚೇರಿಯಿಂದ ಡಿಸಿ ಆಗಮಿಸಿದ್ದಾರೆ.

ಇದನ್ನೂ ಓದಿ: ನೆರವಿಗೆ ಕೋರಿಕೆ: ಅಪಘಾತಕ್ಕೆ ತುತ್ತಾದ 5ನೇ ತರಗತಿ ವಿದ್ಯಾರ್ಥಿಯ ಚಿಕಿತ್ಸೆಗೆ ಕೊಪ್ಪಳದ ಶಿಕ್ಷಕ ವೃಂದ ನೆರವಾಗಿದೆ, ನೀವೂ ಸಹಾಯ ಮಾಡಿ

ಇದನ್ನೂ ಓದಿ: Monkey Trouble: ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ‘ಮಂಗ’ಗಳದ್ದೇ ಕಾರ್ಬಾರ್, ವಾನರರ ಉಪಟಳಕ್ಕೆ ರೋಗಿಗಳ ಪರದಾಟ

Read Full Article

Click on your DTH Provider to Add TV9 Kannada